ಹೈದರಾಬಾದ್: ಮಟನ್ ಸಾರು ಮಾಡಲು ನಿರಾಕರಿಸಿದ ಪತ್ನಿಯನ್ನ ಪತಿಯೇ ಕ್ರೂರವಾಗಿ ಥಳಿಸಿ ಹತ್ಯೆಮಾಡಿರುವ ಘಟನೆ ತೆಲಂಗಾಣದ(Telangana) ಮಹಬೂಬಾಬಾದ್‌ನಲ್ಲಿ ನಡೆದಿದೆ.
ಮಾಲೋತ್ ಕಲಾವತಿ (35) ಕೊಲೆಯಾದ ಪತ್ನಿ. ತಡರಾತ್ರಿ ಕಲಾವತಿ ಬಳಿ ಮಟನ್ ಸಾರು ಮಾಡುವಂತೆ ಪತಿ ಹೇಳಿದ್ದಾನೆ. ಕಲಾವತಿ ಸಾರು ಮಾಡಲು ನಿರಾಕರಿಸಿದಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಯಾರೂ ಇಲ್ಲದಿದ್ದಾಗ ನಡೆದ ಜಗಳದಲ್ಲಿ ಕಲಾವತಿಯನ್ನು ಪತಿ ಹಲ್ಲೆ ಮಾಡಿ ಕೊಂದಿದ್ದಾನೆ ಎಂದು ಕಲಾವತಿ ತಾಯಿ ಆರೋಪಿಸಿದ್ದಾರೆ. ಇದನ್ನೂ ಓದಿ: ದಾವಣಗೆರೆ | ಹೊತ್ತಿ ಉರಿದ ಟಾಕಿಸ್ – ಪೀಠೋಪಕರಣಗಳು ಭಸ್ಮ
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಮಾ.14ಕ್ಕೆ ರನ್ಯಾ ಬೇಲ್ ಭವಿಷ್ಯ