ಹೊಸ ಹೊಸ ಡಾನ್ಸ್ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಾಕುತ್ತಾ ಅಭಿಮಾನಿಗಳನ್ನು ಸದಾ ರಂಜಿಸುತ್ತಿರುವ ರಾಧಿಕಾ, ಹೊಸದೊಂದು ವಿಡಿಯೋ ಹಾಕಿ ಮತ್ತೆ ಸಂಚಲನ ಸೃಷ್ಟಿಸಿದ್ದಾರೆ. ಈ ಬಾರಿ ಅವರು ಯಾವುದೇ ಡಾನ್ಸ್ ವಿಡಿಯೋ ಹಾಕಿಲ್ಲ. ಬ್ಯುಟಿ ಟಿಪ್ಸ್ ಕೂಡ ಕೊಟ್ಟಿಲ್ಲ. “ನಾನು ರಾಧಿಕಾ ಕುಮಾರಸ್ವಾಮಿ’… ಎಂದು ಆರಂಭಿಸಿ, ಅಧಿಕೃತ ಫೇಸ್ ಬುಕ್ ಪೇಜ್ ತೆರೆಯುವುದಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ನಾನು ಜ್ಯೂನಿಯರ್ ಪುನೀತ್ ರಾಜ್ ಕುಮಾರ್ ಅಲ್ಲ : ಮಾರಕಾಸ್ತ್ರ ಹೀರೋ ಹೇಳಿಕೆ
ಈವರೆಗೂ ರಾಧಿಕಾ ಅವರ ಹೆಸರಿನಲ್ಲಿ ಹತ್ತಾರು ಫೇಸ್ ಬುಕ್ ಪೇಜ್ ಗಳನ್ನು ಅಭಿಮಾನಿಗಳು ಕ್ರಿಯೇಟ್ ಮಾಡಿದ್ದಾರೆ. ಆದರೆ, ಅವರು ಅಧಿಕೃತವಾದ ಫೇಸ್ ಬುಕ್ ಪೇಜ್ ಹೊಂದಿರಲಿಲ್ಲ. ಈಗ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಲು ಪೇಜ್ ಅನ್ನು ತೆರೆಯುತ್ತಿರುವುದಾಗಿ ಹೇಳಿದ್ದಾರೆ. ಈ ಮೂಲಕ ಅವರು ತಮ್ಮ ಬಗ್ಗೆ ಮಾಹಿತಿಗಳನ್ನು ಇಲ್ಲಿಯೇ ಹಂಚುತ್ತಾ ಹೋಗುತ್ತಾರಂತೆ. ಇದನ್ನೂ ಓದಿ : ವಿವಾದ ಇಲ್ಲದೇ ಸಿನಿಮಾ ರಿಲೀಸ್ ಮಾಡಲ್ಲವಾ ಸಂಜಯ್ ಲೀಲಾ ಬನ್ಸಾಲಿ? : ಗಂಗೂಬಾಯಿ ಮೇಲೆ ಮತ್ತೊಂದು ಕೇಸ್
ಅನೇಕ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ರಾಧಿಕಾ, ಆನಂತರ ಕೆಲ ವರ್ಷಗಳ ಕಾಲ ಸಿನಿಮಾ ರಂಗದಿಂದ ದೂರವಾದರು. ಮತ್ತೆ ದಮಯಂತಿ ಚಿತ್ರದ ಮೂಲಕ ಕಮ್ ಬ್ಯಾಕ್ ಆದರು. ಸ್ವತಃ ಚಿತ್ರ ನಿರ್ಮಾಣಕ್ಕೂ ಇಳಿದರು. ಅರ್ಜುನ್ ಸರ್ಜಾ ಜತೆ ಮತ್ತೊಂದು ಸಿನಿಮಾ ಮಾಡಿದರು. ಈಗ ಮತ್ತಷ್ಟು ಚಿತ್ರಗಳನ್ನು ಮಾಡುವ ತಯಾರಿ ಮಾಡಿಕೊಂಡಿದ್ದಾರಂತೆ. ಹಾಗಾಗಿ ಅವೆಲ್ಲ ವಿಷಯಗಳನ್ನು ಅಭಿಮಾನಿಗಳ ಜತೆ ಹಂಚಿಕೊಳ್ಳಲು ಫೇಸ್ ಬುಕ್ ವೇದಿಕೆಯನ್ನು ರಾಧಿಕಾ ಬಳಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ : ನಟ ಚೇತನ್‌ಗೆ 14 ದಿನ ನ್ಯಾಯಾಂಗ ಬಂಧನ
ಒಂದು ಮಗುವಿನ ತಾಯಿಯಾದ ನಂತರವೂ ಅವರು ಗ್ಲಾಮರ್ ಕಾಪಾಡಿಕೊಂಡು ಬಂದಿದ್ದಾರೆ. ಫಿಟ್ನೆಸ್ ಬಗ್ಗೆ ಸಾಕಷ್ಟು ಕಾಳಜಿ ತಗೆದುಕೊಳ್ಳುತ್ತಾರೆ. ಅದರಲ್ಲೂ ಹೊಸ ಹೊಸ ಹಾಡುಗಳಿಗೆ ಸಖತ್ ಸ್ಟೆಪ್ ಕೂಡ ಹಾಕುತ್ತಾರೆ. ಇದೆಲ್ಲವೂ ಸಾಧ್ಯವಾಗಿದ್ದು, ಜೀವನದ ಮೇಲಿನ ಪ್ರೀತಿಗಾಗಿ ಅಂತಾರೆ ರಾಧಿಕಾ.