ತಮಿಳಿನ ಖ್ಯಾತ ನಟ ಧನುಷ್ (Dhanush) ಮತ್ತು ರಜನಿಕಾಂತ್ ಪುತ್ರಿ ಐಶ್ವರ್ಯ ರಜನಿಕಾಂತ್ (Aishwarya Rajinikanth) ನಡುವಿನ ಮನಸ್ತಾಪ ಹಾಗೂ ಡಿವೋರ್ಸ್ (Divorced) ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಈ ಜೋಡಿಯು ದೂರ ಆಗುವುದಕ್ಕೆ ಧನುಷ್ ಜೊತೆ ನಟಿಸಿದ ಒಬ್ಬ ನಟಿಯು ಕಾರಣ ಎಂದು ಸುದ್ದಿ ಆಗಿತ್ತು. ಆ ನಟಿ ಬೇರೆ ಯಾರೂ ಅಲ್ಲ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ (Shruti Haasan) ಎಂದು ಹೇಳಲಾಗಿತ್ತು. ಈ ವಿಚಾರವಾಗಿ ಶ್ರುತಿ ಟ್ರೋಲ್ ಕೂಡ ಆಗಿದ್ದರು. ಇದೀಗ ಈ ಕುರಿತು ಶ್ರುತಿ ಮಾತನಾಡಿದ್ದಾರೆ.
ಧನುಷ್ ಮತ್ತು ಐಶ್ವರ್ಯ ಡಿವೋರ್ಸ್ ಕುರಿತಾಗಿ ಮಾತನಾಡಿರುವ ಶ್ರುತಿ ಹಾಸನ್, ‘ಅವರ ಬದುಕಿಗೂ ನನಗೂ ಯಾವುದೇ ಸಂಬಂಧವಿಲ್ಲ. ಅವರು ನನ್ನ ಕಾರಣದಿಂದಾಗಿ ದೂರವಾಗಿಲ್ಲ. ನಾನು ಮತ್ತು ಧನುಷ್ ಒಳ್ಳೆಯ ಸ್ನೇಹಿತರು ನಿಜ. ಅದು ಕೇವಲ ವೃತ್ತಿ ಸ್ನೇಹವಾಗಿತ್ತು. ನನ್ನ ಕಷ್ಟದ ದಿನಗಳಲ್ಲಿ ಅವರು ಸಹಾಯ ಮಾಡಿದ್ದಾರೆ. ಅದರಾಚೆ ಯಾವುದೇ ಸಂಬಂಧವಿಲ್ಲ’ ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ನಯನತಾರಾ ಬಗ್ಗೆ ಕನ್ನಡದ ‘ಗೂಳಿ’ ನಟಿ ಶಾಕಿಂಗ್ ಹೇಳಿಕೆ
ಧನುಷ್ ಅತ್ಯುತ್ತಮ ನಟನಾದರೆ, ಐಶ್ವರ್ಯ ರಜನಿಕಾಂತ್ ಹೊಸ ಆಲೋಚನೆಯ ನಿರ್ದೇಶಕಿ. ಈ ಜೋಡಿಗೆ ಎರಡು ಮಕ್ಕಳು ಕೂಡ ಇವೆ. ಖುಷಿ ಖುಷಿಯಾಗಿಯೇ ಇದ್ದ ಸಂಬಂಧದಲ್ಲಿ ಬಿರುಕು ಮೂಡಿತು. ಆನಂತರ ಇಬ್ಬರೂ ದೂರವಾಗಲು ನಿರ್ಧರಿಸಿದರು. ಸ್ವತಃ ರಜನಿಕಾಂತ್ ಅವರೇ ಇಬ್ಬರನ್ನೂ ಸರಿ ಮಾಡಲು ಪ್ರಯತ್ನಪಟ್ಟರು ಅದು ಸಾಧ್ಯವಾಗಲಿಲ್ಲ. ಹಾಗಾಗಿ ಇಬ್ಬರೂ ದೂರವಾಗಿದ್ದಾರೆ.
ಐಶ್ವರ್ಯ ಹೊಸ ಸಿನಿಮಾದ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ. ಧನುಷ್ ಕೂಡ ಹಲವು ಪ್ರಾಜೆಕ್ಟ್ ಗಳನ್ನು ಒಪ್ಪಿಕೊಂಡು ಕೆಲಸ ಮಾಡುತ್ತಿದ್ದಾರೆ. ಆದರೆ, ಇವರ ಡಿವೋರ್ಸ್ ವಿಚಾರ ಮಾತ್ರ ಎರಡೂ ಕುಟುಂಬಕ್ಕೆ ನೋವು ತಂದಿದ್ದು ಸುಳ್ಳಲ್ಲ.