ಬೆಂಗಳೂರು: ಈ ತಾಯಿ ಮಗನನ್ನು ಕಳೆದುಕೊಂಡು ಇಳಿವಯಸ್ಸಿನಲ್ಲೂ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಸೊಸೆಯ ಕಾಟದಿಂದಾಗಿ ಬದುಕೇ ಬರಡಾಗಿದೆ. ಸೊಸೆ ಎಂದು ಬಂದ ಆ ಖತರ್ನಾಕ್ ಲೇಡಿ ಇಡೀ ಕುಟುಂಬದ ನೆಮ್ಮದಿಯನ್ನೇ ಬೀದಿ ಪಾಲು ಮಾಡಿದ್ದಾಳೆ.
ಹೌದು ಈಕೆಯ ಹೆಸರು ರೇಣುಕಮ್ಮಾ. ವಯಸ್ಸು 60 ದಾಟಿದೆ. ಕೆಂಗೇರಿ ಬಳಿಯ ಸೂಲಿಕೆರೆಯಲ್ಲಿ ವಾಸವಾಗಿರುವ ಇವರ ಮಗ ಇತ್ತೀಚೆಗಷ್ಟೇ ಹೆಂಡತಿಯ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗಲೂ ತನ್ನ ಕಂದನ ನೆನೆದು ಈ ಜೀವ ಕಣ್ಣೀರು ಹಾಕುತ್ತಿದೆ. ಇಡೀ ಬದುಕೇ ಈಗ ಅಲ್ಲೋಲಕಲ್ಲೋಲವಾಗಿದೆ.
Advertisement
Advertisement
ಹೆಂಡತಿಯ ಕಾಟದಿಂದ ಬದುಕೇ ಸಾಕು ಎಂದು ಮಗ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾನೆ. ಸೊಸೆಯ ಕಾರಣದಿಂದ ಈ ಬಡ ಜೀವ ಹೆತ್ತ ಮಗುವನ್ನೂ ಕಳೆದುಕೊಂಡಿದೆ. ಬದುಕು ದುಸ್ತರವಾಗಿದೆ. ಇವರ ಮಗ ಮಂಜುನಾಥ್ ಜೂನ್ 1 ರಂದು ಮನನೊಂದು ಡೆತ್ ನೋಟ್ ಬರೆದಿಟ್ಟು ಪ್ರಾಣ ಚೆಲ್ಲಿದ್ದಾರೆ. ಇದಕ್ಕೆಲ್ಲಾ ಕಾರಣವಾಗಿದ್ದೆ ಸೊಸೆ ಅನಸೂಯ.
Advertisement
ಈ ಅನಸೂಯ ಖತರ್ನಾಕ್ ಲೇಡಿ. ಮದುವೆಯಾಗಿ ಬಂದ ದಿನವೇ ದುಡ್ಡಿಗಾಗಿ ತನ್ನ ಅಸಲಿ ಮುಖವನ್ನು ಗಂಡ ಹಾಗೂ ಅತ್ತೆಗೆ ತೋರಿಸಿದ್ದಾಳೆ. ಮದುವೆಯ ದಿನದಂದೇ ಶುರುವಾದ ಕಲಹ ಸುಮಾರು 3-4 ವರ್ಷಗಳು ನಡೆದಿದೆ. ಕೊನೆಗೆ ಹೆಂಡತಿಯ ಹಿಂಸೆಗೆ ಡೆತ್ ನೋಟ್ ಬರೆದಿಟ್ಟು ಮಂಜುನಾಥ್ ಕೆರೆಗೆ ಹಾರಿ ಪ್ರಾಣಬಿಟ್ಟಿದ್ದಾರೆ. ಇವಳ ಕಾಟ ಎಂಥದ್ದು ಎಂದರೆ, ರೌಡಿಗಳನ್ನು ಮನೆಗೆ ಕರೆಸಿ, ಪ್ರತಿನಿತ್ಯ ಪತಿ ಮಂಜುನಾಥ್ ಹಾಗೂ ತಾಯಿ ರೇಣುಕಮ್ಮಗೆ ದುಡ್ಡು, ಜಮೀನು ಅಂತ ಕಿರುಕುಳ ಕೊಡಿಸುತ್ತಿದ್ದಳು. ಗಂಡ ಸತ್ತ ಬಳಿಕವೂ ಇದೀಗ ಅನಸೂಯ ತನ್ನ ಅತ್ತೆಗೆ ಆಸ್ತಿ ಕೊಡುವಂತೆ ಕಿರುಕುಳ ನೀಡುತ್ತಿದ್ದಳು ಎಂಬ ಆರೋಪ ಬಂದಿದೆ. ಇದನ್ನೂ ಓದಿ: ಬೈಕ್ ಜಪ್ತಿ ಮಾಡಿ ವಿಮೆ ಮಾಡಿಸಿದ ಪೊಲೀಸರು – ಕಣ್ಣೀರಿಟ್ಟ ಸವಾರ
