8 ವರ್ಷದ ಹಿಂದೆ ಪ್ರೀತಿಸಿ ಮದ್ವೆಯಾದ- ಇದೀಗ ಕಾಣೆಯಾಗಿದ್ದಾಳೆಂದು ದೂರು ಕೊಟ್ಟು ಸಿಕ್ಕಿಬಿದ್ದ!

Public TV
1 Min Read
WIFE MURDER

ಅಮಾರವತಿ: ಪ್ರೀತಿಸಿ ಮದುವೆಯಾದ ವ್ಯಕ್ತಿಯೊಬ್ಬ ಇದೀಗ ತನ್ನ ಪತ್ನಿಯನ್ನು ಬರ್ಬರವಾಗಿ ಕೊಲೆಗೈದು ಬಳಿಕ ಕಾಣೆಯಾಗಿದ್ದಾಳೆಂದು ದೂರು ನೀಡಿರುವ ಪ್ರಕರಣವೊಂದು ಆಂಧ್ರಪ್ರದೇಶದಲ್ಲಿ ನಡೆದಿದೆ.

ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯ ಕೊತ್ತವಲಸ್ ಮಂಡಲದ ಜೋಡಿಮೇರಕದಲ್ಲಿ ಈ ಘಟನೆ ನಡೆದಿದೆ. ಲಕ್ಷ್ಮಿಯನ್ನು ಆಕೆಯ ಪತಿ ನಾಗರಾಜ್ ಕೊಲೆ ಮಾಡಿ ಪೊಲೀಸರ ಮುಂದೆ ಕಥೆ ಕಟ್ಟಿ ಇದೀಗ ಸಿಕ್ಕಿಬಿದ್ದಿದ್ದಾನೆ.

marriage

8 ವರ್ಷಗಳ ಹಿಂದೆ ನಾಗರಾಜ್, ಲಕ್ಷ್ಮಿಯನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದ. ಸದ್ಯ ಈ ದಂಪತಿಗೆ ಮಗು ಕೂಡ ಇದೆ. ಕಳೆದ ತಿಂಗಳ 30 ರಿಂದ ಪತ್ನಿ ಲಕ್ಷ್ಮಿ ಕಾಣಿಸುತ್ತಿಲ್ಲವೆಂದು ನಾಗರಾಜ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದಾನೆ. ಇದನ್ನೂ ಓದಿ: ಪ್ಯಾಡಿಂಗ್ ಧರಿಸುವುದರ ಹಿಂದಿನ ಕಾರಣ ಬಿಚ್ಚಿಟ್ಟ ‘ನಿನ್ನಿಂದಲೇ’ ಹೀರೋಯಿನ್

marriage

ಪತ್ನಿಯನ್ನು ಕೊಲೆ ಮಾಡಿ ನಾಗರಾಜ್ ಬೆಂಕಿ ಹಚ್ಚಿದ್ದಾನೆ. ಈ ವಿಚಾರ ಯಾರಿಗೂ ಗೊತ್ತಾಗಬಾರದೆಂದು ಕೊಲೆ ಮಾಡಿದ ಬೆನ್ನಲ್ಲೇ ಪ್ರಕರಣ ಮುಚ್ಚಿ ಹಾಕುವ ಉದ್ದೇಶದಿಂದ ಪತ್ನಿ ಕಾಣೆಯಾಗಿದ್ದಾಳೆಂದು ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲು ಮಾಡಿದ್ದಾನೆ. ದೂರು ದಾಖಲು ಮಾಡಿಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: 8 ತಿಂಗಳ ಮಗುವಿನ ಮೇಲೆ ಹಲ್ಲೆಗೈದ Caretaker – ಮೆದುಳಿನಲ್ಲಿ ರಕ್ತಸ್ರಾವ

POLICE JEEP

ನಾಗರಾಜ್ ವರ್ತನೆಯಿಂದ ಅನುಮಾನಗೊಂಡಿರುವ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಆತನಿಗೆ ಬೇರೆ ಮಹಿಳೆ ಜೊತೆ ಸಂಬಂಧವಿರುವ ಮಾಹಿತಿ ಕೂಡ ಕೊಟ್ಟಿದ್ದಾರೆ. ಅದರಂತೆ ಪೊಲೀಸರು ನಾಗರಾಜನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದಾಗ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *