ಪತ್ನಿಯ ಕೊಲೆ ಮಾಡಿ ಪೊಲೀಸರಿಗೆ ಶರಣಾದ ಪತಿರಾಯ!

Public TV
1 Min Read
Wife Murder

ಬೆಂಗಳೂರು: ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ ನಂತರ ಅರೋಪಿ ಪತಿರಾಯ ಪೊಲೀಸರಿಗೆ ಶರಣಾದ ಘಟನೆ ನಗರದ ರಾಜಗೋಪಾಲ್ ನಗರದಲ್ಲಿರುವ ರಾಜೇಶ್ವರಿ ನಗರದಲ್ಲಿ ನಡೆದಿದೆ.

ಸೌಮ್ಯ (29) ಪತಿಯಿಂದಲೇ ಕೊಲೆಯಾದ ದುರ್ದೈವಿ. ಪತಿ ಜಗದೀಶ್ ಗುರುವಾರ ರಾತ್ರಿ 11 ಗಂಟೆಗೆ ಸೌಮ್ಯಾರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ತಾನೇ ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ.

ಆರೋಪಿ ಜಗದೀಶ್ ಬೆಂಗಳೂರಿನ ಖಾಸಗಿ ಕಂಪೆನಿಯ ನೌಕರನಾಗಿದ್ದಾನೆ. ಆರೋಪಿ ಈ ಮೊದಲು ಮೊದಲನೇ ಪತ್ನಿಯನ್ನು ಬಿಟ್ಟು ಸೌಮ್ಯಳನ್ನು ಮದುವೆಯಾಗಿದ್ದ. ಆದರೆ ಪತ್ನಿ ಸೌಮ್ಯಾಳು ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿರುವ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಠಾಣಾ ಪೋಲಿಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article