ಹೈದರಾಬಾದ್: ನವಜಾತ ಹೆಣ್ಣು ಶಿಶುವನ್ನು ಜೀವಂತವಾಗಿ ಹೂಳಲು ಬಂದ ಇಬ್ಬರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಇಂದು ಬೆಳಗ್ಗೆ ಹೈದರಾಬಾದ್‍ನ ಜುಬಲಿ ಬಸ್ ನಿಲ್ದಾಣದ ಬಳಿ ನಡೆದಿದ್ದು, ಆಗ ತಾನೇ ಜನಿಸಿರುವ ಹೆಣ್ಣು ಮಗುವನ್ನು ಗುಂಡಿ ತೆಗೆದು ಹೂಳುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
Advertisement
ಇಂದು ಬೆಳಗ್ಗೆ 9 ಗಂಟೆಯ ಸುಮಾರಿಗೆ ಇಬ್ಬರು ವ್ಯಕ್ತಿಗಳು ಬ್ಯಾಗ್ ಅನ್ನು ಹಿಡಿದುಕೊಂಡು ಬಸ್ ನಿಲ್ದಾಣದ ಬಳಿಯ ಹಳ್ಳದಲ್ಲಿ ಗುಂಡಿಯನ್ನು ತೆಗೆಯುತ್ತಿರುವುದನ್ನು ಸ್ಥಳೀಯ ಆಟೋರಿಕ್ಷಾ ಚಾಲಕರೊಬ್ಬರು ನೋಡಿದ್ದಾರೆ. ನಂತರ ಅವರು ಆ ಚೀಲದಲ್ಲಿ ಮಗು ಇರಬಹುದು ಎಂದು ಅನುಮಾನ ಪಟ್ಟು ಪೊಲೀಸರಿಗೆ ಕರೆ ಮಾಡಿ ವಿಚಾರದ ಬಗ್ಗೆ ತಿಳಿಸಿದ್ದಾರೆ.
Advertisement
Advertisement
ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಪೊಲೀಸ್ ಪೇದೆ ವೆಂಕಟ ರಾಮಕೃಷ್ಣ ಇಬ್ಬರು ಆರೋಪಿಗಳನ್ನು ಹಿಡಿದು ವಿಚಾರಿಸಿದ್ದಾರೆ. ಆದರೆ ತಪ್ಪಿಸಿಕೊಳ್ಳಲು ಅವರು ಇದು ನನ್ನ ಮೊಮ್ಮಗು ಸತ್ತು ಹೋಗಿದೆ. ನಮಗೆ ಹೂಳಲು ಎಲ್ಲೂ ಜಾಗವಿಲ್ಲದ ಕಾರಣ ಇಲ್ಲಿ ಹೂಳಲು ಬಂದಿದ್ದೇವೆ ಎಂದು ಹೇಳಿ ಪೊಲೀಸರು ದಾರಿ ತಪ್ಪಿಸಲು ಪ್ರಯತ್ನ ಮಾಡಿದ್ದಾರೆ.
Advertisement
ಇವರ ಹೇಳಿಕೆ ಮೇಲೆ ಅನುಮಾನ ಪಟ್ಟ ವೆಂಕಟ ರಾಮಕೃಷ್ಣ ಚೀಲ ತೆಗೆದು ಮಗುವನ್ನು ತೋರಿಸಿ ಎಂದು ಹೇಳಿದ್ದಾರೆ. ಈ ವೇಳೆ ಚೀಲ ತೆಗೆದು ನೋಡಿದಾಗ ಆ ಹೆಣ್ಣುಮಗು ಇನ್ನೂ ಬದುಕಿರುವುದು ಗೊತ್ತಾಗಿದೆ. ಆಗ ಕೂಡಲೇ ಆ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು, ಮಗುವನ್ನು ಹತ್ತಿರದ ಗಾಂಧಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಬಗ್ಗೆ ವಿಚಾರಣೆ ಮಾಡುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.