ಹೈದರಾಬಾದ್: 62 ವರ್ಷದ ಪತಿಯೊಬ್ಬ 29 ವರ್ಷದ ಪತ್ನಿಗೆ ವಾಟ್ಸಪ್ ಮೂಲಕ ತಲಾಕ್ ನೀಡಿರುವ ಘಟನೆ ತೆಲಂಗಾಣದ ರಾಜಧಾನಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಹೈದರಾಬಾದ್ ನಿವಾಸಿ ಹುಮ ಸೈರಾ (29) ತನ್ನ 62 ವರ್ಷದ ಪತಿಯಿಂದ ವಾಟ್ಸಪ್ ಮೂಲಕ ತಲಾಕ್ ಪಡೆದ ಪತ್ನಿಯಾಗಿದ್ದಾರೆ. ಸೈರಾ ಎಂಬವರು 2017 ರ ಮೇ ತಿಂಗಳಲ್ಲಿ ಓಮನ್ ನಿವಾಸಿಯಾದ 62 ವರ್ಷದ ವ್ಯಕ್ತಿಯೊಬ್ಬರನ್ನು ಮದುವೆಯಾಗಿದ್ದರು. ವಿವಾಹದ ಬಳಿಕ ಆತನೊಂದಿಗೆ ಓಮನ್‍ಗೆ ತೆರಳಿ ಒಂದು ವರ್ಷಗಳ ಕಾಲ ಜೀವನ ಸಾಗಿಸಿದ್ದರು.
Advertisement
He sent me to my mother's place in Hyderabad on 30 Jul'18 for medical treatment. When I came here, he gave me talaq on WhatsApp on 12 Aug'18 & after that, he is not answering any of my questions. I request EAM Sushma Swaraj ma'am to help me. (2/2) #Telangana pic.twitter.com/e36d0zXJV5
— ANI (@ANI) September 19, 2018
Advertisement
ಈ ವೇಳೆ ಸೈರಾ ಓಮನ್ ನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಅನಾರೋಗ್ಯದಿಂದಾಗಿ ಮಗು ತನ್ನ 8ನೇ ತಿಂಗಳಿನಲ್ಲಿ ಮೃತಪಟ್ಟಿತ್ತು. ಇದಾದ ಬಳಿಕ ಪತಿ ಸೈರಾರನ್ನು ಚಿಕಿತ್ಸೆಯ ನೆಪವೊಡ್ಡಿ ಜುಲೈ 30 ರಂದು ಹೈದರಾಬಾದ್‍ನ ಆಕೆಯ ತಾಯಿ ಮನೆಗೆ ಕಳುಹಿಸಿಕೊಟ್ಟಿದ್ದಾನೆ.
Advertisement
ಪತ್ನಿ ಭಾರತಕ್ಕೆ ಮರಳಿದ ಮೇಲೆ ಆಕೆಯೊಂದಿಗೆ ಫೋನ್ ಸಂಭಾಷಣೆಯನ್ನು ನಿಲ್ಲಿಸಿದ್ದ. ಹೀಗಾಗಿ ಸೈರಾ ಎಷ್ಟೇ ಬಾರಿ ಸಂಪರ್ಕಕ್ಕೆ ಪ್ರಯತ್ನಿಸಿದ್ದರೂ ಸಫಲವಾಗಿರಲಿಲ್ಲ. ಈ ವೇಳೆ ಆಗಸ್ಟ್ 12 ರಂದು ಪತಿ ತನ್ನ ವಾಟ್ಸಪ್ ಮೂಲಕ ಪತ್ನಿಗೆ ತಲಾಖ್ ನೀಡಿದ್ದಾನೆ. ಪತಿಯ ತಲಾಖ್ ನಿಂದ ಆಘಾತಗೊಂಡ ಸೈರಾ ನ್ಯಾಯ ಕೊಡಿಸುವಂತೆ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಬಳಿ ಮನವಿ ಮಾಡಿಕೊಂಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv