ರಾಮನಗರ: ಕಾಮಗಾರಿಗಳ ಉಸ್ತುವಾರಿಯನ್ನು ನೋಡಿಕೊಳ್ಳಲು ಕೇಂದ್ರ ಸರ್ಕಾರ ನಮಗೆ ಅವಕಾಶ ಕೊಟ್ಟಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಸಂಸದ ಡಿ.ಕೆ.ಸುರೇಶ್ ತಿರುಗೇಟು ನೀಡಿದ್ದಾರೆ.
ಹೆಚ್‍ಡಿಕೆ ತಮ್ಮ ವಿರುದ್ಧ ವಾಗ್ದಾಳಿ ನಡೆಸಿದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಒಬ್ಬ ಜನಪ್ರತಿನಿಧಿ ಇದ್ದೇನೆ. ಜನರ ಸಮಸ್ಯೆ ಬಗೆಹರಿಸುವುದು ನನ್ನ ಕರ್ತವ್ಯ. ಜನರ ಸಮಸ್ಯೆ ಬಗೆಹರಿಸಲು ಅಧಿಕಾರಿಗಳನ್ನು ಭೇಟಿ ಮಾಡಬೇಕಾಗುತ್ತದೆ. ರಾಜ್ಯ ಹಾಗೂ ಕೇಂದ್ರದ ಹಲವು ಯೋಜನೆಗಳು ನನಗೆ ಸಂಬಂಧಪಟ್ಟಿದೆ. ಆ ಕಾಮಗಾರಿಗಳ ಉಸ್ತುವಾರಿಯನ್ನು ನೋಡಿಕೊಳ್ಳಲು ಕೇಂದ್ರ ಅವಕಾಶ ಕೊಟ್ಟಿದೆ. ಈ ನಿಟ್ಟಿನಲ್ಲಿ ನಾನು ಕೆಲಸ ಮಾಡ್ತಿದ್ದೇನೆ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ರೇವ್ ಪಾರ್ಟಿ ಜಾಗದಲ್ಲಿ ಗೋಶಾಲೆ ನಿರ್ಮಾಣ – ಮಾಲೀಕರಿಗಾಗಿ ಪೊಲೀಸರ ಹುಡುಕಾಟ
Advertisement
Advertisement
ಬೇರೆಯವರನ್ನು ಅಪಮಾನ ಮಾಡುವ ಉದ್ದೇಶ ನನಗಿಲ್ಲ. ಬೇಕಿದ್ದರೆ ಅವರು ಕೇಂದ್ರಕ್ಕೆ ಪತ್ರ ಬರೆಯಲಿ. ಯಾರ್ಯಾರ ಅಧಿಕಾರ ಏನಿದೆ ಎಂದು ಕೇಳಲಿ. ಅವರು ಸ್ಪೀಕರ್ ಬಳಿ ವಿಚಾರ ಮಂಡನೆ ಮಾಡಿದ್ದಾರೆ. ನಾವು ಸಹ ಸ್ಪೀಕರ್ ಭೇಟಿ ಮಾಡ್ತೇವೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೊತೆ ರಾಜನಾಥ್ ಮಾತುಕತೆ
Advertisement
ನಾನು ಕ್ಷೇತ್ರದ ಜನರಿಗಾಗಿ ಮಾತ್ರ ಕೆಲಸ ಮಾಡುತ್ತೇನೆ. ಅದು ಬೇರೆಯವರ ಕಣ್ಣಿಗೆ ಹೇಗೆ ಕಾಣಿಸುತ್ತೆ ಎಂಬುದು ನನಗೆ ಗೊತ್ತಿಲ್ಲ. ಅದು ಅವರ ದೃಷ್ಟಿಕೋನಕ್ಕೆ ಬಿಟ್ಟ ವಿಚಾರ. ಚುನಾವಣೆಗೆ ಇನ್ನೂ ತುಂಬಾ ಸಮಯವಿದೆ. ಮೊದಲು ಜನರ ಕಷ್ಟವನ್ನು ನೋಡಬೇಕು ಎಂದಿದ್ದಾರೆ.
Advertisement