ಚಿಕ್ಕಬಳ್ಳಾಪುರ: ಗಂಡ, ಹೆಂಡತಿಯ ಜಗಳ ಉಂಡು ಮಲಗುವ ತನಕ ಅಂತಾರೆ. ಆದರೆ ಇಲ್ಲೊಂದು ದಂಪತಿಯ ಜಗಳ ವಿಕೃತ ಕೊಲೆಯಲ್ಲಿ ಅಂತ್ಯವಾದ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆ ಚಿಂತಾಮಣಿ ನಗರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಮೂಲದ ಸುಮೈರಾ ಸುಲ್ತಾನ್ (40) ಹಾಗೂ ಶಿಡ್ಲಘಟ್ಟ ಮೂಲದ ಮುನಿಕೃಷ್ಣ ಇಬ್ಬರು ಕಳೆದ ಕೆಲವು ವರ್ಷಗಳಿಂದ ಲೀವ್ ಇನ್ ರಿಲೇಶನ್ ಶಿಪ್‌ನಲ್ಲಿದ್ದರು. ಆದರೆ ಇಬ್ಬರೂ ಸ್ಥಳೀಯರ ಬಳಿ ತಾವು ಪತಿ, ಪತ್ನಿಯರೆಂದೇ ಹೇಳಿಕೊಂಡು ಓಡಾಡುತ್ತಿದ್ದರು. ಆದರೆ ಇಂದು ನಗರದ ಗ್ರಂಥಾಲಯ ಮುಂದೆ ನಡು ರಸ್ತೆಯಲ್ಲಿ ಜಗಳ ಮಾಡಿಕೊಂಡು ನೂಕಾಟ ತಳ್ಳಾಟ ಮಾಡುತ್ತಿದ್ದರು. ಆಗ ರಸ್ತೆಯಲ್ಲಿ ಲಾರಿಯೊಂದು ಬಂದಿದೆ. ಲಾರಿಯನ್ನು ನೋಡಿದ ಆಕೆಯ ಗಂಡ ಮುನಿಕೃಷ್ಣ, ಉದ್ದೇಶ ಪೂರ್ವಕವಾಗಿಯೇ ಸುಮೈರಾ ಸುಲ್ತಾನ್‌ಳನ್ನು ಲಾರಿ ಕೆಳಗೆ ತಳ್ಳಿದ್ದಾನೆ. ಇದರಿಂದ ಸುಮೈರಾ ಸುಲ್ತಾನ್ ಸ್ಥಳದಲ್ಲಿ ಪ್ರಾಣ ಬಿಟ್ಟಿದ್ದಾಳೆ.
ಅಲ್ಲೇ ಪಕ್ಕದಲ್ಲಿದ್ದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಆರೋಪಿ ಮುನಿಕೃಷ್ಣನನ್ನು ಬಂಧಿಸಿದ್ದಾರೆ. ಒಟ್ಟಿಗೆ ಇರುವ ಮೊದಲೇ ಇಬ್ಬರಿಗೂ ಬೇರೆ ಬೇರೆ ವಿವಾಹವಾಗಿತ್ತು. ಆದರೆ 8 ವರ್ಷಗಳ ಹಿಂದೆ ತಮ್ಮ ತಮ್ಮ ಸಂಸಾರ ಬಿಟ್ಟು ಚಿಂತಾಮಣಿ ನಗರದದಲ್ಲಿ ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ದಂಪತಿಗೆ ಬಾಬಾಜಾನ್ ಎನ್ನುವ 4 ವರ್ಷದ ಮಗುವಿದೆ. ಇದನ್ನೂ ಓದಿ: ಮೈಸೂರು ರಿಂಗ್ ರಸ್ತೆ – ಬೀದಿ ದೀಪಗಳ MCBಯನ್ನೇ ಕದ್ದ ಕಳ್ಳರು
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಚಿಂತಾಮಣಿ ನಗರ ಪೊಲೀಸ್ ಠಾಣೆಯ ಆರಕ್ಷಕ ವೃತ್ತ ನಿರೀಕ್ಷರಾದ ರಂಗಸ್ವಾಮಯ್ಯ ಮತ್ತು ಸಿಬ್ಬಂದಿ ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಲಾರಿಯನ್ನು ವಶಕ್ಕೆ ಪಡೆದು ಕೊಲೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಲೇಡಿ PSI ಕಿರುಕುಳ ಆರೋಪ- ಡೆತ್‌ನೋಟ್ ಬರೆದಿಟ್ಟು ಯುವಕ ನಾಪತ್ತೆ