ಬೆಂಗಳೂರು: ಪಾಪಿ ಗಂಡನೊಬ್ಬ ಕೇವಲ ಹತ್ತು ಸಾವಿರ ರೂ. ನೀಡಲಿಲ್ಲ ಎಂದು ತನ್ನ ಹೆಂಡತಿಯ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ನಾಗರಬಾವಿಯಲ್ಲಿ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ಪತ್ನಿ ತಪಸಿ ಮೇಲೆ ಚಿತಂಜಿತ್ ಬಿಸ್ವಾಸ್ ಆ್ಯಸಿಡ್ ದಾಳಿ ಮಾಡಿದ್ದಾನೆ. 8 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಒಂದು ವರ್ಷದಿಂದ ಕೆಲಸಕ್ಕೋಗದೆ ಮನೆಯಲ್ಲೆ ಇದ್ದು, ಕುಡಿತದ ದಾಸನಾಗಿದ್ದ ಪಾಪಿ ಗಂಡ ಬಾಡಿಗೆ ತಾಯ್ತನದ ಮೂಲಕ ಹಣಗಳಿಸಬಹುದೆಂದು ಯೋಚಿಸಿದ್ದನು.
ಈ ಕಾರಣದಿಂದ ನಾಗರಬಾವಿಯಲ್ಲಿರುವ ವರದಾ ಪರ್ಟಿಲಿಟಿ ಕೇಂದ್ರಕ್ಕೆ ತೆರಳಿ ಈ ಬಗ್ಗೆ ವಿಚಾರಿಸಿಕೊಂಡಿದ್ದನು. ಇದೇ ಫೆಬ್ರವರಿ 20ರಂದು ಆಸ್ಪತ್ರೆಗೆ ತೆರಳಿ ವಾಪಸ್ಸಾಗುವಾಗ ಹೆಂಡತಿ ಬಳಿ ಹಣ ಕೇಳಿದ್ದನು. ಹಣ ಇಲ್ಲ ಎಂದಾಗ ಹೆಂಡತಿಯ ಮುಖ, ಎದೆ, ಬೆನ್ನಿಗೆ ಆ್ಯಸಿಡ್ ಎರಚಿ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.
ಸದ್ಯ ಪತ್ನಿ ತಪಸಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv