ಹೈದರಾಬಾದ್: ಕೆಲಸ ಸಿಕ್ಕಿದಕ್ಕೆ ಪಾರ್ಟಿ ಕೊಡಿಸುತ್ತೇನೆ ಬಾ ಅಂತ ಕರೆದು 24 ವರ್ಷದ ಯುವತಿ ಮೇಲೆ ಬಾಲ್ಯ ಸ್ನೇಹಿತನೇ (Childhood friend) ಅತ್ಯಾಚಾರ ನಡೆಸಿರುವ ಘಟನೆ ಹೈದರಾಬಾದ್‌ನಲ್ಲಿ (Hyderabad) ನಡೆದಿದೆ.
ಸಂತ್ರಸ್ತ ಮಹಿಳೆಯ (Techie Woman) ಬಾಲ್ಯ ಸ್ನೇಹಿತ ಸೇರಿ ಇಬ್ಬರು ಕಾಮುಕರು ಕೃತ್ಯ ಎಸಗಿದ್ದಾರೆ. ಸಂತ್ರಸ್ತೆ ಇತ್ತೀಚೆಗೆ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಕೇರಳ ಸಿಎಂ ಜೊತೆ ಸಿದ್ದರಾಮಯ್ಯ ದೂರವಾಣಿ ಮೂಲಕ ಮಾತುಕತೆ; ಅಗತ್ಯ ನೆರವು ನೀಡುವುದಾಗಿ ಭರವಸೆ
ಕೃತ್ಯ ನೆಡೆದಿದ್ದು ಹೇಗೆ?
ಸಂತ್ರಸ್ತ ಯುವತಿ ತನ್ನ ಬಾಲ್ಯ ಸ್ನೇಹಿತನಿಗೆ ಹೊಸ ಕೆಲಸ ಸಿಕ್ಕ ಖುಷಿಗೆ ಪಾರ್ಟಿ ಕೇಳಿದ್ದಳು. ಅದರಂತೆ ಪಾರ್ಟಿ ಕೊಡಿಸುವುದಾಗಿ ಹೇಳಿದ್ದ ಸ್ನೇಹಿತ ವನಸ್ಥಲಿಪುರಂನಲ್ಲಿರುವ ರೆಸ್ಟೋರೆಂಟ್-ಕಮ್-ಬಾರ್‌ಗೆ ಕರೆದುಕೊಂಡು ಹೋಗಿದ್ದ. ಇದೇ ವೇಳೆ ತನ್ನ ಸ್ನೇಹಿತನನ್ನೂ ಕರೆದುಕೊಂಡು ಬಂದಿದ್ದ.
ರೆಸ್ಟೋರೆಂಟ್‌ನಲ್ಲಿ ಯುವತಿಗೆ ಮದ್ಯ ಕುಡಿಸಿ, ತಾವೂ ಕುಡಿದಿದ್ದಾರೆ. ನಂತರ ರೆಸ್ಟೋರೆಂಟ್ ನಲ್ಲಿದ್ದ ಕೋಣೆಯೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಸ್ನೇಹಿತ ಅತ್ಯಾಚಾರ ಎಸಗಿದ ಬಳಿಕ ಮತ್ತೊಬ್ಬ ಸಹಪಾಠಿಯೂ ಆಕೆಯನ್ನ ರೇಪ್ ಮಾಡಿ, ಇಬ್ಬರೂ ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ಆನೇಕಲ್‌ನಲ್ಲಿ ತುಪಾಕಿ ಸದ್ದು – ಸಿನಿಮೀಯ ಶೈಲಿಯಲ್ಲಿ ಕಾಂಗ್ರೆಸ್ ಪುರಸಭಾ ಸದಸ್ಯ ಹಂತಕನ ಬಂಧನ
ಘಟನೆಯಿಂದ ಕಂಗಾಲಾಗಿದ್ದ ಸಂತ್ರಸ್ತೆ ತನ್ನ ಸಹೋದರನಿಗೆ ಕರೆ ಮಾಡಿ ವಿಷಯ ತಿಳಿಸಿದ ನಂತರ ಘಟನೆ ಬೆಳಿಕಿಗೆ ಬಂದಿದೆ. ಬಳಿಕ ವನಸ್ಥಲಿಪುರಂ ಪೊಲೀಸ್ ಠಾಣೆಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಕೇಸ್ ದಾಖಲಿಸಿಕೊಂಡು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿಸಿದೆ. ಇದನ್ನೂ ಓದಿ: Wayanad Landslide| ಪಾಪುವನ್ನು ಹಿಡಿಯುವಷ್ಟರಲ್ಲಿ ಗೋಡೆ ಕುಸಿದು ಬಿತ್ತು: ಕಣ್ಣೀರಿಟ್ಟ ತಾಯಿ