Advertisement
ಜೂನ್ 1ರಂದು ಡೆತ್ ನೋಟ್ ಬರೆದಿಟ್ಟು ಕೆಂಗೇರಿ ಬಳಿಯ ರಾಮಸಂದ್ರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಂಜುನಾಥ್, ಡೆತ್ ನೋಟ್‌ನಲ್ಲಿ ತನ್ನ ಸಾವಿಗೆ ಹೆಂಡತಿ ಅನಸೂಯಾ ಕಾರಣ ಎಂದು ಬರೆದಿದ್ದರು. ಅಲ್ಲದೆ ತನ್ನ ಆಸ್ತಿ, ಹಣ ಯಾವುದನ್ನೂ ಹೆಂಡತಿಗೆ ಕೊಡಬಾರದು, ತಾಯಿಗೆ ಕೊಡಬೇಕು ಎಂದು ಹೇಳಿದ್ದರು. ಮಂಜುನಾಥ್ ಜೊತೆಗಿನ ಖಾಸಗಿ ವೀಡಿಯೋ ಮುಂದಿಟ್ಟುಕೊಂಡು ಪುಡಿ ರೌಡಿಗಳ ಜೊತೆ ಸೇರಿ ಬ್ಲಾಕ್‌ಮೇಲ್ ಕೂಡ ಮಾಡುತ್ತಿದ್ದಳು. ಸೈಟು, ಆಸ್ತಿಯನ್ನೆಲ್ಲಾ ತನ್ನ ಹೆಸರಿಗೆ ಬರೆದುಕೊಡುವಂತೆ ಮದುವೆಯ ಮರುದಿನವೇ ಕಿರುಕುಳ ಕೊಟ್ಟಿದ್ದಳು. ಇದರಿಂದ ಮನನೊಂದು ಮಂಜುನಾಥ್ ಒಂದು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ವ್ಯವಸ್ಥೆಯನ್ನು ಪ್ರಶ್ನಿಸಿದವರ ವಿರುದ್ಧ ಕೇಸ್ ಹಾಕುವುದು, ಬೆದರಿಸುವುದು ಮಾಡುತ್ತಿದ್ದಾರೆ: ಪ್ರಿಯಾಂಗ್ ವಿರುದ್ಧ ಮಣಿಕಂಠ್ ಕಿಡಿ
ಈ ಹಿಂದೆ ಮಂಜುನಾಥ್ ಒಂದು ಮದುವೆಯಾಗಿ ವಿಚ್ಛೇದನ ಪಡೆದುಕೊಂಡಿದ್ದರು. ಬಳಿಕ ಅನಸೂಯಾಳನ್ನು ವರಿಸಿಕೊಂಡಿದ್ದರು. ಅನಸೂಯಾಳನ್ನು ಮದುವೆಯಾಗಿ ಕೆಲವೇ ವರ್ಷಕ್ಕೆ ಮನನೊಂದು ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಜೈಲಿಗೂ ಹೋಗಿ ಬಂದಿದ್ದ ಮಂಜುನಾಥ್ ಎರಡನೇ ಪತ್ನಿ ಅನಸೂಯಾ, ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಮತ್ತೆ ಮೃತ ಮಂಜುನಾಥ್ ತಾಯಿ ರೇಣುಕಮ್ಮಾರನ್ನು ಟಾರ್ಗೆಟ್ ಮಾಡಿದ್ದಾಳೆ. ಮಂಜುನಾಥ್ ಆಸ್ತಿ, ಹಣ ಎಲ್ಲವನ್ನೂ ತನಗೆ ಕೊಡುವಂತೆ ಕಿರುಕುಳ ಕೊಡುತ್ತಿದ್ದಾಳೆ. ಯಾರ ಆಶ್ರಯವೂ ಇಲ್ಲದೆ ರೇಣುಕಮ್ಮಾ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾರೆ.