ವಿಜಯಪುರ: ಗಂಡು ಮಗು ಆಗಲಿಲ್ಲ ಎಂದು ವ್ಯಕ್ತಿಯೊಬ್ಬ ಹೆಂಡತಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಬೀದಿ ಪಾಲು ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರದ ಭಜಂತ್ರಿ ಕಾಲೋನಿ ನಿವಾಸಿಯಾದ ಕಾವ್ಯ ಮತ್ತು ಪ್ರಭು 2011 ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಇವರಿಗೆ ಎರಡು ಮುದ್ದಾದ ಹೆಣ್ಣು ಮಕ್ಕಳು ಇದ್ದಾರೆ.
ಆದ್ರೆ ಗಂಡು ಮಗು ಆಗದ ಕಾರಣ ಪ್ರಭು ತಾಯಿ ಮಾತು ಕೇಳಿ ಊಟದಲ್ಲಿ ವಿಷದ ಮಾತ್ರೆ ಬೆರಸಿ ಕಾವ್ಯಾಗೆ ಕೊಟ್ಟಿದ್ದಾರೆ ಎನ್ನುವ ಆರೋಪವೊಂದು ಕೇಳಿಬಂದಿದೆ. ಘಟನೆಯಿಂದ ಕಾವ್ಯ ಅದೃಷ್ಟವಶಾತ್ ಬದುಕುಳಿದಿದ್ದು, ಆಕೆಯ ಹೊಟ್ಟೆಯಲ್ಲಿ ಭ್ರೂಣ ಮಾತ್ರ ಉಳಿಯಲಿಲ್ಲವಂತೆ. ಇಷ್ಟಕ್ಕೆ ಸುಮ್ಮನಾಗದ ಪಾಪಿ ಗಂಡ ಪ್ರಭು ಕಾವ್ಯಾ ಮತ್ತು ಎರಡು ಹೆಣ್ಣು ಮಕ್ಕಳನ್ನು ಬೀದಿಪಾಲು ಮಾಡಿ ಪರಾರಿಯಾಗಿದ್ದಾನೆ.
ಸದ್ಯ ಆಶ್ರಯ ಇಲ್ಲದೆ ಕಾವ್ಯ ಮತ್ತು ಎರಡು ಮಕ್ಕಳು ಬೀದಿ ಬೀದಿ ಅಲೆದಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಇಷ್ಟಾದ್ರು ಕಾವ್ಯ ಮಾತ್ರ ಗಂಡ ಬೇಕು, ಗಂಡ ಬೇಕು ಅಂತಾ ಅಂತ ಕಣ್ಣೀರು ಸುರಿಸುತ್ತಿದ್ದಾರೆ.