ಹುಬ್ಬಳ್ಳಿ: ಪತಿ ಹಾಗೂ ಅತ್ತೆ ಸೇರಿ ಔಷಧಿ ಎಂದು ಗರ್ಭಿಣಿಗೆ ವಿಷ ಕುಡಿಸಿ ಭ್ರೂಣ ಹತ್ಯೆ ಮಾಡಿರುವ ಅಮಾನವೀಯ ಘಟನೆ ಹಳೇ ಹುಬ್ಬಳ್ಳಿಯ ಅಲ್ತಾಫ್ ಫ್ಲಾಟ್ನಲ್ಲಿ ನಡೆದಿದೆ.
ಪತಿ ಇಮಾಮ್ ಹಾಗೂ ಅತ್ತೆ ಫಾತಿಮಾ ಈ ಕೃತ್ಯ ಎಸಗಿದವರು. ವಿಷ ಸೇವಿಸಿದ ಶಾಹಿನಾ ಗರ್ಭದಲ್ಲಿದ್ದ ಭ್ರೂಣ ಮೃತಪಟ್ಟಿದೆ. ಶಹಿನಾ ಹಾಗೂ ಇಮಾಮ್ ಇಬ್ಬರಿಗೂ ಒಂದು ವರ್ಷದ ಹಿಂದೆ ಮದುವೆಯಾಗಿತ್ತು. ವಿವಾಹದ ನಂತರ ಇಮಾಮ್ ಹಾಗೂ ಅವರ ತಾಯಿ ಶಹಿನಾಗೆ ಹಿಂಸೆ ನೀಡುತ್ತಿದ್ದರು.
Advertisement
Advertisement
ಇತ್ತೀಚೆಗೆ ಶಹಿನಾರನ್ನು ತವರು ಮನೆಗೆ ಕಳುಹಿಸಿದ್ದರು. ಹಿರಿಯರು ರಾಜಿ ಮಾಡಿಸಿ ಮತ್ತೆ ಗಂಡನ ಮನೆಗೆ ಸೇರಿಸಿದ್ದರು. ಆದರೆ ಅತ್ತೆ ಹಾಗೂ ಗಂಡ ಮತ್ತೆ ಕಿರುಕುಳ ನೀಡಲು ಆರಂಭಿಸಿದ್ದರು. ಇದೀಗ ಹಾಲಿನಲ್ಲಿ ವಿಷ ಸೇರಿಸಿ ಶಹಿನಾಗೆ ಕುಡಿಸಿದ್ದರು. ವಿಷ ಸೇವಿಸಿದ ನಂತರ ಹೊಟ್ಟೆ ನೋವು ತೀವ್ರವಾದ ಪರಿಣಾಮ ಕೂಡಲೇ ಶಹಿನಾರನ್ನು ಆಸ್ಪತ್ರೆಗೆ ದಾಖಲಿಸಿದ್ದರು.
Advertisement
ಈ ವೇಳೆ ವೈದ್ಯರು ಪರೀಕ್ಷೆ ಮಾಡಿದಾಗ ಹೊಟ್ಟೆಯಲ್ಲಿದ್ದ ಭ್ರೂಣ ಮೃತಪಟ್ಟಿರುವುದು ದೃಢವಾಗಿದೆ. ಹೀಗಾಗಿ ವೈದ್ಯರು ಭ್ರೂಣವನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಕುರಿತು ಹುಬ್ಬಳ್ಳಿಯ ಕಸಬಾ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.