ಮುಂಬೈ: ಪತಿ ತನ್ನನ್ನು ಕೇಳದೆ ಪಾನಿಪುರಿ ತಂದ ಎಂದು ಕೋಪಗೊಂಡ ಪತ್ನಿ ಆತನೊಂದಿಗೆ ಸಿಕ್ಕಾಪಟೆ ಜಗಳ ಆಡಿ, ನಂತರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಪ್ರತೀಕ್ಷಾ ಸರ್ವದೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾಳೆ. ಆಕೆಯ ಪತಿ ಗಹಿನಿನಾಥ್ ಸರ್ವದೆ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಗಹಿನಿನಾಥ್ ಅವರ ಹುಟ್ಟೂರು ಸೋಲಾಪುರ. 2019ರಲ್ಲಿ ಇವರಿಬ್ಬರೂ ಮದುವೆಯಾಗಿದ್ದು, ಒಬ್ಬ ಮಗ ಕೂಡ ಇದ್ದಾನೆ. ಪಾನಿಪುರಿಗಾಗಿ ಜಗಳ ಮಾಡಿಕೊಂಡು ಪ್ರತೀಕ್ಷಾ ಪ್ರಾಣ ಬಿಟ್ಟಿದ್ದಾಳೆ. ಇದನ್ನೂ ಓದಿ: ವಧು ಬೇಕಾಗಿದ್ದಾಳೆ, ಅಂಗಡಿ ಮುಂದೆ ಬೋರ್ಡ್-ಆಸ್ಟ್ರೇಲಿಯ, ಇಂಗ್ಲೆಂಡ್‍ನಿಂದ ಬಂತು ಆಫರ್
ಗಹಿನಿನಾಥ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಗಹಿನಿನಾಥ್ ಮತ್ತು ಪ್ರತೀಕ್ಷಾ ಇಬ್ಬರೂ ಮದುವೆಯಾದ ನಂತರ ಪದೇಪದೆ ಜಗಳವಾಡುತ್ತಿದ್ದರು. ಇತ್ತೀಚೆಗಷ್ಟೇ ಇವರಿಬ್ಬರೂ ಅಂಬೇಗಾಂವ್ ಏರಿಯಾದಲ್ಲಿ ವಾಸಿಸಲು ಶುರು ಮಾಡಿದ್ದರು. ಇದನ್ನೂ ಓದಿ: ವಿದ್ಯಾರ್ಥಿಗಳ ಜತೆ ಸಿಎಂ ಬಸವರಾಜ ಬೊಮ್ಮಾಯಿ ಮಾತುಕತೆ
ಗಹಿನಿನಾಥ್ ಆಫೀಸಿನಿಂದ ಮನೆಗೆ ಬರುವಾಗ ಪಾನಿಪುರಿ ಪಾರ್ಸೆಲ್ ತಂದಿದ್ದರು. ಅದನ್ನು ನೋಡಿ ಖುಷಿಯಿಂದ ತಿನ್ನುವುದನ್ನು ಬಿಟ್ಟು ಪ್ರತೀಕ್ಷಾ, ನನ್ನನ್ನು ಕೇಳದೆ ಪಾನಿಪುರಿ ಯಾಕೆ ತಂದಿರಿ ಎಂದು ಪ್ರಶ್ನಿಸಿದ್ದಳು. ಜಗಳವನ್ನೂ ಪ್ರಾರಂಭಿಸಿದ್ದಲ್ಲದೆ, ಆ ಪಾನಿಪುರಿಯನ್ನು ತಿನ್ನಲೂ ಇಲ್ಲ. ಮರುದಿನ ಬೆಳಗ್ಗೆ ಗಹಿನಿನಾಥ್ ಕೆಲಸಕ್ಕೆ ಹೋಗುವಾಗ ತಿಂಡಿಯನ್ನೂ ಮಾಡಿಕೊಡಲಿಲ್ಲ. ಆಕೆ ಅದಾಗಲೇ ವಿಷಯುಕ್ತ ಮಾತ್ರೆ ಸೇವಿಸಿದ್ದಳು. ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿದ್ದ ಆಕೆಯನ್ನು ಆಸ್ಪತ್ರೆಗೆ ಸೇರಿಸಿಲಾಯಿತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಇಷ್ಟಾದ ಮೇಲೆ ಪ್ರತೀಕ್ಷಾಳ ತಂದೆ ಪ್ರಕಾಶ್ ಪಿಸೆ ಗಹಿನಿನಾಥ್ ವಿರುದ್ಧ ದೂರು ನೀಡಿದ್ದಾರೆ. ಇದನ್ನೂ ಓದಿ: ಪ್ರತಿ ಬುಧವಾರ 10 ಲಕ್ಷ ಲಸಿಕೆ ಗುರಿ: ಸುಧಾಕರ್
ಪಾನಿಪುರಿ ಕಾರಣಕ್ಕೆ ಜಗಳ ಶುರು ಮಾಡಿದ್ದರು. ಇಬ್ಬರ ನಡುವಿನ ವಾಗ್ವಾದ ತೀವ್ರರೂಪಕ್ಕೆ ಏರಿ, ಕೊನೆಗೆ ಪತ್ನಿಯ ಸಾವಿನಲ್ಲಿ ಅಂತ್ಯವಾಗಿದೆ. ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ಪ್ರಕರಣ ದಾಖಲಾಗಿದೆ.