– ಪತ್ನಿ ಕೊಲೆ ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಆರೋಪಿ
ಬೆಂಗಳೂರು: ಹೆಂಡತಿಯ (Wife) ಶೀಲ ಶಂಕಿಸಿ ಪತಿ ಆಕೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ದೇವಿಕಾ (55 ) ಕೊಲೆಯಾದ ಮಹಿಳೆ. ಪತ್ನಿ ಮೇಲೆ ಅನುಮಾನಗೊಂಡು ಮಧ್ಯರಾತ್ರಿ 12:45ರ ಸುಮಾರಿಗೆ ಆಕೆ ಮಲಗಿದ್ದ ವೇಳೆ ಪತಿ ಕುಮಾರ್ (65) ಮಚ್ಚಿನಿಂದ ಕುತ್ತಿಗೆಗೆ ಹೊಡೆದು ಹತ್ಯೆ ಮಾಡಿದ್ದಾನೆ. ಇದನ್ನೂ ಓದಿ: T20 World Cup | ಟೀಂ ಇಂಡಿಯಾದ ‘ಸೂಪರ್-8’ ಸಂಗ್ರಾಮ – ಹೀಗಿದೆ ವೇಳಾಪಟ್ಟಿ
ಇತ್ತೀಚಿಗೆ ದೇವಿಕಾ ಪತಿ ಹಾಗೂ ಮಕ್ಕಳೊಂದಿಗೆ ಕುಟುಂಬ ಸಮೇತ ಶಬರಿಮಲೆಗೆ ತೆರಳಿದ್ದರು. ಈ ವೇಳೆ ಪತ್ನಿ ಡ್ರೈವರ್ ಜೊತೆ ಮಾತನಾಡಿದ್ದಕ್ಕೆ ಪತಿ ಅನುಮಾನಗೊಂಡಿದ್ದ. ಬಳಿಕ ಹೆಂಡತಿ ಮೇಲೆ ಅನುಮಾನಿಸಿ ಗಲಾಟೆ ಮಾಡುತ್ತಿದ್ದ. ಪತ್ನಿಯನ್ನು ಕೊಂದ ಬಳಿಕ ಆರೋಪಿ ಕುಮಾರ್ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಆರೋಪಿ ಕುಮಾರ್‌ನನ್ನು ಮಕ್ಕಳು ತಡೆದಿದ್ದಾರೆ. ಇದನ್ನೂ ಓದಿ: Rajya Sabha Elections: 10 ರಾಜ್ಯಗಳ 37 ಸ್ಥಾನಗಳಿಗೆ ಮಾ.16 ರಂದು ಮತದಾನ
ಘಟನೆ ಸಂಬಂಧ ಗೋವಿಂದರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ಗಂಡ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು| ಹುಟ್ಟುಹಬ್ಬದ ದಿನವೇ ಯುವಕ ಅಪಘಾತದಲ್ಲಿ ಸಾವು

