-ಪೋರ್ನ್ ವಿಡಿಯೋ ನೋಡುವಂತೆ ಒತ್ತಾಯ
-ನೈಟ್‍ಡ್ರೆಸ್ ಧರಿಸಿ, ಸ್ನೇಹಿತರ ಜೊತೆ ಪತ್ನಿಯ ಫೋಟೋ ಕ್ಲಿಕ್
ಗಾಂಧಿನಗರ: 25 ವರ್ಷದ ಮಹಿಳೆಯೊಬ್ಬರು ಇತರ ಪುರುಷರೊಂದಿಗೆ ಮಲಗಲು ಒತ್ತಾಯಿಸಿದ ಪತಿ ಮತ್ತು ನಾಲ್ವರು ಮಹಿಳೆಯರು ಸೇರಿದಂತೆ ಹತ್ತು ಮಂದಿ ವಿರುದ್ಧ ದೂರು ದಾಖಲಿಸಿರುವ ಘಟನೆ ಗುಜರಾತ್‍ನ ಅಹ್ಮದಾಬಾದ್ ನಡೆದಿದೆ.
ಈ ಘಟನೆ ಅಹ್ಮದಾಬಾದ್ ನ ಘಟ್ಲೋಡಿಯಾ ಪ್ರದೇಶದಲ್ಲಿ ನಡೆದಿದೆ. ಸಂತ್ರಸ್ತೆಯ ಪತಿ, ಮಾವ, ಅತ್ತೆ ಮತ್ತು ಪತಿ ಸ್ನೇಹಿತರಾದ ಮೂವರು ಪುರುಷರು ಮತ್ತು ನಾಲ್ವರು ಮಹಿಳೆ ಸೇರಿದಂತೆ ಒಟ್ಟು ಏಳು ಮಂದಿಯ ಮೇಲೆ ದೂರು ದಾಖಲಿಸಿದ್ದಾರೆ ಎಂದು ಘಟ್ಲೋಡಿಯಾ ಪೊಲೀಸರು ತಿಳಿಸಿದ್ದಾರೆ.
Advertisement
ಏನಿದು ಪ್ರಕರಣ?
ಸಂತ್ರಸ್ತೆ ಎಂಬಿಎ ವ್ಯಾಸಂಗ ಮಾಡಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. 2015 ಜನವರಿ 25 ರಂದು ಸಂತ್ರಸ್ತೆ ಆರೋಪಿಯನ್ನು ಮದುವೆಯಾಗಿದ್ದರು. ಮದುವೆಯ ನಂತರ ಸಂತ್ರಸ್ತೆ ಮೆಮ್‍ನಗರದಲ್ಲಿರುವ ಪತಿ ಮತ್ತು ಅತ್ತೆ-ಮಾವನ ಜೊತೆ ವಾಸಿಸುತ್ತಿದ್ದರು. ಸಂತ್ರಸ್ತೆ ತಿಂಗಳಿಗೆ 18,000 ರೂ. ಸಂಬಳ ತೆಗೆದುಕೊಳ್ಳುತ್ತಿದ್ದರು. ಆರೋಪಿ ಪತಿ ಮಾತ್ರ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಆದರೆ ಪತ್ನಿಯ ಸಂಬಳವನ್ನು ದುಂದುವೆಚ್ಚ ಮಾಡುತ್ತಿದ್ದನು. ಈ ಬಗ್ಗೆ ಅತ್ತೆ-ಮಾವನಿಗೆ ಹೇಳಿದಾಗ ಆಕೆಯ ಮೇಲೆ ಹಲ್ಲೆ ಮಾಡಿ ಸುಮ್ಮನಿರುವಂತೆ ಹೇಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ನನ್ನ ಪತಿ ಮತ್ತು ಪತ್ತೆ-ಮಾವ ಅಶ್ಲೀಲ ಭಾಷೆಯಲ್ಲಿ ಸೆಕ್ಸ್ ಬಗ್ಗೆ ಮಾತನಾಡುತ್ತಿದ್ದರು. ನನಗೆ ಹಿಂಜರಿಕೆಯಾಗುತ್ತಿತ್ತು. ಆಗ ಅವರು ನೀನು ಹಳೆಯ ಶೈಲಿಯ ಹುಡುಗಿಯೆಂದು ಟೀಕಿಸುತ್ತಿದ್ದರು. ಎಂಬಿಎ ಹೊಂದಿದ್ದರು ಅನಕ್ಷರಸ್ಥ ಮಹಿಳೆಯಂತೆ ವರ್ತಿಸುತ್ತೀಯಾ ಎಂದು ಹೀಯಾಳಿಸುತ್ತಿದ್ದರು. ಅಷ್ಟೇ ಅಲ್ಲದೇ ಅವರ ಜೊತೆ ಪತಿಯ ಸ್ನೇಹಿತರು ಸೇರಿಕೊಂಡು ಪೋರ್ನ್ ವಿಡಿಯೋ ತೋರಿಸುತ್ತಿದ್ದರು. ಆಗ ನಾನು ಇದೆಲ್ಲ ನನಗೆ ಇಷ್ಟವಿಲ್ಲ ಎಂದು ಹೇಳುತ್ತಿದ್ದೆ. ಅದಕ್ಕೆ ಅವರು ಈ ವಯಸ್ಸಿನಲ್ಲಿ ಮಹಿಳೆಯರು ಸೆಕ್ಸ್ ಬಗ್ಗೆ ಮಾತನಾಡುತ್ತಾರೆ ಎಂದು ಹೇಳುತ್ತಿದ್ದರು ಎಂದು ಸಂತ್ರಸ್ತೆ ತಿಳಿಸಿದ್ದಾರೆ.
