ತಲೆ ಸುತ್ತುತ್ತಿದೆ, ವಾಂತಿಯಾಗ್ತಿದೆ ಎಂದು ಸಿಹಿ ಸುದ್ದಿ ಹಂಚಿಕೊಂಡ ನಿವೇದಿತಾ ಗೌಡ

`ಬಿಗ್ ಬಾಸ್’ (Bigg Boss) ಖ್ಯಾತಿಯ ನಿವೇದಿತಾ ಗೌಡ (Niveditha Gowda) ತಮ್ಮ ಅಭಿಮಾನಿಗಳಿಗೆ ಕೊನೆಗೂ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. `ಗಿಚ್ಚಿ ಗಿಲಿಗಿಲಿ’ (Gicchi Giligili) ವೇದಿಕೆಯ ಮೇಲೆ ನಿವೇದಿತಾ ಹೊಸ ಅತಿಥಿಯ ಆಗಮನದ ಬಗ್ಗೆ ಮಾತನಾಡಿದ್ದಾರೆ.
ಇತ್ತೀಚಿಗಷ್ಟೇ ಚಂದನ್ ಶೆಟ್ಟಿ (Chandan Gowda) ಮತ್ತು ನಿವೇದಿತಾ ಗೌಡ (Niveditha Gowda) ಪೋಷಕರಾಗುತ್ತಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿ ಎಂಬ ಸುದ್ದಿ ಹರಿದಾಡಿತ್ತು. ಇದಾದ ಬಳಿಕ ಸ್ವತಃ ಚಂದನ್ ಶೆಟ್ಟಿ ಅವರೇ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದರು. ಸದ್ಯ ನಾವು ಮಕ್ಕಳನ್ನ ಮಾಡಿಕೊಳ್ಳುವ ಪ್ಲ್ಯಾನ್‌ನಲ್ಲಿ ಇಲ್ಲಾ ಎಂದು ನಟ ಮಾತನಾಡಿದ್ದರು. ಈ ಬೆನ್ನಲ್ಲೇ ಶೋನಲ್ಲಿ ನಿವೇದೀತಾ ಮಾತನಾಡಿರುವ ವಿಚಾರ ಸಖತ್ ಸದ್ದು ಮಾಡ್ತಿದೆ.
ಪ್ರಸ್ತುತ ನಟಿ ನಿವೇದಿತಾ ಗಿಚ್ಚಿ ಗಿಲಿಗಿಲಿ-2ನಲ್ಲಿ ಸ್ಪರ್ಧಿಸುತ್ತಿದ್ದಾರೆ. ವೇದಿಕೆಯ ಮೇಲೆ ಸ್ಕಿಟ್ ಮುಗಿದು ತೀರ್ಪುಗಾರರ ಬಳಿ ಮಾತನಾಡುವಾಗ ನಿವೇದಿತಾ ತಾನು ತಾಯಿಯಾಗುತ್ತಿದ್ದೇನೆ ಎಂದು ಸ್ವತಃ ಈ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ:ನಾಯಕಿ ಹನಿ ರೋಸ್ ಜೊತೆ ಬಾಲಯ್ಯ ಪಾರ್ಟಿ
ಒಂದು ತಟ್ಟೆಯಲ್ಲಿ ಮಾವಿನಕಾಯಿ, ಹುಣಸೆ ಹಣ್ಣು ತಂದು ವೇದಿಕೆಯ ಮೇಲೆ ಇಟ್ಟರು ನಿರೂಪಕ ನಿರಂಜನ್ ಇದೆಲ್ಲಾ ಏನು ಎಂದು ಪ್ರಶ್ನೆ ಮಾಡಿದ್ದಾರೆ. ನಿವಿ ಜೋಕ್ ಮಾಡುತ್ತಲೇ ಇದು ಬಟ್ಟೆ ಇರುವ ಹುಣಸೇ ಮತ್ತೊಂದು ಬಟ್ಟೆ ತೆಗೆದಿರುವ ಹುಣಸೆ ಎಂದು ಉತ್ತರಿಸಿದ್ದಾರೆ. ಎಲ್ಲಾ ಓಕೆ ಈಗ ಇದೆಲ್ಲಾ ತಂದಿರುವುದು ಯಾಕೆಂದು ತೀರ್ಪುಗಾರ್ತಿ ಶ್ರುತಿ (Actress Shruthi) ಕೇಳಿದಾಗ `ನನಗೆ ಎರಡು ತಿಂಗಳು ನಾನು ಪ್ರೆಗ್ನೆಂಟ್’ ಎಂದು ನಿವೇದಿತಾ ಹೇಳುತ್ತಾರೆ. ಒಂದು ನಿಮಿಷ ಪ್ರತಿಯೊಬ್ಬರು ಶಾಕ್ ಆಗುತ್ತಾರೆ.
ಈ ಸೀಸನ್‌ನಲ್ಲಿ ನಾನು ತುಂಬಾ ಗ್ಲೋ ಆಗಿ ಕಾಣುತ್ತೀದ್ದೀನಿ ಎಂದು ಸಾಧು ಸರ್ ಹೇಳಿದ್ರು. ಅದಕ್ಕೆ ಕಾರಣ ಇದೆ ಎಂದು ನಿವಿ ಮಾತನಾಡಿದ್ದಾರೆ. ಬಳಿಕ ಎರಡು ತಿಂಗಳು ಎಂದು ಹೇಳಿದರೆ ಜನರಿಗೆ ಅರ್ಥ ಆಗುವುದಿಲ್ಲ ಏನೆಂದು ವಿವರಿಸಿ ಹೇಳು ನಿರಂಜನ್ ಹೇಳುತ್ತಾರೆ. ನನಗೆ ತಲೆ ಸುತ್ತು, ವಾಮಿಟಿಂಗ್, ಬೆಳಗ್ಗೆ ಎದ್ದೇಳಲು ಆಗುವುದಿಲ್ಲ ಎನ್ನುತ್ತಾರೆ. ನಾನು ಪ್ರೆಗ್ನೆಂಟ್ ಎಂದು ವೇದಿಕೆಯಲ್ಲಿ ಹೇಳಿದ್ದಾರೆ. ವಾಹಿನಿಯ ಖಾತೆಯಲ್ಲಿ ಈ ವೀಡಿಯೋ ಸದ್ದು ಮಾಡ್ತಿದೆ.
ಈಗ ನಿವೇದಿತಾ ಮಾತು ಕೇಳಿ ಇದೆಲ್ಲಾ ಶುದ್ಧ ಸುಳ್ಳು ಕಂಟೆಂಟ್‌ಗಾಗಿ ಹೀಗೆ ಮಾಡ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ. ಅಷ್ಟಕ್ಕೂ ಇದು ನಿಜಾನಾ ಎಂದು ವಾರಾಂತ್ಯದ ಶೋನಲ್ಲಿ ಉತ್ತರ ಸಿಗಲಿದೆ.
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k