ಚಿತ್ರದುರ್ಗ: ಶ್ರೀರಾಮುಲುಗೆ (Sriramulu) ಪೈಪೋಟಿ ಕೊಡುವಷ್ಟು ದೊಡ್ಡಮನುಷ್ಯ ನಾನಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಹೇಳಿದರು.
ಚಿತ್ರದುರ್ಗದ (Chitradurga) ಶಿವಶರಣ ಮಾದಾರಚನ್ನಯ್ಯ ಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನಾಶೀರ್ವಾದ ಪಡೆದ ಬಳಿಕ ಮಾದ್ಯಮಗಳೊಂದಿಗೆ ಅವರು ಮಾತನಾಡಿದರು. ಇದನ್ನೂ ಓದಿ: ದೆಹಲಿಯಲ್ಲಿ ESIC ಡಿಜಿ ಭೇಟಿಯಾದ ಸಂಸದ ಕ್ಯಾ.ಚೌಟ
ಬಿಜೆಪಿ ರಾಜ್ಯಾಧ್ಯಕ್ಷರ ರೇಸ್‌ನಲ್ಲಿ ಮಾಜಿ ಸಚಿವ ಶ್ರೀರಾಮುಲು ಪೈಪೋಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿಜಯೇಂದ್ರ, ರಾಮುಲು ನನಗಿಂತ ಹಿರಿಯರಾಗಿದ್ದು, ಬಿಎಸ್ ಯಡಿಯೂರಪ್ಪ, ಅನಂತಕುಮಾರ್ ಹಾಗೂ ಕಾರಜೋಳ ಅವರ ಜೊತೆ ರಾಜ್ಯಾದ್ಯಂತ ಪಕ್ಷಸಂಘಟನೆ ಮಾಡಿದ್ದಾರೆ. ಹೀಗಾಗಿ ರಾಜ್ಯಾದ್ಯಕ್ಷರ ಆಯ್ಕೆ ಬಗ್ಗೆ ಅಂತಿಮವಾಗಿ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು. ಇದನ್ನೂ ಓದಿ: 3ರ ಬಾಲೆಯ ಕೆನ್ನೆಗೆ ಸೌಟ್‌ನಲ್ಲಿ ಬರೆ – ಅಂಗನಾಡಿ ಸಿಬ್ಬಂದಿ ಅಮಾನತು
ಇನ್ನು ರಾಜ್ಯಾಧ್ಯಕ್ಷ ಸ್ಥಾನ ಯಾರಿಗೆ ಕೊಟ್ಟರೆ ಪಕ್ಷಕ್ಕೆ ಒಳಿತಾಗಲಿದೆ ಎಂದು ವರಿಷ್ಠರು ಗಮನಹರಿಸುತ್ತಾರೆ. ಆದರೆ ಕಳೆದ ಒಂದೂವರೆ ವರ್ಷದಿಂದ ಯಶಸ್ವಿಯಾಗಿ ರಾಜ್ಯಾಧ್ಯಕ್ಷ ಹುದ್ದೆ ಜವಾಬ್ದಾರಿ ನಿರ್ವಹಿಸಿದ್ದೇನೆ. ರಾಜ್ಯದ ಬಿಜೆಪಿ ಕಾರ್ಯಕರ್ತರಲ್ಲಿ ಧೈರ್ಯ-ಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದು, ರಾಜ್ಯಾಧ್ಯಕ್ಷನಾಗಿ ಮುಂದುವರೆಯುವಂತೆ ಕಾರ್ಯಕರ್ತರ ಅಪೇಕ್ಷೆ ಸಹ ಇದೆ ಎಂದು ಹೇಳಿದರು. ಇದನ್ನೂ ಓದಿ: ರಾಜಸ್ಥಾನ | ಹೈವೇಯಲ್ಲಿ ಟೈರ್ ಸ್ಫೋಟ – ವ್ಯಾನ್‌ಗೆ ಬಸ್ ಡಿಕ್ಕಿಯಾಗಿ 8 ಮಂದಿ ದುರ್ಮರಣ
ಸದ್ಯದಲ್ಲೇ ಕೇಂದ್ರದ ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಜೊತೆಗೆ ರಾಜ್ಯಾಧ್ಯಕ್ಷರ ಆಯ್ಕೆ ವೇಳೆ ಜಿಲ್ಲಾಧ್ಯಕ್ಷರ, ಶಾಸಕರ ಅಭಿಪ್ರಾಯಗಳ ಆಧಾರದ ಮೇಲೆ ಆಯ್ಕೆಯಾಗಲಿದ್ದು, ನಮ್ಮ ಪಕ್ಷ ಹಾಗೂ ಹೈಕಮಾಂಡ್ ಏನು ತೀರ್ಮಾನ ಮಾಡಲಿದೆಯೋ ಆ ತೀರ್ಮಾನಕ್ಕೆ ನಾನಾಗಲಿ, ಮತ್ತೊಬ್ಬರಾಗಲಿ ಎಲ್ಲರೂ ಬದ್ಧರಾಗಿರಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಇನ್ವೆಸ್ಟ್ ಕರ್ನಾಟಕದಲ್ಲಿ 19 ದೇಶಗಳು ಭಾಗಿ: ಎಂ.ಬಿ ಪಾಟೀಲ್
ವಿವಿಧ ಜಿಲ್ಲೆಗಳ ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ ವೇಳೆ ವಿಜಯೇಂದ್ರ ಬೆಂಬಲಿಗರಿಗೆ ಹೆಚ್ಚು ಅವಕಾಶ ಎಂಬ ಬಿಜೆಪಿ ಮುಖಂಡರ ಅಸಮಧಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯಾಧ್ಯಕ್ಷನಾಗಿ ನಾನು ಎಲ್ಲೂ ಅಭಿಪ್ರಾಯ ಕೊಡುವ ಕೆಲಸ ಮಾಡಿಲ್ಲ ಎಂದಷ್ಟೇ ಹೇಳಿ ವಿವಾದಕ್ಕೆ ಗೆರೆ ಎಳೆದರು. ಇದನ್ನೂ ಓದಿ: ಟೀಂ ಇಂಡಿಯಾದ ಆಲ್‌ರೌಂಡರ್ ಆಟ – ಇಂಗ್ಲೆಂಡ್ ವಿರುದ್ಧ 4 ವಿಕೆಟ್‌ಗಳ ಜಯ
ತರಳುಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಚಿತ್ರದುರ್ಗಕ್ಕೆ ಆಗಮಿಸಿದ್ದೇನೆ. ಹೀಗಾಗಿ ಮಠಗಳ ಭೇಟಿ ಬಗ್ಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ಮೊನ್ನೆ ತರಳುಬಾಳು ಹುಣ್ಣಿಮೆಗೆ ನಮ್ಮ ತಂದೆಯವರಾದ ಬಿಎಸ್‌ವೈ ಬರಬೇಕಿತ್ತು, ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಶ್ರೀಗಳ ಅಪೇಕ್ಷೆ ಮೇರೆಗೆ ಇಂದು ನಾನು ಆಗಮಿಸಿದ್ದೇನೆ ಎಂದರು. ಈ ವೇಳೆ ಸಂಸದ ಗೋವಿಂದ ಕಾರಜೋಳ, ಎಂಎಲ್‌ಸಿ ನವೀನ್ ಉಪಸ್ಥಿತರಿದ್ದರು. ಇದನ್ನೂ ಓದಿ: ಚಿಕ್ಕಮಗಳೂರು | ಕಾಡುಕೋಣ ದಾಳಿಗೆ ವೃದ್ಧ ಬಲಿ