ಮುಂಬೈ: 2019ರ ಇಂಡಿಯನ್ ಪ್ರೀಮಿಯರ್ ಲೀಗ್‍ನ ಫೈನಲ್ ಪಂದ್ಯ ಚೆನ್ನೈ ಬದಲಾಗಿ ಹೈದರಾಬಾದ್‍ನಲ್ಲಿ ನಡೆಯಲಿದೆ. ಮೇ 12 ರಂದು ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.
ಕಳೆದ ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ತಂಡದ ತವರಿನಲ್ಲಿ ಟೂರ್ನಿಯ ಫೈನಲ್ ಪಂದ್ಯ ನಡೆಸಲಾಗುತ್ತದೆ. ಆದರೆ ಚಿದಂಬರಂ ಸ್ಟೇಡಿಯಂನಲ್ಲಿರುವ ಮೂರು ಕಡೆ ಪ್ರೇಕ್ಷಕರ ಸ್ಟ್ಯಾಂಡ್ ಗಳಿಗೆ ಸಂಬಂಧಿಸಿದ ವಿವಾದವನ್ನು ಬಗೆಹರಿಸಲು ತಮಿಳುನಾಡು ಕ್ರಿಕೆಟ್ ಸಂಸ್ಥೆ ವಿಫಲವಾಗಿತ್ತು. ಇದರಿಂದಾಗಿ ಬಿಸಿಸಿಐ ಅನಿವಾರ್ಯವಾಗಿ ಈ ಬಾರಿ ಫೈನಲ್ ಪಂದ್ಯವನ್ನು ಹೈದರಾಬಾದಿಗೆ ಶಿಫ್ಟ್ ಮಾಡಿದೆ.
Advertisement
ಟೂರ್ನಿಯ ಆರಂಭಿಕ ಪಂದ್ಯವನ್ನು ಚೆನ್ನೈ ತಂಡ ತವರಿನಲ್ಲಿ ಆಯೋಜನೆ ಮಾಡಿತ್ತು. ಆದರೆ ಫೈನಲ್ ಪಂದ್ಯ ನಡೆಸಲು ಬೇಕಾದ ಅನುಮತಿಯನ್ನು ಪಡೆದುಕೊಳ್ಳಲು ವಿಫಲವಾಗಿತ್ತು. ಇತ್ತ ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯ ಮೇ 8 ರಂದು ಹಾಗೂ 2ನೇ ಕ್ವಾಲಿಫೈರ್ ಪಂದ್ಯ ಮೇ 10 ರಂದು ವಿಶಾಖಪಟ್ಟಣದಲ್ಲಿ ನಡೆಯಲಿದೆ. ಚೆನ್ನೈ ಅಂಕಪಟ್ಟಿಯಲ್ಲಿ ಟಾಪ್ 2 ಸ್ಥಾನ ಪಡೆದರೆ ಮೊದಲ ಕ್ವಾಲಿಫೈಯರ್ ಚೆನ್ನೈನಲ್ಲಿ ನಡೆಯಲಿದೆ.