Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮೈನಡುಗಿಸುವ ಚಳಿಯಲ್ಲೂ ಬೆಚ್ಚನೆಯ ಸಂಭ್ರಮ – ʻಹುತ್ತರಿʼ ಹಬ್ಬದ ಸಡಗರ; ಕೊಡಗಿನ ವಿವಿಧೆಡೆ ಜನಪದ ಲೋಕ ಸೃಷ್ಟಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಮೈನಡುಗಿಸುವ ಚಳಿಯಲ್ಲೂ ಬೆಚ್ಚನೆಯ ಸಂಭ್ರಮ – ʻಹುತ್ತರಿʼ ಹಬ್ಬದ ಸಡಗರ; ಕೊಡಗಿನ ವಿವಿಧೆಡೆ ಜನಪದ ಲೋಕ ಸೃಷ್ಟಿ

Districts

ಮೈನಡುಗಿಸುವ ಚಳಿಯಲ್ಲೂ ಬೆಚ್ಚನೆಯ ಸಂಭ್ರಮ – ʻಹುತ್ತರಿʼ ಹಬ್ಬದ ಸಡಗರ; ಕೊಡಗಿನ ವಿವಿಧೆಡೆ ಜನಪದ ಲೋಕ ಸೃಷ್ಟಿ

Public TV
Last updated: December 5, 2025 7:27 pm
Public TV
Share
3 Min Read
Huttari Festival 7
SHARE

ಮಡಿಕೇರಿ: ಕೊಡಗು (Kodagu) ಜಿಲ್ಲೆಯಾದ್ಯಂತ ಸುಗ್ಗಿ ಹಬ್ಬ ಪುತ್ತರಿ (ಹುತ್ತರಿ) ಸಂಭ್ರಮ ಗರಿಗೆದರಿತು. ಧಾನ್ಯ ಲಕ್ಷ್ಮಿಯನ್ನ ಮನೆ ತುಂಬಿಸಿಕೊಳ್ಳುವ ಹಬ್ಬದಾಚರಣೆ ಹಿನ್ನೆಲೆ ಕೊಡಗು ಜಿಲ್ಲೆಯ ವಿವಿಧೆಡೆ ಸಾಂಸ್ಕೃತಿಕ ವೈಭವ ಮೇಳೈಸಿದೆ, ಅಲ್ಲಲ್ಲಿ ಜನಪದ ಲೋಕವೇ ಸೃಷ್ಟಿಯಾಯಿತು. ಕೊಡವರ ವಿಶೇಷ ವೋಲಗದೊಂದಿಗೆ ಸಂಸ್ಕೃತಿ ಆಚಾರ-ವಿಚಾರಗಳ ʻಆಟ್ ಪಾಟ್ʼ ಕಾರ್ಯಕ್ರಮಗಳಿಗೆ ಮಡಿಕೇರಿ ಕೋಟೆಯ ಆವರಣ ಸಾಕ್ಷಿಯಾಯಿತು.

ಹೌದು. ಕೊಡಗಿನಾದ್ಯಂತ ಹುತ್ತರಿ ಹಬ್ಬವನ್ನ (Huttari Festival) ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ.. ಮಹಿಳೆಯರ ತಳಿಯತಕ್ಕಿ ಬೊಳ್ಚ ದುಡಿಕೊಟ್‌ಪಾಟ್‌ನೊಂದಿಗೆ ಜಾಗಟೆ, ಡೋಲು ಸಹಿತ ಕುಶಾಲ ತೋಪು ಸಿಡಿಸಿ ಪೊಲಿಪೊಲಿ ದೇವಾ ಉದ್ಘೋಷಗಳ ನಡುವೆ ಕದಿರನ್ನು ತೆಗೆದು ತೆನೆಗಳನ್ನ ಮಂಟಪದಲ್ಲಿರಿಸಿ ವಿಶೇಷ ಲಕ್ಷ್ಮಿ ಪೂಜೆ ನೆರವೇರಿಸಲಾಯಿತು. ಇದನ್ನೂ ಓದಿ: ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧನೆ; ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಹೆಚ್‌ಡಿಕೆ ಪತ್ರ

Huttari Festival

ಕೊಡವರ ಸಾಂಪ್ರದಾಯಿಕ ಮತ್ತು ಶ್ರೇಷ್ಠ ಹಬ್ಬವೆಂದು ಗುರುತಿಸಿಕೊಂಡಿರುವ ಹುತ್ತರಿಯ ಆಚರಣೆಯ ಸಂಭ್ರಮ ಮಡಿಕೇರಿಯ ಕೋಟೆಯ ಆವರಣದಲ್ಲಿ ಮನೆಮಾಡಿತ್ತು. ಇತಿಹಾಸದ ಗತವೈಭವಕ್ಕೆ ಕೋಟೆ ಆವರಣ ಸಾಕ್ಷಿಯಾಯಿತು. ಹಿಂದಿನಿಂದಲೂ ಆಚರಿಸಿಕೊಂಡು ಬಂದ ಕಲೆ ಸಂಸ್ಕ್ರತಿಗಳು ಅನಾವರಣಾಗೊಂಡವು. ಕೊಡಗಿನ ಸುಗ್ಗಿ ಹಬ್ಬ ಹುತ್ತರಿ ಪ್ರಯುಕ್ತ ನಡೆದ ಸಾಂಪ್ರದಾಯಿಕ ಕೋಲಾಟ ನೋಡುಗರ ಮನಸೊರೆಗೊಂಡಿತು. ಇದನ್ನೂ ಓದಿ: ಇಂಡಿಗೋ ವಿಮಾನ ಹಾರಾಟ ವ್ಯತ್ಯಯ – ವೀಡಿಯೋ ಕಾನ್ಫರೆನ್ಸ್‌ನಲ್ಲಿ ಆರತಕ್ಷತೆಗೆ ಭಾಗಿಯಾದ ಟೆಕ್ಕಿಗಳು

Huttari Festival 2

ಕೋಲಾಟಕ್ಕೊಂದು ಇತಿಹಾಸ
ಕೊಡಗನ್ನಾಳುತ್ತಿದ್ದ ರಾಜರು ಕೋಟೆಯ ಆವರಣದಲ್ಲಿ ಕೋಲಾಟ ನಡೆಸಲು ಅನುವು ಮಾಡಿಕೊಟ್ಟಿದ್ದರಂತೆ, ಆ ನಂತರದಲ್ಲಿ ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಕೋಲಾಟಕ್ಕೆ ಕೋಟೆಯ ಹೊರತಾಗಿ ಗದ್ದುಗೆಯ ಬಳಿ ಅವಕಾಶ ಕಲ್ಪಿಸಿಕೊಟ್ಟರಂತೆ. ತದನಂತರದಲ್ಲಿ ಕೆಲ ವರ್ಷಗಳಿಂದೀಚೆಗೆ ಇತ್ತೀಚೆಗೆ ಮತ್ತೆ ಕೋಟೆ ಆವರಣದಲ್ಲಿ ಹುತ್ತರಿ ಕೋಲಾಟ ನಡೆಸುವ ಮೂಲಕ ನಮ್ಮ ಐತಿಹಾಸಿಕ ಕಲೆ ಸಂಸ್ಕ್ರತಿ ಬಿಂಬಿಸಲಾಗುತ್ತಿದೆ. ಅಲ್ಲದೇ ಇತ್ತೀಚಿನ ಯುವ ಪೀಳಿಗೆ ಕೊಡವ ಸಂಸ್ಕೃತಿ ಮರೆಯುತ್ತಿರುವ ಹಿನ್ನೆಲೆ ಯುವ ಸಮೂಹಕ್ಕೆ ಉತ್ಸಾಹ ತುಂಬುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

Huttari Festival 5

ಈ ಬಾರಿಯು ಕೂಡ ಹುತ್ತರಿಯ ಪ್ರಯುಕ್ತ ಸಾಂಪ್ರದಾಯಿಕ ಕೋಲಾಟ, ಕತ್ತಿಯಾಟ ಬೋಳಕಾಟ್ ಪರಿಯ ಕಳಿ ಸೇರಿದಂತೆ ಮತ್ತಿತರ ಸಾಂಸ್ಕ್ರತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು. ಹಲವು ತಂಡಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಕರ್ಷಕ ಸಾಂಪ್ರದಾಯಿಕ ನೃತ್ಯ ಪ್ರದಶಿಸಿದವು. ಅಲ್ಲದೇ ಕಾರ್ಯಕ್ರಮಕ್ಕೆ ಅಗಮಿಸಿದ ನೂರಾರು ಜನರು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸುವ ಮೂಲಕ ಗಮನಸೆಳೆದರು. ಇದನ್ನೂ ಓದಿ: ಇಂಡಿಗೋ ಸಮಸ್ಯೆ – ಬೆಂಗಳೂರು ಏರ್‌ಪೋರ್ಟ್‌ನಲ್ಲಿ ತಂದೆಯ ಅಸ್ಥಿ ಹಿಡಿದು ಮಗಳ ಪರದಾಟ

