ನಾನು ಯಾವ್ದೇ ಚುನಾವಣೆಯಲ್ಲಿ ಸ್ಪರ್ಧಿಸಲ್ಲ, ಜನ ರೆಸ್ಟ್ ಕೊಟ್ಟಿದ್ದಾರೆ: ಡಿಕೆ ಸುರೇಶ್‌

Public TV
2 Min Read
DK SURESH

ರಾಮನಗರ: ನಾನು ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ಜನ ರೆಸ್ಟ್‌ ಕೊಟ್ಟಿದ್ದಾರೆ, ರೆಸ್ಟ್‌ ತೆಗೆದುಕೊಳ್ತೇನೆ ಎಂದು ಮಾಜಿ ಸಂಸದ ಡಿ.ಕೆ ಸುರೇಶ್‌ (DK Suresh) ಹೇಳಿದ್ದಾರೆ.

ಮಾಗಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಸು, ಚನ್ನಪಟ್ಟಣದ ಉಪಚುನಾವಣೆಯಲ್ಲಿ (Channapatna by Election) ತಮ್ಮ ಸ್ಪರ್ಧೆ ವಿಚಾರ ಕುರಿತು ಪ್ರತಿಕ್ರಿಯಿಸಿದರು. ಚನ್ನಪಟ್ಟಣ ಸ್ಪರ್ಧೆ ವಿಚಾರ ನನ್ನ ಮುಂದೆ ಚರ್ಚೆಯಲ್ಲಿ ಇಲ್ಲ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್‌, ಸಿಎಂ ಹಾಗೂ ಡಿಸಿಎಂ (DCM) ತೀರ್ಮಾನ ಮಾಡ್ತಾರೆ. ಸೂಕ್ತ ಅಭ್ಯರ್ಥಿಯನ್ನ ನಮ್ಮ ಪಕ್ಷ ಕಣಕ್ಕಿಳಿಸುತ್ತೆ. ನಾನೂ ಕೂಡಾ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡ್ತೇನೆ. ಶಾಸಕರು ರಾಜೀನಾಮೆ ಕೊಟ್ಟು ಒಂದು ವಾರ ಆಗಿದೆ. ಇನ್ನೂ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆ ಆಗಿಲ್ಲ. ಡಿಸಿಎಂ ಡಿಕೆಶಿ ಅವರು ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಗಮನಹರಿಸಿದ್ದಾರೆ ಎಂದು ತಿಳಿಸಿದ್ದಾರೆ.

Siddaramaiah DK Shivakumar

ಇನ್ನೂ ತಮ್ಮನಾಗಿ ಡಿಕೆಶಿ (DK Shivakumar) ಕನಕಪುರ ಕ್ಷೇತ್ರ ತ್ಯಾಗ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದು ಕೇವಲ ಊಹಾಪೋಹ. ನಾನು ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ಜನ ರೆಸ್ಟ್ ಕೊಟ್ಟಿದ್ದಾರೆ, ರೆಸ್ಟ್ ತೆಗೆದುಕೊಳ್ತೇನೆ. ನಾನು ಸಹ ಒತ್ತಡದಲ್ಲಿದ್ದೆ, ಸದ್ಯ ಅದರಿಂದ ಹೊರಗೆ ಬಂದಿದ್ದೇನೆ. ಬೇರೆಯವರ ಹಾಗೆಯೇ 20 ದಿನಗಳ ಚುನಾವಣೆ ಮಾಡ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಜೈಲಿನ ಸೆಕ್ಯುರಿಟಿ ಸೆಲ್‍ನಲ್ಲಿ ದರ್ಶನ್- ತುಮಕೂರು ಜೈಲಿಗೆ ಶಿಫ್ಟ್ ಆಗ್ತಾರಾ ‘ದಾಸ’?

CP Yogeshwara

ಇದೇ ವೇಳೆ ಚನ್ನಪಟ್ಟಣದಲ್ಲಿ ಡಿಕೆಶಿ ರಾಜಕೀಯ ಅಂತ್ಯ ಎಂಬ ಸಿ.ಪಿ ಯೋಗೇಶ್ವರ್‌ ಹೇಳಿಕೆಗೆ ಪ್ರತಿಕ್ರಿಯಿಸಿ, ಯೋಗೇಶ್ವರ್‌ ಮಾತಿನ ಬಗ್ಗೆ ಹೆಚ್ಚು ಅದ್ಯತೆ ಕೊಡಬೇಕಾಗಿಲ್ಲ. ಅವರು ಸಿನಿಮಾ ನಟರು, ನಿರ್ದೇಶಕರು ಯಾವಾಗ ಬೇಕಾದ್ರೂ ಸ್ಕ್ರಿಪ್ಟ್ ಚೇಂಜ್ ಮಾಡ್ತಾರೆ. ಚನ್ನಪಟ್ಟಣದಲ್ಲಿ ಡಿಕೆಶಿ ಸ್ಪರ್ಧೆ ಮಾಡೋದು ಅವರ ವೈಯಕ್ತಿಕ ವಿಚಾರ. ಅದರ ಬಗ್ಗೆ ನನಗೆ ಗೊತ್ತಿಲ್ಲ. ಪಕ್ಷ ಹಾಗೂ ಕ್ಷೇತ್ರದ ಜನ ತೀರ್ಮಾನ ಮಾಡಿದ್ರೆ ಸ್ಪರ್ಧೆ ಮಾಡಬಹುದು. ಈ ಬಗ್ಗೆ ಅವರನ್ನೇ ಕೇಳಿ ಎಂದು ಡಿಕೆ ಸುರೇಶ್‌ ಹೇಳಿದ್ದಾರೆ. ಇದನ್ನೂ ಓದಿ: ಸೂರಜ್‌ ಪರ ಇಂದು ಜಾಮೀನು ಅರ್ಜಿ ಸಲ್ಲಿಕೆ – ವಕೀಲ ನಿಖಿಲ್ ಕಾಮತ್

Share This Article