ಹಾವೇರಿ: ದೇಶ ದ್ರೋಹಿಗಳು ಹಾಗೂ ದೇಶ ವಿರೋಧಿಗಳು ನನ್ನನ್ನು ಹತ್ಯೆ ಮಾಡಲು ಟಾರ್ಗೆಟ್ ಮಾಡಿರುವುದಕ್ಕೆ ಹೆಮ್ಮೆ ಅನಿಸುತ್ತದೆ ಎಂದು ಖ್ಯಾತ ವಾಗ್ಮಿ, ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ನಗರದ ವಿವೇಕಾನಂದ ಆಶ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶವನ್ನು ಅಸ್ಥಿರಗೊಳಿಸುವಂತ ಹಾಗೂ ತುಂಡು, ತುಂಡು ಮಾಡುವಂತಹ ವ್ಯಕ್ತಿಗಳು ನನ್ನನ್ನು ಕೊಲೆ ಮಾಡುತ್ತಾರೆ ಎಂಬುದು ಆಶ್ಚರ್ಯಕರ. ಇಂದು ಪೊಲೀಸ್ ಇಲಾಖೆ ಸೂಕ್ಷ್ಮವಾಗಿ ಆರು ಮಂದಿಯನ್ನು ಬಂಧಿಸಿದ್ದಾರೆ. ಅಂದು ನಡೆದ ಘಟನೆಯನ್ನ ಪೊಲೀಸ್ ಕಮಿಷನರ್ ಗೆ ತಿಳಿಸಿದ್ದೆ ಎಂದರು.
ದೇಶದಲ್ಲಿ ಶಾಂತಿ, ಸುವ್ಯವಸ್ಥೆ ತೆಗೆದುಕೊಂಡು ಹೋಗುವಂತದ್ದು ಹಿಂದೂ ಸಮಾಜ ಪರವಾಗಿ ಹೋರಾಟ ಮಾಡಿದರೆ ಕೊಲೆ ಬೆದರಿಕೆಗಳು ಹೆಚ್ಚಾಗುತ್ತಿವೆ. ಇಂಥವರನ್ನು ಸರ್ಕಾರ ಸೂಕ್ತವಾಗಿ ವಿಚಾರಿಸಿಕೊಳ್ಳಬೇಕು. ದೇಶದಲ್ಲಿ ಇಂತಹ ಕೊಲೆಗಾರರು ಎಸ್‍ಡಿಪಿಐ ಹಾಗೂ ಕರ್ನಾಟಕದಲ್ಲಿ ಐಸಿಸ್ ನಂತಹ ಉಗ್ರ ಸಂಘಟನೆ ನಿರ್ಮಾಣ ಮಾಡಬೇಕು ಎಂಬ ಕನಸು ಇದೆ. ಆದರೆ ಇಂತಹ ಸಂಘಟನೆಗಳು ಹತ್ತಿಕ್ಕಲು ನಾವು ಅಡ್ಡಗಾಲು ಆಗಿದ್ದೇವೆ ಎಂದರು. ಇದನ್ನೂ ಓದಿ: ಸಿಎಎ ಪರ ಬ್ಯಾಟಿಂಗ್ ಮಾಡಿದ್ದಕ್ಕೆ ಟಾರ್ಗೆಟ್ – ಸೂಲಿಬೆಲೆ, ತೇಜಸ್ವಿ ಕೊಲೆಗೆ ಸ್ಕೆಚ್
ನಮ್ಮ ಅಕ್ಕನಿಗೆ ಕಲ್ಲು ಬಿದ್ದ ವಿಚಾರ ಹೇಳಿದ್ದೆ. ಆದರೆ ಅಪ್ಪ, ಅಮ್ಮನಿಗೆ ಹೇಳಿರಲಿಲ್ಲ. ಕೊನೆ ಉಸಿರು ಇರೋವರೆಗೂ ನಾನು ಹೇಗೆ ಸತ್ತರು ರಾಷ್ಟ್ರಕ್ಕಾಗಿ ಸಾಯ್ತೀನಿ ಎಂದು ಮಾರ್ಮಿಕವಾಗಿ ಹೇಳಿದರು.