Advertisement
Advertisement
ಒಮ್ಮೆ ನಾನು ಪತಿ, ಆತನ ಸ್ನೇಹಿತರ ಜೊತೆ ಹಿಮಾಚಲ ಪ್ರದೇಶದ ಮನಾಲಿಗೆ ಪ್ರವಾಸ ಹೋಗಿದ್ದೆವು. ಅಲ್ಲಿ ಅವರು ಪತ್ನಿಯ ಬದಲಾವಣೆ (Exchange Partner) ಬಗ್ಗೆ ಮಾತನಾಡುತ್ತಿದ್ದರು. ಆಗ ನಾನು ಅದನ್ನು ವಿರೋಧಿಸಿದೆ. ಅದಕ್ಕೆ ಪತಿ ನನ್ನ ಮೇಲೆ ಹಲ್ಲೆ ಮಾಡಿದ್ದನು. ಈ ವೇಳೆ ನಾನು ತಂದೆಯ ಜೊತೆ ಮಾತನಾಡಲು ಪ್ರಯತ್ನಿಸಿದಾಗ ನನ್ನ ಫೋನ್ ಕಿತ್ತುಕೊಂಡಿದ್ದರು. ಒಮ್ಮೆ ನನಗೆ ಇದ್ದಕ್ಕಿದ್ದಂತೆ ವಿಪರೀತ ತಲೆ ನೋವು ಕಾಣಿಸಿಕೊಂಡಿತ್ತು. ನನಗೆ ನಿದ್ರೆ ಬರುವ ಸ್ಥಿತಿಯಲ್ಲಿದ್ದೆ. ಆಗ ಪತಿ ನನಗೆ ನೈಟ್ ಡ್ರೆಸ್ ಧರಿಸುವಂತೆ ಒತ್ತಾಯಿಸಿದನು. ನಂತರ ಮನಾಲಿಯ ಹೋಟೆಲ್ ರೂಮಿನಲ್ಲಿ ಆತನ ಸ್ನೇಹಿತರೊಂದಿಗೆ ನನ್ನ ಅಶ್ಲೀಲ ಫೋಟೋಗಳನ್ನು ತೆಗೆದುಕೊಂಡನು ಎಂದು ಸಂತ್ರಸ್ತೆ ಎಫ್‍ಐಆರ್ ಲ್ಲಿ ಉಲ್ಲೇಖಿಸಿದ್ದಾರೆ.
ಸಂತ್ರಸ್ತೆಗೆ ಪತಿ ತನ್ನ ಸ್ನೇಹಿತರ ಜೊತೆ ಮಲಗುವಂತೆ ಒತ್ತಾಯಿಸುತ್ತಿದ್ದನು. ಈ ವೇಳೆ ಪತಿ ಸ್ನೇಹಿತರು ಮತ್ತು ಅವರ ಪತ್ನಿಯರು ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಅದೇ ಸಮಯದಲ್ಲಿ ನನ್ನ ಬಳಿಕ ಕೆಲವು ಪೇಪರ್ ಗೆ ಸಹಿ ಮಾಡಿಸಿಕೊಂಡಿದ್ದರು. ಅವರು ನನಗೆ ಡ್ರಗ್ಸ್ ಕೊಟ್ಟಿರಬಹುದು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಪ್ರವಾಸ ಮುಗಿದ ಬಳಿಕ ಆಕೆಯನ್ನು ಪೋಷಕರ ಮನೆಗೆ ಕಳುಹಿಸಿದ್ದಾನೆ. ನಂತರ ವಾಟ್ಸಪ್ ಮೂಲಕ ವಿಚ್ಛೇದನ ಪತ್ರಗಳನ್ನು ಕಳುಹಿಸಿದ್ದಾನೆ. ಆ ಪತ್ರದಲ್ಲಿ ಪತಿಯಿಂದ ಯಾವುದೇ ಜೀನಾಂಶ ಬೇಡ ಎಂದು ಬರೆದಿತ್ತು. ಆಗ ಸಂತ್ರಸ್ತೆಗೆ ಅಂದು ಸಹಿ ಮಾಡಿಸಿಕೊಂಡಿದ್ದು ನೆನಪಾಗಿದೆ. ಬಳಿಕ ಅವರು ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ.
ಸದ್ಯಕ್ಕೆ ಈ ಕುರಿತು ಪೊಲೀಸರು ಐಪಿಸಿ ಸೆಕ್ಷನ್ ವರದಕ್ಷಿಣೆ ನಿಷೇಧ ಕಾಯ್ದೆ(1961) ಮತ್ತು ಮಾಹಿತಿ ತಂತ್ರಜ್ಷಾನ ಕಾಯ್ದೆ(200) ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ಕೇಸ್ ಬುಕ್ ಮಾಡಿಕೊಂಡಿದ್ದಾರೆ.