Huttari Festival 6

ಹುತ್ತರಿ ಹಬ್ಬದ ವಿಶೇಷ ಏನು?
ಹುತ್ತರಿ ಕೊಡಗಿನ ಸುಗ್ಗಿ ಹಬ್ಬ. ಬೀಸುವ ಗಾಳಿ, ಮೈನಡುಗಿಸುವ ಚಳಿಯಲ್ಲೂ ಬೆಚ್ಚನೆಯ ಸಂಭ್ರಮ ಉಕ್ಕೇರಿಸುವ ಸಡಗರದ ಹಬ್ಬ. ಬಡವ-ಬಲ್ಲಿದ, ಹಳ್ಳಿ-ಪಟ್ಟಣಗಳ ಹಂಗಿಲ್ಲದ ಮನೆ ಮನೆ ಹಬ್ಬ. ಕೊಡಗಿನ ಪ್ರಮುಖ ಹಬ್ಬ ಪುತ್ತರಿ ಧಾನ್ಯಲಕ್ಷ್ಮಿಯನ್ನ ಮನೆಗೊಯ್ಯೋ ಜಾನಪದೀಯ ವಿಶಿಷ್ಟ ಹಬ್ಬ ನಿಜಕ್ಕೂ ವೈಶಿಷ್ಟ್ಯಪೂರ್ಣ. ಸಾಂಪ್ರದಾಯಿಕ ಉಡುಗೆತೊಟ್ಟ ಕೊಡವರು ದೇವಾಲಯದ ಅವರಣದಲ್ಲಿ ಇರುವ ಭತ್ತದ ತೇನೆಗೆ ನಮಿಸಿ ನೆರೆಕಟ್ಟುತ್ತಾರೆ. ನಂತರ ದುಡಿಕಟ್ಟು ಪಾಟ್ ಸಮೇತ ಕೋವಿಯೊಂದಿಗೆ ಊರಿನ ಮಂದಿಯೆಲ್ಲಾ ಮೆರವಣಿಗೆ ಮೂಲಕ ಗದ್ದೆಗೆ ತೆರಳುತ್ತಾರೆ. ಅಲ್ಲಿ ಸಂಭ್ರಮದಿಂದ ಒಂದು ಸುತ್ತು ಗುಂಡು ಹಾರಿಸಿ ಕದಿರು ಕುಯ್ಯುತ್ತಾರೆ, ಪುಲಿ ಪುಲಿ ದೇವಾ ಪೊಲಿಯೇ ದೇವಾ ಎಂದು ಸಂತಸದಿಂದ ಕೂಗುತ್ತಾ ಧಾನ್ಯಲಕ್ಷ್ಮಿಯನ್ನ ಶಾಸ್ತ್ರೋಕ್ತವಾಗಿ ತೆಗೆದು ಸಾಂಪ್ರದಾಯಿಕ ಹಾಡಿನೊಂದಿಗೆ ಸಾಗುತ್ತಾರೆ..

Huttari Festival 4

ಅಧಿಕೃತವಾಗಿ ಕೊಡಗಿನಾದ್ಯಂತ ಪುತ್ತರಿಗೆ ಇಂದು ಚಾಲನೆ ಸಿಕ್ಕಿದೆ. ಕೊಡವರ ಕುಲದೈವ ಇಗ್ಗುತಪ್ಪನ ಸನ್ನಿಧಿಯಲ್ಲಿ ನೆರೆಕಟ್ಟುವ ಮೂಲಕ ಇದಕ್ಕೆ ಚಾಲನೆ ಸಿಗುತ್ತದೆ. ಅಂದ್ರೆ ಪ್ರಕೃತಿಯೊಂದಿಗೆ ಹೊಂದಿಕೊಂಡ ಕೊಡಗಿನ ಜನರ ಆಚಾರದ ಸಂಕೇತವಾಗಿ 5 ಬಗೆಯ ಹಸಿರು ಮರದ ಎಲೆಗಳು, ಉಂಬಳಿ, ಹಲಸು, ಗೇರು, ಮಾವು ಸೇರಿದಂತೆ 5 ಬಗೆಯ ಹಸಿರೆಲೆಗಳನ್ನ ಒಟ್ಟುಗೂಡಿಸಿ ನೆರೆಕಟ್ಟಿ ಗುರುವಿಗೆ-ದೈವಕ್ಕೆ ನಮಿಸಲಾಗುತ್ತೆ. ನಂತರ ಕದಿರು ತೆಗೆಯಲಾಗುತ್ತೆ. ಇದಾದ ನಂತರ ಜಿಲ್ಲೆಯಾದ್ಯಂತ ಇರುವ ಗದ್ದೆಗಳಲ್ಲಿ ಕದಿರು ತೆಗೆಯಲಾಗುತ್ತದೆ. ವಿಶಿಷ್ಟ ಸಂಸ್ಕೃತಿ ಆಚಾರ ವಿಚಾರ.. ಹೀಗೆ ಸಂಭ್ರಮ ಸಡಗರದಿಂದ ಎಲ್ಲರು ಒಂದೆಡೆ ಕಲೆತು ವರ್ಷಪೂರ್ತಿ ಮನೆ ಮಂದಿಗೆಲ್ಲಾ ಅನ್ನನೀಡೋ ಧಾನ್ಯಲಕ್ಷ್ಮಿಯನ್ನ ಪೂಜ್ಯಭಾವನೆಯಿಂದ ಮನೆಗೆ ಬರಮಾಡಿಕೊಳ್ಳಲಾಗುತ್ತೆ.

TAGGED:celebrationcoorgHuttarihuttari festivalKodagumadikeriಕೊಡವರುಮಡಿಕೇರಿಹುತ್ತರಿ ಹಬ್ಬ
Share This Article
Facebook Whatsapp Whatsapp Telegram

Cinema news

Rashmika mandanna
IMDB ಟಾಪ್-10 ಲಿಸ್ಟ್‌ನಲ್ಲಿ ಕನ್ನಡದ ʻRRRʼ ತಾರೆಯರಿಗೆ ಸ್ಥಾನ
Cinema Latest Sandalwood Top Stories
gilli bigg boss
‘ಗಿಲ್ಲಿ’ ಈ ವಾರದ ಕಳಪೆ
Cinema Latest Top Stories TV Shows
Pushpa 2
ʻಪುಷ್ಪ-2ʼಗೆ ವರ್ಷದ ಸಂಭ್ರಮ – ಫ್ಯಾನ್ಸ್‌ಗೆ ಧನ್ಯವಾದ ಹೇಳಿದ ಅಲ್ಲು ಅರ್ಜುನ್‌
Cinema Latest South cinema
Kangana Ranaut
Fashion Trends | ನಯಾ ಲುಕ್‌ನಲ್ಲಿ ಕ್ವೀನ್‌ ಕಂಗನಾ
Bollywood Cinema Latest

You Might Also Like

H D Kumaraswamy 4
Latest

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧನೆ; ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಹೆಚ್‌ಡಿಕೆ ಪತ್ರ

Public TV
By Public TV
37 minutes ago
Bengaluru Airport 2
Bengaluru City

ಇಂಡಿಗೋ ಸಮಸ್ಯೆ – ಬೆಂಗಳೂರು ಏರ್‌ಪೋರ್ಟ್‌ನಲ್ಲಿ ತಂದೆಯ ಅಸ್ಥಿ ಹಿಡಿದು ಮಗಳ ಪರದಾಟ

Public TV
By Public TV
59 minutes ago
IndiGo flight cancellations Bengaluru Techie couple attends their own wedding reception virtually
Dharwad

ಇಂಡಿಗೋ ವಿಮಾನ ಹಾರಾಟ ವ್ಯತ್ಯಯ – ವೀಡಿಯೋ ಕಾನ್ಫರೆನ್ಸ್‌ನಲ್ಲಿ ಆರತಕ್ಷತೆಗೆ ಭಾಗಿಯಾದ ಟೆಕ್ಕಿಗಳು

Public TV
By Public TV
1 hour ago
Eranna Kadadi 3
Latest

ಕಬ್ಬು ಬೆಳೆಗಾರರ ಸಮಸ್ಯೆ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ಸಂಸದ ಈರಣ್ಣ ಕಡಾಡಿ

Public TV
By Public TV
2 hours ago
Rottweiler Attack Death
Davanagere

ದಾವಣಗೆರೆ | ಮಹಿಳೆಯನ್ನು ಕಚ್ಚಿ ಕಚ್ಚಿ ಕೊಂದ ರಾಟ್ ವೀಲರ್

Public TV
By Public TV
2 hours ago
abhishek spandana bigg boss
Cinema

ಬಿಗ್‌ ಬಾಸ್‌ ಮನೆಗೆ ಮೊದಲ ಜೋಡಿ ಕ್ಯಾಪ್ಟನ್‌ – ಟಾಸ್ಕ್‌ ಆಡದೇ ಕ್ಯಾಪ್ಟನ್‌ ಆದ ಸ್ಪಂದನಾ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?