ಚಿತ್ರದುರ್ಗ: ಹಣ-ಆಸ್ತಿ ಕಳೆಯಬೇಡ, ದುಂದುವೆಚ್ಚ ಮಾಡಬೇಡ ಎಂದು ಬುದ್ಧಿ ಹೇಳಿದ ಪತ್ನಿಯನ್ನೇ ಪಾಪಿ ಪತಿ ಉಸಿರುಗಟ್ಟಿಸಿ ಕೊಂದಿರುವ ಪ್ರಕರಣ ಚಿತ್ರದುರ್ಗ (Chitradurga) ತಾಲ್ಲೂಕಿನ ಮೆದೇಹಳ್ಳಿ (Medehalli) ಗ್ರಾಮದಲ್ಲಿ ನಡೆದಿದೆ.
ಈ ಗ್ರಾಮದ ಉಮಾಪತಿ ಎಂಬ ಆಸಾಮಿ ಶ್ರೀದೇವಿ (48) ಜೊತೆ ವಿವಾಹವಾಗಿ, ಅನ್ಯೋನ್ಯವಾಗಿದ್ದರು. ಆದರೆ ಉಮಾಪತಿ ತನ್ನ ಜಮೀನು ಮಾರಾಟದಿಂದಾಗಿ ಬಂದ ಹಣವನ್ನೆಲ್ಲಾ ಮನಬಂದಂತೆ ಖರ್ಚು ಮಾಡುತ್ತಾನೆಂಬ ಹಿನ್ನೆಲೆ ಪತ್ನಿ ಶ್ರೀದೇವಿ ಆಗಾಗ್ಗೆ ಎಚ್ಚರಿಸುತಿದ್ದಳು. ಈ ವಿಚಾರಕ್ಕೆ ಇಬ್ಬರ ಮಧ್ಯೆ ಕಲಹ ನಿರಂತರವಾಗಿತ್ತು. ಇದನ್ನೂ ಓದಿ: ದೆಹಲಿ ಸಿಎಂ ಅತಿಶಿಗೆ ಗೆಲುವು – ಕಲ್ಕಾಜಿ ಕ್ಷೇತ್ರ ಉಳಿಸಿಕೊಂಡ ಆಪ್ ನಾಯಕಿ
Advertisement
Advertisement
ಇನ್ನು ಉಳಿದ ಜಮೀನನ್ನು ತನ್ನ ಹೆಸರಿಗೆ ಹಾಗೂ ಮಗಳ ಹೆಸರಿಗೆ ಮಾಡಿಸಿಕೊಡಿ ಎಂದು ಒತ್ತಾಯ ಸಹ ಮಾಡುತ್ತಿದ್ದರು. ಇದರಿಂದಾಗಿ ಆಕ್ರೋಶಗೊಂಡ ಉಮಾಪತಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸ್ಕೆಚ್ ಹಾಕಿ, ಫೆಬ್ರವರಿ 7 ರಂದು ಬೆಳಗ್ಗೆ ಶ್ರೀದೇವಿ ಮನೆಯಲ್ಲಿ ಪೂಜೆ ಮಾಡುತ್ತಿದ್ದಾಗ, ಆಕೆಯ ಸೀರೆಯಿಂದ ಕೊರಳಿಗೆ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: KSRTC, ಬೈಕ್ ನಡುವೆ ಭೀಕರ ಅಪಘಾತ – ಇಬ್ಬರು ಸ್ಥಳದಲ್ಲೇ ಸಾವು
Advertisement
ಹೀಗಾಗಿ ಬಾಯಲ್ಲಿ ರಕ್ತ ಬಂದಿದೆ. ಆದರೆ ಈ ಪ್ರಕರಣದಿಂದ ಜಾರಿಕೊಳ್ಳುವ ನಿಟ್ಟಿನಲ್ಲಿ ಉಮಾಪತಿ ಅಕ್ಕಪಕ್ಕದ ಮನೆಯವರನ್ನೆಲ್ಲಾ ಮನೆಗೆ ಕರೆದು, ನನ್ನ ಪತ್ನಿ ಪೂಜೆ ಮಾಡುವಾಗ ನೆಲಕ್ಕೆ ಬಿದ್ದಿದ್ದಾಳೆಂದು ನಂಬಿಸಿ ಆಸ್ಪತ್ರೆಗೆ ದಾಖಲಿಸಿದ್ದ. ಅಷ್ಟರಲ್ಲಿ ಶ್ರೀದೇವಿ ಮೃತಪಟ್ಟಿದ್ದಾರೆಂದು ಧೃಡವಾಗಿತ್ತೆಂದು ಮೃತ ಶ್ರೀದೇವಿಯ ಸಹೋದರ ರಂಗಸ್ವಾಮಿ ಆರೋಪಿಸಿದ್ದಾರೆ. ಇದನ್ನೂ ಓದಿ: ಹೆಂಡತಿ ತವರಿಗೆ ಹೋಗಿದ್ದಕ್ಕೆ ಖುಷಿಯಾಗಿದೆ – ಪೋಸ್ಟರ್ ಹಾಕಿ, ಬಿಸ್ಕತ್ ಹಂಚಿ ಸಂಭ್ರಮಿಸಿದ ಗಂಡ!
Advertisement
ಈ ಸಂಬಂಧ ಚಿತ್ರದುರ್ಗದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮಾಂತರ ಠಾಣೆ ಪೊಲೀಸರು ಆರೋಪಿ ಉಮಾಪತಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ನಕಾರಾತ್ಮಕ ತಂತ್ರಗಳಿಂದ ರಾಜಕೀಯ ಮಾಡ್ತಿದ್ದವರಿಗೆ ದೆಹಲಿ ಜನರಿಂದ ತಕ್ಕ ಪಾಠ: ಜೋಶಿ