ದುಬೈ: ಅಗ್ನಿ ಅವಘಡದಿಂದ ಪತ್ನಿಯನ್ನು ರಕ್ಷಿಸಿ ಶೇ.90 ರಷ್ಟು ಭಾಗ ಸುಟ್ಟು ಹೋಗಿ ಆಸ್ಪತ್ರೆಗೆ ದಾಖಲಾಗಿದ್ದ ಪತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಅಬುಧಾಬಿಯಲ್ಲಿ ನಡೆದಿದೆ.
ಕೇರಳದ ಅನಿಲ್ ನಿನಾನ್ (32) ಮೃತ ಪತಿ. ಅನಿಲ್ ನಿನಾನ್ ಅವರು ಶೇ. 90 ರಷ್ಟು ಸುಟ್ಟ ಗಾಯಗಳಾಗಿದ್ದು, ಅಬುಧಾಬಿಯ ಮಾಫ್ರಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪತ್ನಿ ನೀನು ಕೂಡ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅನಿಲ್ ನಿನಾನ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
Advertisement
Advertisement
ನಮಗೆ ತುಂಬಾ ದುಃಖದ ಸಂಗತಿ. ಅನಿಲ್ ನಿನಾನ್ ಪತ್ನಿ ನೀನು ಇನ್ನೂ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಅನಿಲ್ ಸಾವಿನಿಂದ ನಮ್ಮೆಲ್ಲರಿಗೂ ನೋವಾಗಿದೆ ಎಂದು ಆಪ್ತ ಸಂಬಂಧಿಯೊಬ್ಬರು ತಿಳಿಸಿದ್ದಾರೆ.
Advertisement
ಏನಿದು ಪ್ರಕರಣ?
ದುಬೈನ ಉಮ್ ಅಲ್ ಕ್ವೈನ್‍ನಲ್ಲಿರುವ ಅಪಾರ್ಟ್ ಮೆಂಟ್‍ನಲ್ಲಿ ಈ ಘಟನೆ ನಡೆದಿದೆ. ಕಳೆದ ವಾರ ಈ ಅವಘಡ ಸಂಭವಿಸಿದೆ. ದಂಪತಿಯ ಅಪಾರ್ಟ್ ಮೆಂಟ್‍ನ ಕಾರಿಡಾರ್‌ನಲ್ಲಿ ಇರಿಸಲಾಗಿದ್ದ ವಿದ್ಯುತ್ ಬಾಕ್ಸ್‌ನಿಂದ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಶಂಕಿಸಲಾಗಿದೆ. ಕಾರಿಡಾರ್‌ನಲ್ಲಿ ಮೊದಲು ನೀನುಗೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಬೆಡ್‍ರೂಮಿನಲ್ಲಿದ್ದ ಅನಿಲ್ ಓಡಿ ಬಂದು ತನ್ನ ಪತ್ನಿಯನ್ನು ಬೆಂಕಿಯಿಂದ ರಕ್ಷಿಸಿದ್ದಾರೆ. ಆದರೆ ಇದೇ ವೇಳೆ ಅನಿಲ್‍ಗೆ ಬೆಂಕಿ ಹೊತ್ತಿಕೊಂಡಿತ್ತು ಎಂದು ಪೊಲೀಸರು ತಿಳಿಸಿದ್ದರು.
Advertisement
ಅಗ್ನಿ ಅವಘಡದಿಂದ ಪತಿ ಅನಿಲ್ ನಿನಾನ್ ಶೇ.90 ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದು, ಉಮ್ ಅಲ್ ಕ್ವೈನ್‍ನ ಶೇಖ್ ಖಲೀಫಾ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅಬುಧಾಬಿಯ ಮಾಫ್ರಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂಲತಃ ಕೇರಳ ದಂಪತಿಯಾಗಿದ್ದು, ಇವರಿಗೆ ನಾಲ್ಕು ವರ್ಷದ ಮಗನಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು.