2ನೇ ಪತ್ನಿಯ ಕತ್ತು ಕೊಯ್ದ ಪತಿ ಮಹಾಶಯ ಪರಾರಿ

Public TV
1 Min Read
couple chikkabalapura 1 1

ಚಿಕ್ಕಬಳ್ಳಾಪುರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಎರಡನೇ ಪತ್ನಿಯ ಕತ್ತು ಕೊಯ್ದು ಪತಿಯೊಬ್ಬ ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಪಟ್ರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಪತಿ ಸುರೇಶ್ ತನ್ನ ಎರಡನೇ ಪತ್ನಿ ಉಷಾ ಅವರ ಕತ್ತು ಕೊಯ್ದು ಕೊಲೆ ಮಾಡಲು ಯತ್ನಿಸಿದ್ದು, ಅದೃಷ್ಟವಶಾತ್ ಪತ್ನಿ ಪ್ರಾಣಾಪಯದಿಂದ ಪಾರಾಗಿದ್ದಾರೆ. ಪ್ರಸ್ತುತ ಉಷಾ ಅವರು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಪುನೀತ್‍ರಂತೆಯೇ ಯಾವಾಗಲು ಒಳ್ಳೆಯ ಕೆಲಸ ಮಾಡೋಣ: ವಿಜಯ ರಾಘವೇಂದ್ರ

couple chikkaballapura

ಏನಿದು ಘಟನೆ?
ಅಂದರ್ಹಳ್ಳಿ ಗ್ರಾಮದ ಸುರೇಶ್ ಚಿಕ್ಕಬಳ್ಳಾಪುರ ಗೃಹರಕ್ಷಕದಳ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದು, ಮೊದಲ ಪತ್ನಿ ಇದ್ದರೂ ಉಷಾ ಜೊತೆ ಎರಡನೇ ಮದುವೆಯಾಗಿದ್ದ. ಇಬ್ಬರು ಪತ್ನಿಯರಿಗೂ ಇಬ್ಬರು ಮಕ್ಕಳು ಸಹ ಇದ್ದಾರೆ. ಆದ್ರೆ ಕಳೆದ 2-3 ವರ್ಷಗಳಿಂದ ಉಷಾ ಮತ್ತು ಸುರೇಶ್ ನಡುವೆ ದಾಂಪತ್ಯದಲ್ಲಿ ಬಿರುಕು ಮೂಡಿ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.

couple chikkabalapura

ಉಷಾ ತನ್ನ ಹಾಗೂ ತನ್ನಿಬ್ಬರ ಮಕ್ಕಳ ಜೀವನ ನಿರ್ವಹಣೆಗೆ ಜೀವನಾಂಶದ ಹಣ ಕೊಡುವಂತೆ ಲಾಯರ್ ಮೂಲಕ ಸುರೇಶ್ ಗೆ ನೋಟಿಸ್ ಕಳುಹಿಸಿದ್ದರು. ಇದರಿಂದ ರೋಸಿ ಹೋದ ಸುರೇಶ್ ತವರುಮನೆಯಲ್ಲಿದ್ದ ಉಷಾ ಅವರ ಮನೆಗೆ ಮಕ್ಕಳನ್ನ ನೋಡುವ ನೆಪದಲ್ಲಿ ಹೋಗಿದ್ದ. ಈ ವೇಳೆ ಮನೆಯಲ್ಲಿದ್ದ ಉಷಾ ಅವರ ಕತ್ತನ್ನ ಚಾಕುವಿನಿಂದ ಕೊಯ್ದು ಪರಾರಿಯಾಗಿದ್ದಾನೆ. ನಂತರ ಅಕ್ಕಪಕ್ಕದ ಮನೆಯವರು ಉಷಾ ಅವರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಭ್ರಷ್ಟನಿಗೆ ಅಂಬಿ ಕಾಯಕ ಪ್ರಶಸ್ತಿ

ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಸುರೇಶ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *