ಚೆನ್ನೈ: ವ್ಯಕ್ತಿಯೊಬ್ಬ ಪತ್ನಿ ಫೇಸ್‍ಬುಕ್‍ನಲ್ಲಿ ತನ್ನ ಸ್ನೇಹಿತರ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದಾಳೆ ಎಂದು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿ ನಡೆದಿದೆ.
ಮುತ್ತುಮಾರಿ (33) ಮೃತ ಪತ್ನಿ. ಆರೋಪಿ ಗೋಮತಿನಾಯಗಂ (36) ಬಂಧಿಸಲಾಗಿದೆ. ಪತ್ನಿ ನನ್ನನ್ನು ಕಡೆಗಣಿಸಿ ಫೇಸ್‍ಬುಕ್‍ನಲ್ಲಿ ತನ್ನ ಸ್ನೇಹಿತರೊಂದಿಗೆ ಚಾಟ್ ಮಾಡಲು ಹೆಚ್ಚು ಸಮಯ ಕಳೆಯುತ್ತಿದ್ದಳು. ಆದ್ದರಿಂದ ನಾನೇ ಕೊಲೆ ಮಾಡಿದ್ದೇನೆ ಎಂದು ಪತಿ ಒಪ್ಪಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.
Advertisement
Advertisement
ಆರೋಪಿ ಗೋಮತಿನಾಯಗಂ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ಕಳೆದ ಗುರುವಾರ ಪತ್ನಿಯ ಮೇಲೆ ಹಲ್ಲೆ ಮಾಡಿದ್ದ ಪರಿಸ್ಥಿತಿಯಲ್ಲಿ ಆಕೆ ಶವ ಮನೆಯಲ್ಲಿ ಪತ್ತೆಯಾಗಿದೆ ಎಂದು ಆತನೇ ದೂರು ನೀಡಿದ್ದನು. ಈ ಬಗ್ಗೆ ನಾವು ಪ್ರಶ್ನೆ ಮಾಡಿದಾಗ, ಮುತ್ತುಮಾರಿ ಫೇಸ್‍ಬುಕ್‍ನಲ್ಲಿ ಸದಾ ಸಕ್ರಿಯಳಾಗಿದ್ದು, ಯಾವಾಗಲೂ ಪುರುಷ ಸ್ನೇಹಿತರೊಂದಿಗೆ ಚಾಟಿಂಗ್ ಮಾಡುವುರದಲ್ಲಿ ನಿರತರಾಗಿದ್ದಳು. ಹೀಗಾಗಿ ಅವಳ ಸ್ನೇಹಿತರಲ್ಲಿ ಯಾರಾದರೂ ಲಾಭಕ್ಕಾಗಿ ಕೊಲೆ ಮಾಡಿರಬಹುದು ಎಂದ ಉತ್ತರಿಸಿದ್ದನು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Advertisement
Advertisement
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದರು. ಆದರೆ ಅವರ ಮನೆಯಿಂದ ನಗದು ಅಥವಾ ಆಭರಣಗಳು ಯಾವುದು ಕಳ್ಳತನವಾಗಿರಲಿಲ್ಲ. ಆಗ ಪತಿಯ ಹೇಳಿಕೆಯಿಂದ ಅನುಮಾನ ಮೂಡಿದ್ದರಿಂದ ಪೊಲೀಸರು ಮೃತದೇಹ ಸಿಕ್ಕ ಸ್ಥಳಕ್ಕೆ ವಿಧಿವಿಜ್ಞಾನ ತಂಡವನ್ನು ಕಳುಹಿಸಿ ಪರಿಶೀಲನೆ ಮಾಡಿಸಿದ್ದಾರೆ. ಜೊತೆಗೆ ಶ್ವಾನವನ್ನು ಕಳುಹಿಸಿದ್ದು, ನಾಯಿ ಘಟನೆ ನಡೆದ ಸ್ಥಳದಿಂದ ಸುಮಾರು 100 ಮೀಟರ್ ಓಡಿ ಹೋಗಿದೆ. ಆದರೆ ಮತ್ತೆ ಮನೆಗೆ ವಾಪಸ್ ಬಂದಿದೆ. ಇತ್ತ ಫೋರೆನ್ಸಿಕ್ ತಂಡ ಅಪರಾಧದ ಸ್ಥಳದಲ್ಲಿ ಬೆರಳಚ್ಚುಗಳನ್ನು ಸಂಗ್ರಹಿಸಿ ಪರೀಕ್ಷೆ ಮಾಡಿದ್ದಾರೆ. ಆ ಬೆರಳಚ್ಚು ಮೃತ ಪತಿ ಗೋಮತಿನಾಯಗಂಗೆ ಹೊಂದಿಕೆಯಾಗಿದೆ.
ತಕ್ಷಣ ಪೊಲೀಸರು ಆರೋಪಿಯನ್ನು ವಶ ಪಡಿಸಿಕೊಂಡು ವಿಚಾರಣೆ ಮಾಡಿದ್ದಾರೆ. ವಿಚಾರಣೆಯಲ್ಲಿ ಪದೇ ಪದೇ ಪ್ರಶ್ನಿಸಿದ ನಂತರ ಗೋಮತಿನಾಯಗಂ ಆರು ದಿನಗಳ ಹಿಂದೆ ತನ್ನ ಪತ್ನಿ ಮುತ್ತುಮರಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.