ಬೆಂಗಳೂರು: ಜೆಡಿಎಸ್ (JDS) ಬಿಜೆಪಿ (BJP) ಜೊತೆ ಮೈತ್ರಿ (Alliance) ಮಾಡಿಕೊಂಡರೂ ಪಕ್ಷದ ಸಿದ್ಧಾಂತ ಬಿಡುವುದಿಲ್ಲ. ದೇವೇಗೌಡರ (HD Deve Gowda) ನಿರ್ಧಾರ ಜೊತೆ ನಾನು ಇರುತ್ತೇನೆ ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್ (Zafrullah Khan) ತಿಳಿಸಿದ್ದಾರೆ.
ಬಿಜೆಪಿ ಜೊತೆ ಮೈತ್ರಿ ವಿಚಾರವಾಗಿ ಮುಸ್ಲಿಂ ಸಮುದಾಯದ ನಾಯಕರ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ದೇವೇಗೌಡರ ಮನೆಗೆ ನಾನು ಮೊದಲ ಬಾರಿಗೆ ಹೋದ ಕೂಡಲೇ ನನ್ನನ್ನು ಆಯ್ಕೆ ಮಾಡಿದ್ದರು. ದೇವೇಗೌಡರಿಗೆ ನಿಷ್ಠೆಯಾಗಿ ಇರುತ್ತೇನೆ ಅಂತ ಅವತ್ತೇ ನಾನು ಹೇಳಿದ್ದೆ. ಈಗಲೂ ನಾನು ದೇವೇಗೌಡರ ಜೊತೆ ಇರುತ್ತೇನೆ. ಅವರಿಗೆ ನಿಷ್ಠೆಯಾಗಿ ಇರುತ್ತೇನೆ. ದೇವೇಗೌಡರ ನಿರ್ಧಾರಕ್ಕೆ ನಮ್ಮ ಒಪ್ಪಿಗೆ ಇದೆ ಎಂದರು. ಇದನ್ನೂ ಓದಿ: ತ.ನಾಡಿಗೆ ಕಾವೇರಿ ನೀರು ಬಿಡುವಂತೆ ಕರ್ನಾಟಕಕ್ಕೆ ಕೇಂದ್ರ ನಿರ್ದೇಶನ ನೀಡಬೇಕು: ವಿಧಾನಸಭೆಯಲ್ಲಿ ಸ್ಟಾಲಿನ್ ನಿರ್ಣಯ ಮಂಡನೆ
Advertisement
Advertisement
ಅನೇಕ ಬಾರಿ ಅನೇಕರ ಜೊತೆ ನಾವು ಮೈತ್ರಿ ಮಾಡಿಕೊಂಡಿದ್ದೇವೆ. ಆದರೆ ನಮ್ಮ ಸಿದ್ಧಾಂತ ಬಿಟ್ಟಿಲ್ಲ. ಈಗ ಮೈತ್ರಿಗೆ ಅಸಮಾಧಾನ ಆಗಿ ಕೆಲವರು ಬಿಟ್ಟು ಹೋಗಿರಬಹುದು. ಅವರ ಜೊತೆ ಮಾತನಾಡಿ ಅವರನ್ನು ವಾಪಸ್ ಕರೆದುಕೊಂಡು ಬರೋ ಕೆಲಸ ಮಾಡ್ತೀನಿ. ಜೆಡಿಎಸ್ ಮೈತ್ರಿ ಆದರೂ ನಮ್ಮ ಸಿದ್ಧಾಂತ ನಾವು ಬಿಟ್ಟು ಹೋಗಲ್ಲ. ಈ ಬಾರಿ ಗ್ಯಾರಂಟಿ ಅಂತ ಕಾಂಗ್ರೆಸ್ (Congress) ಮತ ಪಡೆದಿದೆ. ಇದೆಲ್ಲ ಜಾಸ್ತಿ ದಿನ ಕಾಂಗ್ರೆಸ್ ಜೊತೆ ಇರಲ್ಲ. ಮತ್ತೆ ನಮ್ಮ ಸಮುದಾಯ ನಮ್ಮ ಜೊತೆ ಬರುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ಮುಂದುವರಿದ ನೀರು ಬಿಡುಗಡೆ; ಈಗ ನೀರು ಎಷ್ಟಿದೆ?
Advertisement
ನಾನು ದೇವೇಗೌಡರಿಗೆ ಮೋಸ ಮಾಡಿದರೆ ನನ್ನ ಸಮುದಾಯಕ್ಕೆ ಮಾಡಿದ ಮೋಸ ಆಗುತ್ತದೆ. ಕಾಂಗ್ರೆಸ್ ಅವರು ನಾವು ಜಾತ್ಯಾತೀತ ಎಂದು ಹೇಳುತ್ತಾರೆ. ಹಾಗಾದರೆ ಶಿವಸೇನೆಯ ಮೈತ್ರಿ ಕಿತ್ತು ಹಾಕಲಿ ನೋಡೋಣ. ಅವರು ಶಿವಸೇನೆ ಜೊತೆ ಮೈತ್ರಿ ಆಗಬಹುದು. ನಾವು ಬಿಜೆಪಿ ಜೊತೆ ಆಗಬಾರದಾ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: 5 ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಇಂದು ಪ್ರಕಟ
Advertisement
ಮೈತ್ರಿಗೆ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವು ಮೈತ್ರಿ ಆದರು ನಮ್ಮ ಪಕ್ಷದ ಸಿದ್ಧಾಂತ ಬಿಡುತ್ತಿಲ್ಲ. ಇದು ಇಬ್ರಾಹಿಂ ಅವರಿಗೂ ಗೊತ್ತಿರಬೇಕು ಅಲ್ಲವಾ? ಅವರಿಗೆ ಇದು ಗೊತ್ತಿಲ್ಲ ಅಂದರೆ ನಾನೇನು ಮಾಡಲಿ. ನಾನು ದೇವೇಗೌಡರ ಜೊತೆ ಇರುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಇಸ್ರೇಲ್‍ನಲ್ಲಿ ಸಿಲುಕಿದ್ದ 18,000 ಭಾರತೀಯರು ಸೇಫ್
Web Stories