ಹೈದರಾಬಾದ್: ಉದ್ಯೋಗಿಗಳ ಸಾಮಾಜಿಕ ಜಾಲತಾಣ ಲಿಂಕ್ಡ್‌ಇನ್ ಮೂಲಕ ಸ್ನೇಹಿತನಾಗಿದ್ದ ವ್ಯಕ್ತಿಯೋರ್ವ ಹೈದರಾಬಾದಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯಿಂದ 1 ಕೋಟಿ ರೂಪಾಯಿಗೂ ಅಧಿಕ ಹಣ ಪಡೆದು ಪಂಗನಾಮ ಹಾಕಿದ್ದಾನೆ.
ಕಳೆದ ಮೇ ತಿಂಗಳಲ್ಲಿ ಲಿಂಕ್ಡ್‌ಇನ್ ಮೂಲಕ ಅನಾಮಿಕ ವ್ಯಕ್ತಿಯೊಂದಿಗೆ ವಂಚನೆಗೊಳಗಾದ ಮಹಿಳೆ ಸ್ನೇಹ ಬೆಳೆಸಿಕೊಂಡಿದ್ದರು. ಮೊದಲು ಲಿಂಕ್ಡ್‌ಇನ್ ಮೂಲಕ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಅದನ್ನು ಮಹಿಳೆ ಸ್ವೀಕರಿಸಿದರು. ತಾನು ಪೈಲಟ್, ಬ್ರಿಟಿಷ್ ಏರ್‌ವೇಸ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಆರೋಪಿ ಮಹಿಳೆ ಜೊತೆ ಸ್ನೇಹ ಬೆಳೆಸಿದ್ದನು. ಕೆಲ ದಿನಗಳವರೆಗೆ ಚಾಟಿಂಗ್ ಮಾಡಿದ ಬಳಿಕ ಇಬ್ಬರು ತಮ್ಮ ಫೋನ್ ನಂಬರ್ ಹಂಚಿಕೊಂಡಿದ್ದರು. ಹೀಗೆ ಇಬ್ಬರ ನಡುವೆ ಸ್ನೇಹ ಗಟ್ಟಿಯಾಯ್ತು, ಚಾಂಟಿಂಗ್ ಕೂಡ ಹೆಚ್ಚಾಯಿತು.
Advertisement
Advertisement
ಹೀಗೆ ಒಂದು ದಿನ ಆಕೆಗೆ ಐಫೋನ್, ರೊಲೆಕ್ಸ್ ವಾಚ್, ದುಬಾರಿ ಪರ್ಫ್ಯೂಮ್ ಗಳು ಮತ್ತು ಕೆಲ ಬ್ರಿಟನ್ ಕರೆನ್ಸಿಗಳನ್ನು ಗಿಫ್ಟ್ ಆಗಿ ಪಾರ್ಸೆಲ್ ಕಳುಹಿಸುತ್ತೇನೆ. ಅದಕ್ಕೆ ಮೊದಲು ಹಣ ಬೇಕು ಎಂದು ಸುಳ್ಳು ಹೇಳಿ ಆರೋಪಿ ಮಹಿಳೆಯಿಂದ 7 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದನು. ನಂತರ ಮತ್ತೆ ವಾಟ್ಸಾಪ್‍ನಲ್ಲಿ ಆರೋಪಿ ನನ್ನ ತಂದೆಗೆ ಕ್ಯಾನ್ಸರ್ ಇದೆ ಆಸ್ಪತ್ರೆಯಲ್ಲಿದ್ದಾರೆ, ತುರ್ತಾಗಿ ಹಣ ಬೇಕಿತ್ತು ಎಂದು ಮಹಿಳೆ ಬಳಿ ಸಹಾಯ ಕೋರಿದ್ದ. ಆತನ ಮಾತನ್ನು ನಂಬಿ ಮಹಿಳೆ 11 ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 94 ಲಕ್ಷ ರೂಪಾಯಿ ವರ್ಗಾಯಿಸಿದ್ದರು.
Advertisement
Advertisement
ಬಳಿಕ ಆರೋಪಿ ಮಹಿಳೆಗೆ ಸಂಪರ್ಕಿಸಿಲ್ಲ. ಅಷ್ಟೇ ಅಲ್ಲದೆ ಹಲವು ದಿನಗಳು ಕಳೆದರೂ ಮಹಿಳೆಗೆ ಯಾವುದೇ ಪಾರ್ಸೆಲ್ ಬಂದಿರಲಿಲ್ಲ. ಆಗ ಆಕೆಗೆ ತಾನು ಮೋಸ ಹೋಗಿರುವುದು ಅರಿವಾಗಿ, ಸೈಬರ್ ಕ್ರೈಂ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಸದ್ಯ ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.