ತಿರುವನಂತಪುರಂ: ನಿಪಾ ವೈರಸ್‍ಗೆ ಬಲಿಯಾದ ನರ್ಸ್ ಲಿನಿ ಕುಟುಂಬಕ್ಕೆ ಕೇರಳ ಸರ್ಕಾರದ 20 ಲಕ್ಷ ರೂ. ಪರಿಹಾರ ಹಾಗೂ ಪತಿಗೆ ಸರ್ಕಾರಿ ಉದ್ಯೋಗ ನೀಡುವ ಭರವಸೆಯನ್ನು ನೀಡಿದೆ.
ಈ ಕುರಿತು ಮಾಹಿತಿ ನೀಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್, ನಿಪಾ ಸೋಂಕು ಹರಡುವಿಕೆಯ ಸದ್ಯದ ಪರಿಸ್ಥಿತಿ ಬಗ್ಗೆ ಕ್ಯಾಬಿನೆಟ್ ಮಾಹಿತಿ ಪಡೆದಿದ್ದು, ಇದುವರೆಗೂ ಸಾವನ್ನಪ್ಪಿರುವ ಕುರಿತ ನಿಖರ ಮಾಹಿತಿ ಸಂಗ್ರಹಿಸಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ಸೋಂಕು ಹರಡಿ ಸಾವನ್ನಪ್ಪಿದ್ದ ಲಿನಿ ಅವರ ಕುಟುಂಬ ಸದಸ್ಯರಿಗೆ ಸೋಂಕು ವ್ಯಾಪಿಸಿದ್ದರೆ ಚಿಕಿತ್ಸೆಗಾಗಿ 5 ಲಕ್ಷ ರೂ. ನೀಡುವ ಕುರಿತು ಭರವಸೆ ನೀಡಿದ್ದಾರೆ.
Advertisement
ಸೋಂಕಿನ ತಡೆಯುವ ಹಾಗೂ ಈ ಕುರಿತು ಜಾಗೃತಿ ಮೂಡಿಸುವ ಕುರಿತು ರಾಜ್ಯದ ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೋಂಕು ನಿಯಂತ್ರಣಗೊಂಡ ಬಳಿಕವೂ ಕೆಲ ದಿನಗಳ ಕಾಲ ಈ ಕುರಿತು ಹೆಚ್ಚಿನ ಜಾಗೃತಿ ವಹಿಸಲಾಗುತ್ತದೆ. ಸೋಂಕು ತಡೆಯಲು ಬೇಕಾದ ಪೂರಕ ಸಹಾಯವನ್ನು ಕೇಂದ್ರ ಸರ್ಕಾರವು ಸಕಾಲದಲ್ಲಿ ನೀಡಿದೆ ಎಂದು ರಾಜ್ಯ ಆರೋಗ್ಯ ಸಚಿವೆ ಶೈಲಜಾ ತಿಳಿಸಿದ್ದಾರೆ.
Advertisement
ಇದುವರೆಗೂ ಯಾವುದೇ ಹೊಸ ವ್ಯಕ್ತಿಗೆ ಸೋಂಕು ಹರಡಿರುವ ಕುರಿತು ಮಾಹಿತಿ ಲಭಿಸಿಲ್ಲ. ಈ ಕುರಿತು ಹೆಚ್ಚಿನ ಜಾಗ್ರತಿ ವಹಿಸಲಾಗಿದೆ. ಕೇಂದ್ರ ಸರ್ಕಾರ ಸೋಂಕು ತಡೆಗೆ ಬೇಕಾದ ಮಾತ್ರೆಗಳನ್ನು ಬಳಸುವಂತೆ ಸಲಹೆ ನೀಡಿದೆ ಎಂದರು.