ಹಾಸನ: ಮದುವೆ ಆದ ಒಂದೇ ವರ್ಷಕ್ಕೆ ಗೃಹಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಘಟನೆ ಹಾಸನದಲ್ಲಿ ನಡೆದಿದೆ.
ಅಜ್ಮಯ್(21) ಮೃತ ಗೃಹಿಣಿ. ಅಜ್ಮಯ್‍ಗೆ ಕಳೆದ ವರ್ಷ ಮೊಹಮ್ಮದ್ ಯಾಸಿನ್ ಜೊತೆ ವಿವಾಹವಾಗಿತ್ತು. ಮೊಹಮ್ಮದ್ ಯಾಸಿನ್ ಇದೀಗ ವರದಕ್ಷಿಣೆ ಕಿರುಕುಳ ನೀಡಿ ಅಜ್ಮಯ್‍ಳನ್ನು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಮೊಹಮ್ಮದ್ ಯಾಸಿನ್ ಪ್ರಾರಂಭದಿಂದಲೂ ವರದಕ್ಷಿಣೆಗಾಗಿ ಪತ್ನಿ ಅಜ್ಮಯ್‍ನನ್ನು ಪೀಡಿಸುತ್ತಿದ್ದನು. ಯಾಸಿನ್ ಗುರುವಾರ ಅಜ್ಮಯ್ ಮೇಲೆ ಹಲ್ಲೆ ಮಾಡಿ ಕೊಂದು ನೇಣು ಹಾಕಿದ್ದಾನೆ ಎಂದು ಗೃಹಿಣಿಯ ಪೋಷಕರು ಆರೋಪಿಸುತ್ತಿದ್ದಾರೆ.
ಅಜ್ಮಯ್ ಆರು ತಿಂಗಳ ಗರ್ಭಿಣಿಯಾಗಿದ್ದು, ಆಕೆಯ ಬಯಕೆಯಂತೆ ಹೋಳಿಗೆ ನೀಡಲು ಪೋಷಕರು ಯಾಸಿನ್ ಮನೆಗೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಪತಿ ಮೊಹಮ್ಮದ್ ಯಾಸಿನ್ ನನ್ನು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಹಾಸನದ ಕೆ.ಆರ್ ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.