ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಹೈಡ್ರಾಮಾ – ಭಾರೀ ಭದ್ರತೆಯಲ್ಲಿ ನಗರಸಭಾ ಸದಸ್ಯರನ್ನು ಬರಮಾಡಿಕೊಂಡ ಸುಧಾಕರ್

Public TV
1 Min Read
K Sudhakar Kempegowda airport

– ಬಸ್ ಮೂಲಕ ಅಜ್ಞಾತ ಸ್ಥಳಕ್ಕೆ ಕರೆದೊಯದ್ದ ಸಂಸದ

ಬೆಂಗಳೂರು/ಚಿಕ್ಕಬಳ್ಳಾಪುರ: ಇಂದು ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ (Chikkaballapur Municipal Council Election) ನಡೆಯುವ ಹಿನ್ನೆಲೆ ಪ್ರವಾಸಕ್ಕೆಂದು ಕಳುಹಿಸಿದ್ದ 15 ಮಂದಿ ಬೆಂಬಲಿತ ಸದಸ್ಯರನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ (Kempegowda International Airport) ಸಂಸದ ಕೆ.ಸುಧಾಕರ್ (K Sudhakar) ಖುದ್ದು ಭೇಟಿ ಮಾಡಿ ಭಾರೀ ಭದ್ರತೆಯಲ್ಲಿ ಬರಮಾಡಿಕೊಂಡಿದ್ದಾರೆ.

K Sudhakar Kempegowda Airport 1

ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ ನಡೆಯಲಿದ್ದು, ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಹಾಗೂ ಸಂಸದ ಸುಧಾಕರ್ ನಡುವೆ ಭಾರೀ ಫೈಪೋಟಿ ಏರ್ಪಟ್ಟಿದೆ. ಹೀಗಾಗಿ ಪರಸ್ಪರ ಕ್ಲೈಮಾಕ್ಸ್ ಕಾರ್ಯತಂತ್ರಗಳನ್ನು ರೂಪಿಸಿ ನಾನಾ ನೀನಾ ಅಂತ ಫೈಟ್‌ಗೆ ಬಿದ್ದಿದ್ದಾರೆ. ಸಂಸದ ಸುಧಾಕರ್ ತಮ್ಮ 15 ಮಂದಿ ಬೆಂಬಲಿತ ಸದಸ್ಯರನ್ನು ಕಳೆದ ಒಂದು ವಾರದ ಹಿಂದೆ ಪ್ರವಾಸ ಕಳುಹಿಸಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ಕೆಂಪೇಗೌಡ ಏರ್ಪೋರ್ಟ್‌ಗೆ ಆಗಮಿಸಿದ ನಗರಸಭಾ ಸದಸ್ಯರನ್ನು ಖುದ್ದು ಸುಧಾಕರ್ ಭೇಟಿ ಮಾಡಿ ಬರಮಾಡಿಕೊಂಡರು. ಕಾಂಗ್ರೆಸ್‌ನವರು ತಮ್ಮ ಬೆಂಬಲಿತ ಸದಸ್ಯರನ್ನ ಏರ್ಪೋರ್ಟ್ನಿಂದ ಹೈಜಾಕ್ ಮಾಡುತ್ತಾರೆ ಎಂದು ಸ್ವತಃ ಖುದ್ದು ಸುಧಾಕರ್ ನೂರಾರು ಬೆಂಬಲಿಗರೊಂದಿಗೆ ಆಗಮಿಸಿ ನಗರಸಭಾ ಸದಸ್ಯರನ್ನು ಸ್ವಾಗತಿಸಿ ಬಳಿಕ ಬಸ್ ಮೂಲಕ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ನಾಗಮಂಗಲದಲ್ಲಿ 144 ಸೆಕ್ಷನ್‌ ಜಾರಿ – ಇಂದು ಪಟ್ಟಣದ ಶಾಲಾ, ಕಾಲೇಜುಗಳಿಗೆ ರಜೆ

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸುಧಾಕರ್, ಕಾನೂನು ಬಾಹಿರವಾಗಿ ವಿಧಾನಪರಿಷತ್ ಸದಸ್ಯರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿದ್ದಾರೆ. ಜೆಡಿಎಸ್ ಸದಸ್ಯರನ್ನು ಬಲವಂತಾಗಿ ಕರೆದುಕೊಂಡು ಹೋಗಿದ್ದಾರೆ. ನಮ್ಮ ಸದಸ್ಯರನ್ನು ಏರ್ಪೋರ್ಟ್‌ನಿಂದ ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗುವ ಪ್ಲಾನ್ ಮಾಡಿದ್ದರು. ಹಾಗಾಗಿ ನಾನೇ ದೇವಸ್ಥಾನಕ್ಕೆ ಹೋಗಿ ಬಂದ ನಮ್ಮ ಸದಸ್ಯರನ್ನು ಕರೆದೊಯ್ಯಲು ಬಂದಿದ್ದೇನೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ತಪ್ಪಿತಸ್ಥರ ವಿರುದ್ಧ ಕ್ರಮ, ಬಂಧನ ಆಗುತ್ತೆ: ಗಣೇಶ ವಿಸರ್ಜನೆ ಗಲಾಟೆ ಬಗ್ಗೆ ಚಲುವರಾಯಸ್ವಾಮಿ ಪ್ರತಿಕ್ರಿಯೆ

Share This Article