ಹೈದರಾಬಾದ್: ಏಳನೇ ತರಗತಿಯಲ್ಲಿ ಓದುತ್ತಿರುವ ಹೈದರಾಬಾದ್ ಬಾಲಕನೋರ್ವ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಡೇಟಾ ಸೈಂಟಿಸ್ಟ್ ಆಗಿ ನೇಮಕಗೊಂಡು ಹೊಸ ದಾಖಲೆ ಬರೆದಿದ್ದಾನೆ.
ಹೈದರಾಬಾದಿನ ಶ್ರೀ ಚೈತನ್ಯ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿರುವ ಸಿದ್ಧಾರ್ಥ್ ಶ್ರೀವಾಸ್ತವ್ ಪಿಲ್ಲಿ (12) ಮಾಂಟೈಗ್ನೆ ಸ್ಮಾರ್ಟ್ ಬಿಸಿನೆಸ್ ಸೊಲ್ಯೂಷನ್ಸ್ ಎಂಬ ಸಾಫ್ಟ್ ವೇರ್ ಕಂಪನಿಯಲ್ಲಿ ಡೇಟಾ ಸೈಂಟಿಸ್ಟ್ ಆಗಿ ನೇಮಕವಾಗಿದ್ದಾನೆ.
Advertisement
Advertisement
ಈ ಚಿಕ್ಕ ವಯಸ್ಸಿನಲ್ಲೇ ಈ ಸಾಧನೆ ಮಾಡಿರುವ ಸಿದ್ಧಾರ್ಥ್ ಶ್ರೀವಾಸ್ತವ್ ಪಿಲ್ಲಿ, ನನಗೆ 12 ವರ್ಷ ಮತ್ತು ನಾನು ಮಾಂಟೈಗ್ನೆ ಸ್ಮಾರ್ಟ್ ಬಿಸಿನೆಸ್ ಸೊಲ್ಯೂಷನ್ಸ್ ಎಂಬ ಸಾಫ್ಟ್ ವೇರ್ ಕಂಪನಿಯಲ್ಲಿ ಡೇಟಾ ಸೈಂಟಿಸ್ಟ್ ಆಗಿ ಕೆಲಸ ಮಾಡುತ್ತೇನೆ. ನಾನು 7ನೇ ತರಗತಿಯಲ್ಲಿ ಶ್ರೀ-ಚೈತನ್ಯ ಟೆಕ್ನೋ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿದ್ದೇನೆ. ಚಿಕ್ಕ ವಯಸ್ಸಿನಲ್ಲಿ ನನಗೆ ಸಾಫ್ಟ್ ವೇರ್ ಕಂಪನಿಗೆ ಸೇರಲು ಸ್ಫೂರ್ತಿ ಎಂದರೆ ಅದು ತನ್ಮಯ್ ಬಕ್ಷಿ, ಅವರು ಕೂಡ ಚಿಕ್ಕ ವಯಸ್ಸಿನಲ್ಲೇ ಗೂಗಲ್ ಕಂಪನಿಗೆ ಕೆಲಸಕ್ಕೆ ಸೇರಿದ್ದರು ಎಂದು ಹೇಳಿದ್ದಾನೆ.
Advertisement
Advertisement
ನನಗೆ ಚಿಕ್ಕ ವಯಸ್ಸಿನಿಂದಲೂ ಈ ಕೆಲಸ ಪಡೆಯಲು ನನ್ನ ತಂದೆ ಸಾಕಷ್ಟು ಸಹಾಯ ಮಾಡಿದ್ದಾರೆ. ನಾನು ಚಿಕ್ಕವನಾಗಿದ್ದಾಗ ನಮ್ಮ ತಂದೆ ನನಗೆ ಕೋಡಿಂಗ್ ಮಾಡಲು ಹೇಳಿಕೊಡುತ್ತಿದ್ದರು. ಅವರು ನನಗೆ ವಿಭಿನ್ನ ಜೀವನಚರಿತ್ರೆಗಳನ್ನು ತೋರಿಸಿ ಕೋಡಿಂಗ್ ಮಾಡುವುದನ್ನು ಹೇಳಿಕೊಡುತ್ತಿದ್ದರು. ಇವತ್ತು ನಾನು ಏನಾದೂ ಮಾಡಿದ್ದರೆ ಅದಕ್ಕೆ ನನ್ನ ತಂದೆಯೇ ಕಾರಣ. ಅವರಿಗೆ ಧನ್ಯವಾದಗಳು ಎಂದು ಸಿದ್ಧಾರ್ಥ್ ಹೇಳಿದ್ದಾನೆ.