ಕೊಪ್ಪಳ: ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವ ಗಾದೆ ಮಾತಿದೆ. ಆದರೆ ಇಲ್ಲೊಬ್ಬ ಪತಿ ಮಹಾಶಯ ವರದಕ್ಷಿಣೆ ದಾಹಕ್ಕೆ ಪತ್ನಿ ಮತ್ತು ಮಗುವನ್ನು ಬಿಟ್ಟು ಇನ್ನೊಂದು ಮದುವೆಯಾಗಿ ಮೊದಲ ಹೆಂಡತಿಗೆ ಮೋಸ ಮಾಡಿದ ಪ್ರಕರಣವೊಂದು ಕೊಪ್ಪಳದಲ್ಲಿ ನಡೆದಿದೆ.
2017ರಲ್ಲಿ ಗಂಗಾವತಿಯ ಮೆಹಬೂಬ್ ನಗರ ನಿವಾಸಿ ಖಾಜಾಪಾಷಾ ಜೊತೆ ವಹೀದಾಬಾನು ಮದುವೆಯಾಗಿತ್ತು. ಮದುವೆ ಮಾರನೇ ದಿನವೇ ಕಿರುಕುಳ ಆರಂಭವಾಗಿತ್ತು. ಮದುವೆ ಸಮಯದಲ್ಲಿ ವರದಕ್ಷಿಣೆ ನೀಡಿಲ್ಲ ಹಣ ಕೊಡಬೇಕು ಎಂದು ಗಂಡ ಪೀಡಿಸುತ್ತಿದ್ದ. 7 ತಿಂಗಳು ಗಂಡನ ಮನೆಯಲ್ಲಿ ಕಳೆದು ಗರ್ಭಿಣಿಯಾದ ಬಳಿಕ ತವರು ಮನೆಗೆ ಕಳಿಸಿದ್ದಾರೆ. ಮನೆಗೆ ಬರಬೇಕಾದರೆ 1 ಲಕ್ಷ ಹಣ ತರಬೇಕೆಂದು ಪತಿ ಷರತ್ತು ಹಾಕಿ ಬಿಟ್ಟು ಹೋಗಿದ್ದ. ಮಗುವಾದ ಬಳಿಕ 1 ವರ್ಷ ಕಳೆದರೂ ಪತಿ ಮಗು ನೋಡಲು ಬಂದಿಲ್ಲ. ಬದಲಿಗೆ ಇನ್ನೊಂದು ಮದುವೆ ಮಾಡಿಕೊಂಡಿದ್ದಾನೆ.
ವಹೀದಾಬಾನುಗೆ ತಂದೆ ಇಲ್ಲ. ತಂದೆ ಸ್ಥಾನದಲ್ಲಿ ಈಕೆಯ ಅಣ್ಣ, ತಂಗಿ ಖುಷಿಗಾಗಿ ಮದುವೆ ಸಮಯದಲ್ಲಿ ವರೋಪಚಾರವನ್ನೆಲ್ಲ ನೀಡಿದ್ದಾರೆ. ಮದುವೆ ಸಮಯದಲ್ಲಿ ಒಂದೂವರೆ ಲಕ್ಷ ನಗದು, 4 ತೊಲ ಬಂಗಾರ ಕೊಟ್ಟು ಖಾಜಾ ಪಾಷಾನ್ನೊಂದಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಇಷ್ಟೆಲ್ಲಾ ನೀಡಿದರೂ ಖಾಜಾ ಪಾಕ್ಷಾಗೆ ಹಣದ ಆಸೆಯಿಂದ ತನ್ನ ಪತ್ನಿಯನ್ನು ಇನ್ನೂ ಹಣ ತರುವಂತೆ ನಿತ್ಯ ಪೀಡಿಸುತ್ತಿದ್ದಾನೆ.
ನಾವೆಲ್ಲ ಕಡು ಬಡವರಾಗಿದ್ದರೂ ಮದುವೆಗೆ ಯಾವುದೇ ಕುಂದು ಕೊರತೆ ಬರದಂತೆ ಮಾಡಿದರೂ ಸಹ ಖಾಜಾಪಾಷಾ ಕುಟುಂಬಸ್ಥರು ನಮಗೆ ಮೋಸ ಮಾಡಿದ್ದಾರೆ. ನಮಗೆ ಯಾವುದೇ ಮಾಹಿತಿ ನೀಡದೇ 2ನೇ ಮದುವೆ ಮಾಡಿಕೊಂಡು ನನ್ನ ತಂಗಿಗೆ ಮೋಸ ಮಾಡಿದ್ದಾರೆ. ನಮಗೆ ನ್ಯಾಯ ಕೊಡಿಸಿ ಎಂದು ವಹೀದಾಬಾನು ಅವರ ಅಣ್ಣ ನಾಸೀರ್ ಹುಸೇನ್ ಬೇಡಿಕೊಂಡಿದ್ದಾರೆ.
ಮದುವೆಯಾಗಿ ಸುಖಿ ಸಂಸಾರ ಜೀವನ ನಡೆಸಬೇಕಿದ್ದ ಯುವತಿ ಕೇವಲ 7 ತಿಂಗಳಲ್ಲೇ ಸಂಸಾರ ಜೀವನದಲ್ಲಿ ನರಕಯಾತನೆ ಅನುಭವಿಸಿದ್ದಾಳೆ. ತನ್ನ ಹೆಂಡತಿ, ಮಗುವನ್ನು ಬೀದಿಗೆ ತಳ್ಳಿದ ಗಂಡ ರಾಜಾರೋಷವಾಗಿ ಮೆರೆದಾಡುತ್ತಿದ್ದಾನೆ. ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಪತ್ನಿ ವಹೀದಾಬಾನು ಬೇಡಿಕೊಳ್ಳುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews