ರಾಮನಗರ: ಜಿಲ್ಲೆಯ ಕೆಂಪೇಗೌಡನ ದೊಡ್ಡಿ ಬಳಿ ದಶಪಥ ಹೆದ್ದಾರಿಯ (National Highway) ಸರ್ವೀಸ್ ರಸ್ತೆ ಡ್ರೈನೇಜ್ ನಲ್ಲಿ ವ್ಯಕ್ತಿಯ ಶವಪತ್ತೆ ಆಗಿರೋ ಪ್ರಕರಣ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
Advertisement
ಚನ್ನಪಟ್ಟಣ ತಾಲೂಕಿನ ರಾಮನರಸಿಂಹರಾಜಪುರ (ಕೃಷ್ಣಾಪುರ) ನಿವಾಸಿ ದೇಸೇಗೌಡ (45) ಶವವಾಗಿ ಪತ್ತೆಯಾಗಿದ್ದು, ಸ್ನೇಹಿತನ ಜೊತೆ ಸೇರಿ ಪತ್ನಿಯೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹಾಗಾಗಿ, ಇಬ್ಬರನ್ನೂ ವಶಕ್ಕೆ ತೆಗದುಕೊಂಡು ಪೊಲೀಸರು (Police) ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪಾಕ್ ಕದನಕ್ಕೂ ಮುನ್ನವೇ ಇಂಗ್ಲೆಂಡ್‌ಗೆ ಆಘಾತ – ಹೆಸರಿಲ್ಲದ ವೈರಸ್‌ಗೆ ತುತ್ತಾದ ಸ್ಟೋಕ್ಸ್ ಪಡೆ
Advertisement
Advertisement
ದೇಸೇಗೌಡ ನ.27ರಂದು ಕಾಣೆಯಾಗಿದ್ದಾನೆಂದು ಪತ್ನಿ ಜಯಲಕ್ಷ್ಮೀ (32) ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದ ಪೊಲೀಸರು ದಾಸೇಗೌಡನ ಶವ ಪತ್ತೆಹಚ್ಚಿದ್ದಾರೆ. ಇದೀಗ ಡ್ರೈನೇಜ್‌ನಲ್ಲಿ ಶವ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ಇದನ್ನೂ ಓದಿ: ಪ್ರತಿಷ್ಠಿತ ಆಭರಣ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಸ್ಥಾನದಿಂದ ರಶ್ಮಿಕಾ ಔಟ್
Advertisement
ಏನಿದು ಮರ್ಡರ್ ಮಿಸ್ಟ್ರಿ?
ಮೃತ ದಾಸೇಗೌಡ ಮೂಲತಃ ಚನ್ನಪಟ್ಟಣ ತಾಲ್ಲೂಕಿನ ರಾಮನರಸಿಂಹರಾಜಪುರ ಗ್ರಾಮದ ನಿವಾಸಿ. ಚಿಕ್ಕಬಾಣಾವರ ಬಳಿಯ ಸೋಮಶೆಟ್ಟಿಹಳ್ಳಿ ಗ್ರಾಮದ ಫಾರ್ಮ್ ಹೌಸ್‌ನಲ್ಲಿ ಕೆಲಸ ಮಾಡಿಕೊಂಡು ಹೆಂಡತಿ, ಮಕ್ಕಳೊಂದಿಗೆ ವಾಸವಿದ್ದ. ಆದರೆ ಮದುವೆಯಾದಾಗಿನಿಂದಲೂ ಸಂಸಾರದಲ್ಲಿ ಇಬ್ಬರ ನಡುವೆ ಜಗಳ ನಡೆಯುತ್ತಲೇ ಇತ್ತು. ಜಯಲಕ್ಷ್ಮೀ – ದೇಸೇಗೌಡ ಅನ್ಯೋನ್ಯವಾಗಿರಲಿಲ್ಲ. ಈ ನಡುವೆ ಸ್ನೇಹಿತ ರಾಜೇಶ್ (26) ಜೊತೆ ಅಕ್ರಮ ಸಂಬಂಧ ಹೊಂದಿದ್ದ ಜಯಲಕ್ಷ್ಮೀ ಆಗಾಗ್ಗೆ ತೋಟದ ಮನೆಗೆ ಹೋಗಿಬರುತ್ತಿದ್ದಳು. ತೋಟದ ಮನೆಗೆ ಹೋಗಲು ಪತಿ ಅಡ್ಡಿಯಾಗಿದ್ದ ಎಂದು ಸ್ನೇಹಿತನೊಂದಿಗೆ ಸೇರಿ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಸೋಮಶೆಟ್ಟಿಹಳ್ಳಿ ಗ್ರಾಮದ ಫಾರ್ಮ್ ಹೌಸ್ (Farmhouse) ನಲ್ಲಿ ಕೊಲೆ ಮಾಡಿ ತಡರಾತ್ರಿ ತಂದು ಶವವನ್ನ ಮೋರಿಯಲ್ಲಿ ಬಿಸಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಈ ಕುರಿತು ತನಿಖೆ ನಡೆಸಿದ ಪೊಲೀಸರು, ಇಂದು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಲ್ಲದೇ ಪ್ರಕರಣದಲ್ಲಿ ಅನುಮಾನಕ್ಕೆ ಕಾರಣವಾಗಿದ್ದ ಪತ್ನಿ ಜಯಲಕ್ಷ್ಮೀ ಹಾಗೂ ಸ್ನೇಹಿತ ರಾಜೇಶ್ ವಿರುದ್ಧ ತನಿಖೆ ಮುಂದುವರಿಸಿದ್ದಾರೆ. ಪೊಲೀಸ್ ತನಿಖೆ ಬಳಿಕ ಸತ್ಯಾಂಶ ಬಯಲಾಗಲಿದೆ.