ಮುಂಬೈ: ಹೈದರಾಬಾದ್ ಉದ್ಯಮಿ ‘ಲಾಕ್ ಅಪ್’ ಶೋ ವಿರುದ್ಧ ಕಾಪಿರೈಟ್ ಪ್ರಕರಣವನ್ನು ದಾಖಲಿಸಿದ್ದು, ಈ ಶೋ ಮುಂದೂಡುವ ಸಾಧ್ಯತೆಯಿದೆ ಎಂದು ಮೂಲಗಳಿಂದ ಕೇಳಿಬರುತ್ತಿದೆ.
ಬಾಲಿವುಡ್ ತಲೈವಿ ಕಂಗನಾ ಹೋಸ್ಟ್ ಮಾಡುತ್ತಿರುವ ‘ಲಾಕ್‍ಆಪ್’ ಶೋ ವಿರುದ್ಧ ಹೈದರಾಬಾದ್ ಮೂಲದ ಉದ್ಯಮಿ ಸನೋಬರ್ ಬೇಗ್ ಕಾಪಿರೈಟ್ ಪ್ರಕರಣವನ್ನು ದಾಖಲಿಸಿದ್ದಾರೆ. ಪ್ರಸ್ತುತ ಅವರು ದೂರನ್ನು ಹೈದರಾಬಾದ್‍ನ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಕೊಟ್ಟಿದ್ದಾರೆ. ಈ ದೂರಿನಲ್ಲಿ ನನ್ನ ಐಡಿಯಾವನ್ನು ಕದ್ದು ‘ಲಾಕ್ ಅಪ್’ ಶೋ ಮಾಡುತ್ತಿದ್ದಾರೆ. ಈ ಹಿಂದೆ ನಾನು ಎಂಡೆಮೊಲ್ ಶೈನ್ ಇಂಡಿಯಾದ ಅಭಿಷೇಕ್ ಅವರೊಂದಿಗೆ ಈ ನನ್ನ ಪರಿಕಲ್ಪನೆಯನ್ನು ಹಂಚಿಕೊಂಡಿದ್ದೆ. ಅವನು ನನ್ನ ಐಡಿಯಾಗಳನ್ನು ಕದ್ದು ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ಮಾಡಿದ್ದಾನೆ ಎಂದು ತಿಳಿಸಿದರು. ಇದನ್ನೂ ಓದಿ: ಸಾವು ಗೆದ್ದು ಬಂದವಳ ‘ಸಾಹಸ’ ಕಥೆ : ಇದು ಕಥೆಯಲ್ಲ ಜೀವನ
Advertisement
View this post on Instagram
Advertisement
ದೂರಿನ ಆಧಾರದ ಮೇಲೆ ಸಿವಿಲ್ ನ್ಯಾಯಾಲಯವು ‘ಲಾಕ್‍ಆಪ್’ ಕಾರ್ಯಕ್ರಮವನ್ನು ಯಾವುದೇ ಪ್ಲಾಟ್‍ಫಾರ್ಮ್‍ನಲ್ಲಿ ಪ್ರದರ್ಶನ ಮಾಡಬಾರದು ಎಂದು ‘ಲಾಕ್ ಅಪ್’ ತಯಾರಕರಿಗೆ ನೋಟಿಸ್ ನೀಡಿದೆ.
Advertisement
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ನನ್ನ ಐಡಿಯಾ ಬಗ್ಗೆ 2018 ರಲ್ಲೇ ನೋಂದಾಯಿಸಿಕೊಂಡಿದ್ದೇನೆ. ನಂತರ ಈ ಬಗ್ಗೆ ಕೆಲಸ ಮಾಡಲು ನಿರ್ದೇಶಕ ಶಾಂತನು ರೆ ಅವರನ್ನು ನನ್ನ ಜೊತೆಗೆ ಸೇರಿಸಿಕೊಂಡೆ. ನಾವು ಈ ಐಡಿಯಾ ಬಗ್ಗೆ ಓಟಿಟಿವೊಂದಕ್ಕೆ ತಿಳಿಸಿದ್ದೆವು. ಆದರೆ ಇದರಿಂದ ಯಾವುದೇ ಪ್ರಯೋಜವಾಗಿಲ್ಲ. ನಮ್ಮ ಕೆಲಸ ಕಾರ್ಯರೂಪಕ್ಕೆ ಬರಲಿಲ್ಲ. ತದನಂತರ ಕೊರೊನಾದಿಂದ ಈ ಶೋ ಮಾಡುವುದು ಮತ್ತಷ್ಟು ವಿಳಂಬವಾಯಿತು ಎಂದು ವಿವರಿಸಿದರು.
Advertisement
ನಾನು ಅಭಿಷೇಕ್ ರೇಗೆ ಅವರೊಂದಿಗೆ ಬಹಳ ಸಮಯದಿಂದ ಸಂಪರ್ಕದಲ್ಲಿದ್ದೆ. ಈ ರೀತಿಯ ಶೋ ಮಾಡುವ ಬಗ್ಗೆ ನಾನು ಹೈದರಾಬಾದ್‍ನಲ್ಲಿ ವಿಷಯದ ಬಗ್ಗೆ ಹಲವಾರು ಸಭೆಗಳನ್ನು ನಡೆಸಿದ್ದೇನೆ. ಕೊರೊನಾದಿಂದ ಎಲ್ಲ ಮುಕ್ತವಾದ ನಂತರ ಈ ಶೋ ಮಾಡುವುದಾಗಿ ಎಲ್ಲರೂ ಭರವಸೆಯನ್ನು ಕೊಟ್ಟಿದ್ದರು. ಆದರೆ ಒಂದು ವಾರದ ಹಿಂದೆ, ನನ್ನ ಕನಸುಗಳುನ್ನು ಬೇರೊಬ್ಬರು ವಾಸ್ತವಕ್ಕೆ ತಿರುಗಿರುವುದನ್ನು ನಾನು ನೋಡಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಕ್ರಮದಲ್ಲಿ ಸಚಿವರು, ಶಾಸಕರ ಪಾತ್ರದ ಬಗ್ಗೆ ತನಿಖೆಯಾಗಲಿ: ಎಎಪಿ
ಒಂದು ವಾರದ ಹಿಂದೆ ಲಾಕ್‍ಆಪ್ ಪ್ರೋಮೋಗಳನ್ನು ನೋಡಿದ ತಕ್ಷಣವೇ ನ್ಯಾಯಾಲಯದ ಮೊರೆ ಹೋಗಬೇಕು ಎಂದು ನಿರ್ಧರಿಸಿದ್ದೆ. ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್‍ನ ಮೊರೆಹೋಗಲು ಮತ್ತು ಹೋರಾಡಲು ಸಿದ್ಧ ಎಂದು ಉದ್ಯಮಿ ತಿಳಿಸಿದರು.