ಮುಂಬೈ: ವ್ಯಕ್ತಿಯೊಬ್ಬ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಎರಡನೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಫಾಹಿನ್ ಖಾನ್ (22) ಮೃತ ಪತ್ನಿ. ಭಾನುವಾರ 22 ವರ್ಷದ ಮಹಿಳೆಯ ಮೃತ ದೇಹ ಪಶ್ಚಿಮ ಕಂಡಿಲ್ವಿಯ 90 ಅಡಿ ರಸ್ತೆಯಲ್ಲಿ ಪತ್ತೆಯಾಗಿತ್ತು. ಮೊದಲಿಗೆ ಇದು ಆತ್ಮಹತ್ಯೆಯೇ ಅಥವಾ ಕೊಲೆಯ ಎಂದು ನಮಗೆ ತಿಳಿದಿರಲಿಲ್ಲ. ಆದರೆ ಮರಣೋತ್ತರ ಪರೀಕ್ಷೆಯ ವರದಿಯು ಇದು ಕೊಲೆ ಎಂದು ದೃಢಪಟ್ಟಿದೆ ಎಂದು ಕಂಡಿಲ್ವಿ ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಮೃತ ಫಾಹಿನ್ 35 ವರ್ಷದ ಸಮಾಜ ಸೇವಕ ಇಮಾಮ್ ಮಣಿಹಾರ್ ನ ಎರಡನೇ ಪತ್ನಿಯಾಗಿದ್ದಳು. ಈ ದಂಪತಿ ಇಬ್ಬರು ಮಕ್ಕಳೊಂದಿಗೆ 90 ಅಡಿ ರಸ್ತೆಯಲ್ಲಿ ವಾಸಿಸುತ್ತಿದ್ದರು. ಆದರೆ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಅನುಮಾನಗೊಂಡು ಪತಿಯೇ ಕೊಲೆ ಮಾಡಿದ್ದಾನೆ. ಫಾಹಿನ್ ಮೃತದೇಹ ಕುತ್ತಿಗೆಯ ಮೇಲೆ ಅನೇಕ ಗಾಯದ ಗುರುತುಗಳು ಕಾಣಿಸಿಕೊಂಡಿದೆ. ಇದರಿಂದ ಫಾಹಿನ್‍ಳನ್ನು ಆಕೆಯ ಪತಿ ಮಣಿಹಾರ್ ಕೊಲೆ ಮಾಡಿರುವುದಾಗಿ ಪೋಷಕರು ಆರೋಪಿಸಿದ್ದರು.
Advertisement
Advertisement
ಫಾಹಿನ್ ಕತ್ತಿನ ಸುತ್ತಲು ಅನುಮಾನಾಸ್ಪದ ರೀತಿಯಲ್ಲಿ ಗುರುತುಗಳು ಪತ್ತೆಯಾಗಿತ್ತು. ಹೀಗಾಗಿ ನಾನು ಪೊಲೀಸರಿಗೆ ಮಾಹಿತಿ ತಿಳಿಸಿದ್ದೆ. ಫಾಹಿನ್ ಅನಾರೋಗ್ಯದಿಂದ ಬಳಲುತ್ತಿರಲಿಲ್ಲ ಅಥವಾ ಆಕೆಗೆ ಯಾವುದೇ ರೀತಿಯ ಕಾಯಿಲೆಯೂ ಇರಲಿಲ್ಲ. ಅವಳು ಹೇಗೆ ಇದ್ದಕ್ಕಿದ್ದಂತೆ ಮೃತಪಟ್ಟಳು ಎಂಬ ಬಗ್ಗೆ ನನಗೆ ಅನುಮಾನ ಮೂಡಿತ್ತು. ಇತ್ತ ಆಕೆಯ ಪತಿ ಸಾವಿನ ಸುದ್ದಿಯನ್ನು ಪೋಷಕರಿಗೆ ತಿಳಿಸುವ ಬದಲಿಗೆ ಮರಣ ಪ್ರಮಾಣಪತ್ರವನ್ನು ಪಡೆಯಲು ಅವಸರದಲ್ಲಿದ್ದನು ಎಂದು ಮೃತಳ ಸಂಬಂಧಿ ಶಾಹಿದ್ ಖಾನ್ ಹೇಳಿದ್ದಾರೆ.
ಮಣಿಹಾರ್ ಆಕೆಯ ಮೇಲೆ ಹಲ್ಲೆ ಮಾಡುತ್ತಿದ್ದನು. ಅಷ್ಟೇ ಅಲ್ಲದೇ ಆಕೆಗೆ ತಿನ್ನಲು ಊಟನೂ ನೀಡುತ್ತಿರಲಿಲ್ಲ. ಹೀಗಾಗಿ ಪ್ರತಿದಿನ ಆಕೆ ತಾಯಿಯ ಮನೆಯಿಂದ ಆಹಾರ ಪಾರ್ಸೆಲ್ ತೆಗೆದುಕೊಳ್ಳುತ್ತಿದ್ದಳು ಎಂದು ಫಾಹಿನ್ ಖಾನ್ ಸಹೋದರಿ ತಿಳಿಸಿದ್ದಾರೆ.
ಫಾಹಿನ್ ಮೃತದೇಹವನ್ನು ಭಾಗವತಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ಒಳಪಡಿಸಿದ್ದು, ವರದಿಯಲ್ಲಿ ಫಾಹಿನ್ ಕೊಲೆಯಾಗಿರುವುದು ದೃಢಪಟ್ಟಿತ್ತು. ನಂತರ ನಾವು ಆಕೆಯ ಪತಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದೆವು. ಆಗ ಆರೋಪಿ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.