ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚ್ತಿರುವ ರಶ್ಮಿಕಾ ಮಂದಣ್ಣ (Rashmika Mandanna) ಅವರು ‘ಪುಷ್ಪ 2’ ಸಿನಿಮಾ ಜೊತೆ ರೈನ್‌ಬೋ (Rainbow) ಸೇರಿದಂತೆ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲು ಅರ್ಜುನ್‌ಗೆ ಜೋಡಿಯಾಗಿ ರಶ್ಮಿಕಾ ಶ್ರೀವಲ್ಲಿ ಪಾತ್ರಕ್ಕೆ ಜೀವತುಂಬಿದ್ದರು. ‘ಪುಷ್ಪ’ ಬಳಿಕ ಶ್ರೀವಲ್ಲಿ ಪಾತ್ರಕ್ಕೆ ಬಹುದೊಡ್ಡ ಫ್ಯಾನ್ ಬೇಸ್ ಸೃಷ್ಟಿಯಾಗಿತ್ತು. ಇದೀಗ ಶ್ರೀವಲ್ಲಿ ರೋಲ್ ಬಗ್ಗೆ ತಮಿಳಿನ ನಟಿ ಐಶ್ವರ್ಯಾ ರಾಜೇಶ್ (Aishwarya Rajesh) ಕೊಂಕು ತೆಗೆದಿದ್ದಾರೆ.
2021ರಲ್ಲಿ ‘ಪುಷ್ಪ’ (PUSHPA) ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡಿತ್ತು. ರಶ್ಮಿಕಾ ಕೆರಿಯರ್‌ಗೂ ದೊಡ್ಡ ತಿರುವನ್ನ ಕೊಟ್ಟಿತ್ತು. ಈ ಚಿತ್ರದ ಬಳಿಕ ಶ್ರೀವಲ್ಲಿ (Srivalli) ಕ್ರೇಜ್ ಅದೆಷ್ಟರ ಮಟ್ಟಿಗೆ ಸೃಷ್ಟಿಯಾಗಿತ್ತು ಅಂದರೆ ಶ್ರೀವಲ್ಲಿ ಸೀರೆ ಅಂತಾ ಸೇಲ್ ಆಗುತ್ತಿತ್ತು. ರಶ್ಮಿಕಾ ನಟನೆಯ ಶ್ರೀವಲ್ಲಿ ಸ್ಟೈಲ್‌ನ ಫಿಮೇಲ್ ಫ್ಯಾನ್ಸ್ ಕಾಪಿ ಮಾಡ್ತಿದ್ದರು. ಹಾಗಾಗಿ ಇದೀಗ ಪುಷ್ಪ 2ಗೆ ಅಭಿಮಾನಿಗಳು ಎದುರು ನೋಡ್ತಿದ್ದಾರೆ.
ಐಶ್ವರ್ಯಾ ರಾಜೇಶ್ ನಟನೆಯ ‘ಫರ್ಹಾನಾ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ತಮಿಳಿನ ಈ ಸಿನಿಮಾ ಪ್ರಚಾರದಲ್ಲಿ ಐಶ್ವರ್ಯಾ ರಾಜೇಶ್ ಬ್ಯುಸಿ ಆಗಿದ್ದಾರೆ. ಅವರಿಗೆ ತೆಲುಗು ಸಿನಿಮಾ ಬಗ್ಗೆ ಕೇಳಲಾಯಿತು. ಇದಕ್ಕೆ ಅವರು ಉತ್ತರ ನೀಡಿದ್ದಾರೆ. ‘ಪುಷ್ಪ’ ಸಿನಿಮಾದ ಶ್ರೀವಲ್ಲಿ ಪಾತ್ರವನ್ನು ನಾನು ಇಷ್ಟಪಟ್ಟಿದ್ದೆ. ರಶ್ಮಿಕಾ ಉತ್ತಮವಾಗಿ ನಟಿಸಿದ್ದಾರೆ. ಆದರೆ, ಅವರಿಗಿಂತ ಉತ್ತಮವಾಗಿ ನಾನು ನಟಿಸುತ್ತಿದ್ದೆ ಎಂದು ಐಶ್ವರ್ಯಾ ರಾಜೇಶ್ ಹೇಳಿದ್ದಾರೆ. ರಶ್ಮಿಕಾಗಿಂತ ಶ್ರೀವಲ್ಲಿ ಪಾತ್ರಕ್ಕೆ ತಾನೇ ಸೂಕ್ತ ಎಂಬರ್ಥದಲ್ಲಿ ಐಶ್ವರ್ಯಾ ಮಾತನಾಡಿದ್ದಾರೆ. ಇದನ್ನೂ ಓದಿ:ಸಲ್ಮಾನ್ ಖಾನ್‌ರನ್ನ ಮಗುವಿನ ಮುಗ್ಧತೆಗೆ ಹೋಲಿಸಿದ ಸುಧಾ ಮೂರ್ತಿ
ಐಶ್ವರ್ಯಾ ಹೇಳಿಕೆ ಇದೀಗ ಅಭಿಮಾನಿಗಳ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಶ್ರೀವಲ್ಲಿ ಪಾತ್ರಕ್ಕೆ ರಶ್ಮಿಕಾನೇ ಸೂಕ್ತ ಅಂತಾ ಫ್ಯಾನ್ಸ್ ಐಶ್ವರ್ಯಾ ಸೋಷಿಯಲ್ ಮೀಡಿಯಾದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇನ್ನೂ ಐಶ್ವರ್ಯಾ ರಾಜೇಶ್ ಅವರು 8 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು, ಮಲಯಾಳಂ ಸೇರಿದಂತೆ ಬಹುಭಾಷೆಗಳಲ್ಲಿ ನಟಿ ಅಭಿನಯಿಸುತ್ತಿದ್ದಾರೆ.