ತುಮಕೂರು: ಬಡ ಹಿಂದೂ ಯುವತಿಯನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ, ಖುರಾನ್ ಪಠಣ ಮಾಡಿಸಿದ್ದಾನೆ. ಅಲ್ಲದೇ ಮದುವೆಯಾಗಿ ಎರಡು ವರ್ಷ ಕಳೆದ ಬಳಿಕ ನೀನು ನನಗೆ ಬೇಡ ಎಂದು ಪತಿರಾಯನೊಬ್ಬ ಡಿವೋರ್ಸ್ ನೋಟಿಸ್ ಕೊಟ್ಟ ಪ್ರಕರಣವೊಂದು ತುಮಕೂರಿನಲ್ಲಿ ನಡೆದಿದೆ.
ಚಿಕ್ಕಪೇಟೆ ನಿವಾಸಿ ರಮ್ಯಾ(ಹೆಸರು ಬದಲಾಯಿಸಲಾಗಿದೆ) ಎಂಬ ಯುವತಿಯನ್ನು ಕ್ಯಾತಸಂದ್ರ ನಿವಾಸಿ ಮೊಹಮ್ಮದ್ ಅತಿಕ್ ಮತಾಂತರ ಮಾಡಿಸಿ ಮದುವೆಯಾಗಿ ಈಗ ಕೈ ಕೊಟ್ಟಿದ್ದಾನೆ. ತುಮಕೂರು ನಗರದಲ್ಲಿದ್ದ ಮೊಹಮ್ಮದ್ ಅತಿಕ್ ನ ಬಳೆ ಅಂಗಡಿಯಲ್ಲಿ ರಮ್ಯಾ ಕೆಲಸ ಮಾಡುತ್ತಿದ್ದಳು.
ರಮ್ಯಾ ಬಡತನವನ್ನೇ ಬಂಡವಾಳ ಮಾಡಿಕೊಂಡ ಅತಿಕ್ ಇಸ್ಲಾಂ ಧರ್ಮಕ್ಕೆ ಬಂದರೆ ನಿನಗೆ ಒಳ್ಳೆದಾಗತ್ತೆ. ನಾನು ನಿನ್ನನ್ನು ಮದುವೆಯಾಗಿ ನಿನ್ನ ತಂದೆ-ತಾಯಿಯನ್ನು ಸಾಕ್ತೀನಿ ಎಂದು ಪುಸಲಾಯಿಸಿದ್ದಾನೆ. ರಮ್ಯಾಳ ತಂದೆ-ತಾಯಿಗೂ ಗೊತ್ತಿಲ್ಲದೆ ಆಂಧ್ರದ ಮದರಸಾದಲ್ಲಿ ಎರಡು ವರ್ಷಗಳ ಕಾಲ ಖುರಾನ್ ಪಠಣ ಮಾಡಿಸಿದ್ದಾನೆ.
ಅತಿಕ್, ರಮ್ಯಾ ಹೆಸರನ್ನು ಸುಮಯಾ ಫರ್ವಿನ್ ಎಂದು ಬದಲಾಯಿಸಿದ್ದಾನೆ. ಬಳಿಕ 2016 ರಲ್ಲಿ ಈಕೆಯನ್ನು ಮದುವೆಯಾಗಿದ್ದಾನೆ. ನಂತರ ಖುರಾನ್ ಅಭ್ಯಾಸಕ್ಕಾಗಿ ಆಂಧ್ರಕ್ಕೆ ಕಳುಹಿಸಿದ್ದಾನೆ. ಈ ನಡುವೆ ಎರಡನೇ ಮದುವೆಯಾದ ಅತಿಕ್ ಈಗ ರಮ್ಯಾಳಿಗೆ ಕೈ ಕೊಟ್ಟಿದ್ದಾನೆ.
ನೀನು ನನಗೆ ಬೇಡ ಎಂದು ರಮ್ಯಾಳಿಗೆ ಅತಿಕ್ ಡಿವೋರ್ಸ್ ನೋಟಿಸ್ ತಲುಪಿಸಿದ್ದಾನೆ. ಅತ್ತ ತವರು ಮನೆಯಲ್ಲಿ ಯಾರೂ ಸೇರಿಸಿಕೊಳ್ಳದೆ, ಇತ್ತ ಮದುವೆಯಾದ ಗಂಡನಿಂದಲೂ ತಿರಸ್ಕಾರಕೊಳಗಾದ ರಮ್ಯಾ ಈಗ ಬೀದಿಗೆ ಬಂದಿದ್ದಾಳೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv