ಬೆಂಗಳೂರು: ಜಗಳದ ವೇಳೆ ಪತ್ನಿಯ (Wife) ಎಡಗೈ ಬೆರಳನ್ನೇ (Finger) ಪತಿ (Husband) ಕಚ್ಚಿ ತಿಂದಿರುವ ಘಟನೆ ಬೆಂಗಳೂರಿನ (Bengaluru) ಕೋಣನಕುಂಟೆ (Konanakunte) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪುಷ್ಪಾ (40) ಎಂಬ ಮಹಿಳೆ 23 ವರ್ಷಗಳ ಹಿಂದೆ ವಿಜಯ್‌ಕುಮಾರ್ ಎಂಬಾತನನ್ನು ಮದುವೆಯಾಗಿದ್ದರು. ಮದುವೆಯಾದ ಕೆಲ ವರ್ಷಗಳಿಂದ ವಿಜಯ್‌ಕುಮಾರ್ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂದು ಪತ್ನಿ ಆರೋಪಿಸಿದ್ದಾರೆ. ವಿವಾಹದ ಬಳಿಕ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದು, ದಂಪತಿಗೆ ಒಬ್ಬ ಮಗನೂ ಇದ್ದಾನೆ. ಇದನ್ನೂ ಓದಿ: ಜಾಮೀನಿಗಾಗಿ ವಕೀಲನ ಕಿಡ್ನಾಪ್ – ರಾತ್ರಿ ಇಡೀ ಹಲ್ಲೆ ನಡೆಸಿ ಕ್ರೌರ್ಯ ಮೆರೆದ ರೌಡಿಶೀಟರ್
ಪತಿಯ ಕಿರುಕುಳದಿಂದ ಬೇಸತ್ತ ಪತ್ನಿ ಬೇರೆಡೆ ಮನೆ ಮಾಡಿ ಪತಿಯಿಂದ ದೂರವಿದ್ದರು. ಜುಲೈ 28ನೇ ತಾರೀಕು ಪತಿ ವಿಜಯ್‌ಕುಮಾರ್ ಪತ್ನಿ ಇದ್ದ ಮನೆಗೆ ತೆರಳಿ ಜಗಳ ತೆಗೆದಿದ್ದ. ಈ ವೇಳೆ ಪತ್ನಿಯ ಬೆರಳನ್ನು ಪತಿ ಕಚ್ಚಿ ತಿಂದಿದ್ದು, ನಿನ್ನನ್ನು ಕೂಡಾ ಕೊಂದು ಇದೇ ರೀತಿ ತಿನ್ನುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ ರೌಡಿಶೀಟರ್‌ಗಳನ್ನು ಬಿಟ್ಟು ಕೊಲೆ ಮಾಡಿಸುವುದಾಗಿ ಹೆದರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕುರಿತು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: 3 ಸಾವಿರಕ್ಕಾಗಿ ಯುವಕನನ್ನು ಹಾಡಹಗಲೇ ಚುಚ್ಚಿ ಚುಚ್ಚಿ ಕೊಂದ!
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]