ಕಲಬುರಗಿ | ಪತ್ನಿಯ ಶೀಲ ಶಂಕಿಸಿ ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಂದ ಪತಿ

Public TV
1 Min Read
Kalaburagi Murder copy

ಕಲಬುರಗಿ: ಪತ್ನಿಯ ಶೀಲದ ಬಗ್ಗೆ ಶಂಕಿಸಿ ಪತಿ ಆಕೆಯನ್ನು ರಸ್ತೆ ಮಧ್ಯೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ನಗರದ ಶಹಾಬಜಾರ್ ಬಡಾವಣೆಯಲ್ಲಿ ನಡೆದಿದೆ.

ಕಲಬುರಗಿ (Kalaburagi) ತಾಲೂಕಿನ ಕಲ್ಲಹಂಗರಗಾ ಗ್ರಾಮದ ರೂಪಾ (32) ಕೊಲೆಯಾಗಿರುವ ಮಹಿಳೆ. ಪತಿ ವೆಂಕಟೇಶ್ ಕೊಲೆ ಮಾಡಿದ ಆರೋಪಿ. ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡು ಮಾಡೆಲ್ ಆತ್ಮಹತ್ಯೆ

ಆರೋಪಿ ವೆಂಕಟೇಶ್ 10 ವರ್ಷಗಳ ಹಿಂದೆ ರೂಪಾಳನ್ನು ಮದುವೆಯಾಗಿದ್ದ. 3 ತಿಂಗಳ ಹಿಂದೆಯೇ ಪತ್ನಿಯ ಶೀಲ ಶಂಕಿಸಿ ಆಕೆಯೊಂದಿಗೆ ವೆಂಕಟೇಶ್ ಜಗಳವಾಡಿದ್ದ. ಇದರಿಂದ ಬೇಸತ್ತ ರೂಪಾ ಪತಿಯನ್ನು ಬಿಟ್ಟು ತನ್ನ ಮಕ್ಕಳೊಂದಿಗೆ ಶಹಾಬಜಾರ್ ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಇದನ್ನೂ ಓದಿ: ದೆಹಲಿಯ ಶಾಬಾದ್ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ – ಬಾಲ್ಕನಿಯಿಂದ ಹಾರಿದ ತಂದೆ, ಇಬ್ಬರು ಮಕ್ಕಳು ಸಾವು

ಜೀವನ ನಿರ್ವಹಣೆಗಾಗಿ ಹೋಟೆಲ್‌ನಲ್ಲಿ ಸಮೋಸ ಮಾಡುತ್ತಿದ್ದ ರೂಪಾ, ಮಂಗಳವಾರ ಬೆಳಗ್ಗೆ 8:30ರ ಆಸುಪಾಸಿನಲ್ಲಿ ನಡೆದುಕೊಂಡು ಹೋಟೆಲ್‌ಗೆ ತೆರಳುತ್ತಿದ್ದಾಗ ಅಲ್ಲಿಗೆ ಬಂದ ಆಕೆಯ ಪತಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಇದನ್ನೂ ಓದಿ: Assam | 45 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್ – ನಾಲ್ವರು ಅರೆಸ್ಟ್

ವೆಂಕಟೇಶ್, ಪತ್ನಿಗೆ ಚಾಕು ಇರಿದು ಬೈಕ್‌ನಲ್ಲಿ ಪರಾರಿಯಾಗುತ್ತಿರುವ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿಯ ಆಧಾರದ ಮೇಲೆ ವೆಂಕಟೇಶ್ ವಿರುದ್ಧ ಚೌಕ ಪೊಲೀಸ್ ಠಾಣೆಯಲ್ಲಿ (Chowk Police Station) ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ಕಮೀಷನರ್ ಡಾ.ಶರಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article