ಹೈದರಾಬಾದ್: ಗ್ರಾಹಕನೊಂದಿಗೆ ಸೆಕ್ಸ್ ಗೆ ನಿರಾಕರಿಸಿದ ಕಾರಣ ಬಾರ್ ಡ್ಯಾನ್ಸರ್ ಮೇಲೆ ಸಹದ್ಯೋಗಿಗಳು ಹಲ್ಲೆ ನಡೆಸಿರುವ ಅಮಾನವೀಯ ಕೃತ್ಯ ನಗರದಲ್ಲಿ ನಡೆದಿದೆ.
ಹಲ್ಲೆಗೊಳಗಾಗಿರುವ ಮಹಿಳೆ ಹೈದಾರಾಬಾದ್‍ನ ಬೇಗಂಪೇಟೆ ಪ್ರದೇಶದ ಪಬ್‍ವೊಂದರಲ್ಲಿ ಡ್ಯಾನ್ಸರ್ ಆಗಿ ಕೆಲ ತಿಂಗಳ ಹಿಂದೆ ಸೇರಿಕೊಂಡಿದ್ದಳು. ಆದರೆ ಕೆಲ ಸಮಯದ ನಂತರ ಅಲ್ಲಿನ ಮಾಲೀಕರು ಆಕೆಗೆ ಗ್ರಾಹಕರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಪೀಡಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆ ಗ್ರಾಹಕರೊಂದಿಗೆ ಸೆಕ್ಸ್ ಗೆ ನಿರಾಕರಿಸಿದಾಗ ಆಕೆಯ ನಾಲ್ಕು ಮಂದಿ ಮಹಿಳಾ ಸಹದ್ಯೋಗಿಗಳು ಸೇರಿದಂತೆ ಓರ್ವ ಡ್ಯಾನ್ಸರ್ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ಸಂಬಂಧ ಐಪಿಸಿ ಸೆಕ್ಷನ್ 354, 509, 506, 323 ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈಗಾಗಲೇ ನಾಲ್ವರು ಮಹಿಳೆಯರನ್ನು ಬಂಧಿಸಿ, ನ್ಯಾಯಾಂಗ ಬಂಧನದ ವಶಕ್ಕೆ ನೀಡಿದ್ದಾರೆ. ಓರ್ವ ಆರೋಪಿ ನಾಪತ್ತೆಯಾಗಿದ್ದು, ಆತನ ಬಂಧನಕ್ಕಾಗಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆಗೆ ಸಂಬಂಧಪಟ್ಟಂತೆ ತೆಲಂಗಾಣದ ಪೊಲೀಸ್ ಮಹಾ ನಿರ್ದೇಶಕ ಮಹೇಂದರ್ ರೆಡ್ಡಿ, ಪಂಜ್ಜಗುಟ್ಟ ಠಾಣೆಯ ಪೊಲೀಸರಿಂದ ವರದಿ ಕೇಳಿದ್ದಾರೆ.