ಚಂಡೀಗಢ: ತನ್ನ ಸ್ನೇಹಿತನ ಜೊತೆ ಪತ್ನಿಯ ಪೋರ್ನ್ ವಿಡಿಯೋ ನೋಡಿದ ಪತಿಯೊಬ್ಬ ಕೋಪದಿಂದ ಆಕೆಯನ್ನು ಗುಂಡಿಕ್ಕಿ ಕೊಲೆ ಮಾಡಲು ಯತ್ನಿಸಿದ ಘಟನೆ ಸೆಪ್ಟೆಂಬರ್ 15ರಂದು ಹರಿಯಾಣದ ಯಮುನನಗರದಲ್ಲಿ ನಡೆದಿದೆ.
ನರೇಶ್ ಕೊಲೆ ಮಾಡಲು ಯತ್ನಿಸಿದ ಪತಿ. ಪತ್ನಿ ಸೋನಿಯಾ ತನ್ನ ಪತಿ ನರೇಶ್ ಜೊತೆ ವಾಸಿಸುತ್ತಿರಲಿಲ್ಲ. ಅಲ್ಲದೆ ನ್ಯಾಯಾಲಯದಲ್ಲಿ ಇವರಿಬ್ಬರ ಡಿವೋರ್ಸ್ ಪ್ರಕರಣ ಕೂಡ ನಡೆಯುತ್ತಿತ್ತು. ಕೆಲವು ದಿನಗಳ ಹಿಂದೆ ನರೇಶ್ ಸ್ನೇಹಿತರು ಸೋನಿಯಾ ಪೋರ್ನ್ ವಿಡಿಯೋವನ್ನು ಆತನಿಗೆ ತೋರಿಸಿದ್ದಾರೆ. ಅಲ್ಲದೆ ಇಂತಹ ಪತ್ನಿ ಇರುವ ಬದಲು ಪತ್ನಿ ಇಲ್ಲದಿರುವುದೇ ಉತ್ತಮ ಎಂದು ಆತನನ್ನು ಪ್ರಚೋದಿಸಿದ್ದಾರೆ. ಇದನ್ನೂ ಓದಿ: ಪತ್ನಿಗೆ ಸ್ನೇಹಿತರೊಟ್ಟಿಗೂ ಮಲಗು ಎಂದ ವಿಕೃತ ಪತಿ – ಸೆಕ್ಸ್ ವಿಡಿಯೋ ಇಟ್ಟುಕೊಂಡು ಬ್ಲಾಕ್‍ಮೇಲ್
ಈ ವಿಡಿಯೋ ನೋಡಿದ ನರೇಶ್ ಈ ಬಗ್ಗೆ ಸೋನಿಯಾಳನ್ನು ಪ್ರಶ್ನಿಸಲು ಯಮುನನಗರಕ್ಕೆ ತೆರಳಿದ್ದನು. ನರೇಶ್ ಮೊದಲು ವಿಡಿಯೋ ಬಗ್ಗೆ ಸೋನಿಯಾಳನ್ನು ಪ್ರಶ್ನಿಸಿದ್ದಾನೆ. ಆದರೆ ಸೋನಿಯಾ ಇದಕ್ಕೆ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ನರೇಶ್ ಸೋನಿಯಾಗೆ ಗುಂಡಿಕ್ಕಿ ಕೊಲೆ ಮಾಡಲು ಯತ್ನಿಸಿದ್ದಾನೆ. ನರೇಶ್ ಕೊಲೆಗೆ ಯತ್ನಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಅದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸೋನಿಯಾಳನ್ನು ಆಕೆಯ ಸ್ನೇಹಿತರು ಚಂಡಿಗಢ್ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಇತ್ತ ಪೊಲೀಸರು ಆರೋಪಿ ನರೇಶ್‍ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ನರೇಶ್, “ನನ್ನ ಪತ್ನಿ ನನ್ನನ್ನು ಬಿಟ್ಟು ಯಮುನನಗರದಲ್ಲಿ ತನ್ನ ಸ್ನೇಹಿತರ ಜೊತೆ ವಾಸಿಸುತ್ತಿದ್ದಾಳೆ. ನಾನು ಸೋನಿಯಾಳನ್ನು ತುಂಬಾ ಪ್ರೀತಿಸುತ್ತೇನೆ. ಆದರೆ ಆಕೆಯ ನಡುವಳಿಕೆ ನನಗೆ ಇಷ್ಟವಾಗುತ್ತಿರಲಿಲ್ಲ. ಹಾಗಾಗಿ ನಾನು ಕೊಲೆ ಮಾಡಲು ಯತ್ನಿಸಿದೆ” ಎಂದು ಹೇಳಿದ್ದಾನೆ.