– ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಕಿಡಿ
ಬೆಂಗಳೂರು: ನಾನು ಹಿಂದೂ, ನಾನು ಆಂಜನೇಯನ ಭಕ್ತ, ರಾಮನ ಭಕ್ತ, ಶಿವ ಭಕ್ತ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಹೇಳಿಕೊಂಡಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ (Congress Manifesto) ಬಜರಂಗದಳ ಬ್ಯಾನ್ ವಿಚಾರ ಕೈ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ (Siddaramaiah), ಡಿಕೆ ಶಿವಕುಮಾರ್ ಹಾಗೂ ರಣದೀಪ್ ಸುರ್ಜೆವಾಲ ನಗರದ ಖಾಸಗಿ ಹೋಟೆಲೊಂದರಲ್ಲಿ ಪ್ರತ್ಯೇಕ ಸಭೆ ನಡೆಸಿದ್ದಾರೆ. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಡಿ.ಕೆ ಶಿವಕುಮಾರ್, ಮೋದಿ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಭಯೋತ್ಪಾದನೆಗೆ ಉತ್ತೇಜನ ಕೊಟ್ರೆ, PFI, ಬಜರಂಗದಳ ಆದ್ರೂ ಬ್ಯಾನ್ ಮಾಡಲಾಗುತ್ತೆ: ಬಿ.ಕೆ ಹರಿಪ್ರಸಾದ್
ಬಜರಂಗದಳ ಬ್ಯಾನ್ ಮಾಡ್ತೀವಿ ಅಂದಿದ್ದಕ್ಕೆ ಯಾಕೆ ಅವರು ಗಾಬರಿ ಆಗ್ತಿದ್ದಾರೆ. ಆಂಜನೇಯನಿಗೂ ಬಜರಂಗದಳಕ್ಕೂ ಏನ್ ಸಂಬಂಧ? ಬಹಳ ಪ್ರಚೋದನೆ ಉಂಟುಮಾಡ್ತಿದ್ದಾರೆ. ಜನಕ್ಕೆ ಇದೆಲ್ಲವೂ ಅರ್ಥವಾಗಿದೆ. ನಾವೂ ಹನುಮನ ಭಕ್ತರು, ಆಂಜನೇಯನ ಪ್ರವೃತ್ತಿಯವರು, ಆಂಜನೇಯ ಬೇರೆ, ಬಜರಂಗದಳ ಬೇರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಸೇರಿದ್ದು ಹೇಗೆ? – ಇನ್‌ಸೈಡ್ ಸ್ಟೋರಿ
ಏಪ್ರಿಲ್ 4ರಂದು ಹನುಮಾನ್ ಚಾಲಿಸಾ ಪಠಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಹನುಮಾನ್ ಚಾಲಿಸಾ ದಿನಾ ಪಠಿಸ್ತೀವಿ. ಹಿಂದಿನ ಆರ್‌ಎಸ್‌ಎಸ್ ಬೇರೆಯಿತ್ತು. ಈಗಿನ ಆರ್‌ಎಸ್‌ಎಸ್ ಬೇರೆ ಇದೆ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ಯಾಕೆ ನೋಡಿಕೊಳ್ತೀರಾ? ಮೊದಲು ನೀವು ದೇಶ ಉಳಿಸಿ ಎಂದು ಕುಟುಕಿದ್ದಾರೆ.
ಬಜರಂಗಿ ಅಂತಾ ಕ್ಯಾಂಪೇನ್ ಮಾಡೋರು ಜನರ ಹೊಟ್ಟೆಗೆ ಏನು ಕೊಟ್ರಿ? ಎಷ್ಟು ಜನರಿಗೆ ಉದ್ಯೋಗ ಕೊಟ್ರಿ? ಎಂದು ಪ್ರಶ್ನಿಸಿದ ಡಿಕೆಶಿ ಪ್ರಣಾಳಿಕೆಯಿಂದ ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಆಗಲ್ಲ. ಮೇ 13ರಂದು ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಪಕ್ಕಾ. ನಾನು ಹಿಂದೂ, ನಾನು ಆಂಜನೇಯನ ಭಕ್ತ, ನಾನೂ ರಾಮನ ಭಕ್ತ, ಶಿವಭಕ್ತ ಎಂದು ಹೇಳಿದ್ದಾರೆ.