ಹೈದರಾಬಾದ್: ಶಾಲೆಯಲ್ಲಿ ಕಬ್ಬಿಣದ ಗೇಟ್ ಬಿದ್ದು ತಲೆಗೆ ಪೆಟ್ಟಾದ ಕಾರಣ 6 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಹೈದರಾಬಾದ್‌ನ (Hyderabad) ಹಯಾತ್ ನಗರದ ಎಂಪಿಪಿ ಶಾಲೆಯಲ್ಲಿ ನಡೆದಿದೆ.
ಮೃತ ಬಾಲಕನನ್ನು 1ನೇ ತರಗತಿಯ ಅಜಯ್ ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ 4 ಗಂಟೆಯ ಸುಮಾರಿಗೆ ಶಾಲೆಯ ಕಬ್ಬಿಣದ ಗೇಟ್ ಬಳಿ ಆಟವಾಡುತ್ತಿದ್ದಾಗ ಘಟನೆ ನಡೆದಿದೆ.ಇದನ್ನೂ ಓದಿ: ಮೊದಲ ಫಲಿತಾಂಶ ಪ್ರಕಟ | ಕಮಲಾ, ಟ್ರಂಪ್‌ಗೆ ಬಿತ್ತು ತಲಾ 3 ಮತ – ಮಧ್ಯರಾತ್ರಿ ಚುನಾವಣೆ ಯಾಕೆ?
Advertisement
Advertisement
ಪೊಲೀಸರ ಮಾಹಿತಿಯ ಪ್ರಕಾರ, ಶಾಲೆಯಲ್ಲಿ ಕೆಲವು ಮಕ್ಕಳು ಗೇಟ್ ಮೇಲೆ ಏರಿ ಅದನ್ನು ಅತ್ತಿಂದಿತ್ತ ತಿರುಗಿಸುತ್ತಾ ಆಟವಾಡುತ್ತಿದ್ದರು. ಈ ವೇಳೆ ಅಜಯ್ ಕೂಡ ಆಟವಾಡುತ್ತಿದ್ದನು. ಗೇಟ್‌ನ ಜಾಯಿಂಟ್‌ಗಳು ಮುರಿದು ಅಲ್ಲಿಯೇ ಆಡುತ್ತಿದ್ದ ಅಜಯ್ ಮೇಲೆ ಬಿದ್ದಿದೆ. ಇದರಿಂದಾಗಿ ಆತನ ತಲೆಗೆ ಗಂಭೀರ ಗಾಯಗಳಾಗಿದ್ದವು. ಇದರಿಂದಾಗಿ ಬಾಲಕ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.
Advertisement
ಇದಕ್ಕೆ ಸಂಬಂಧಿಸಿದಂತೆ ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಈ ಘಟನೆ ಮೊದಲನೇಯದಲ್ಲ. ಇದಕ್ಕೂ ಮುನ್ನ ಇದೇ ಜು.31 ರಂದು ಗಿರಿಜಾ ಗಣೇಶ್ ಶಿಂಧೆ ಎಂಬ ಮೂರೂವರೆ ವರ್ಷದ ಬಾಲಕಿಯ ಮೇಲೆ ಕಬ್ಬಿಣದ ಗೇಟ್ ಬಿದ್ದು ಸಾವನ್ನಪ್ಪಿದ್ದಳು.
Advertisement
ಈ ಭೀಕರ ಅಪಘಾತವು ಸಮೀಪದ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ (CCTV Camera) ಸೆರೆಯಾಗಿದ್ದು, ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿತ್ತು. ಸಿಸಿಟಿವಿ ದೃಶ್ಯದಲ್ಲಿ ಗೇಟ್ ಬಳಿ ಆಟವಾಡುತ್ತಿದ್ದ ಮಕ್ಕಳು ಗೇಟ್‌ನ್ನು ಮುಚ್ಚಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಅಲ್ಲಿಯೇ ನಡೆದುಕೊಂಡ ಹೋಗುತ್ತಿದ್ದ ಗಿರಿಜಾ ಮೇಲೆ ಗೇಟ್ ಏಕಾಏಕಿ ಕುಸಿದು ಬಿದ್ದಿತ್ತು. ಇದರಿಂದಾಗಿ ಬಾಲಕಿ ಸಾವನ್ನಪ್ಪಿದ್ದಳು.ಇದನ್ನೂ ಓದಿ: ಬಿಟ್ಟಿ ಸಲಹೆ ಕೊಟ್ಟ ನೆಟ್ಟಿಗನಿಗೆ ಸಮಂತಾ ತಿರುಗೇಟು