– ಪತ್ನಿ ಮೇಲೆ ಹಲ್ಲೆಗೈದ ಪತಿ
– ಕೋಮಾಗೆ ಜಾರಿದ ಪತ್ನಿ
ಹೈದರಾಬಾದ್: ಆಸ್ಪತ್ರೆಯಲ್ಲಿ ಸೆಕ್ಸ್‌ಗೆ ನಿರಾಕರಿಸಿದ ಪತ್ನಿಯ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಶಾಕಿಂಗ್ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.
ಪತಿ ಕೃತ್ಯದಿಂದ ಪತ್ನಿ ಪದ್ಮಾ ಕೋಮಾದಲ್ಲಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಆರೋಪಿ ಪತಿ ನಂದಾನನ್ನು ಬಂಧಿಸಿದ್ದಾರೆ.
Advertisement
ಏನಿದು ಪ್ರಕರಣ?
ಪದ್ಮಾ ಮತ್ತು ನಂದಾ ಮದುವೆಯಾಗಿದ್ದು, ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಆರೋಪಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಐರುವಾರಾಂ ದಲಿತ್ವಾಡಾದಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಪದ್ಮಾ ಮಗಳು ಅನಾರೋಗ್ಯದಿಂದ ಬಳಲುತ್ತಿದ್ದಳು. ಹೀಗಾಗಿ ಪದ್ಮಾ ಆಕೆಯನ್ನು ಚಿತ್ತೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದರು. ಅಲ್ಲಿ ವೈದ್ಯರು ಪರೀಕ್ಷೆ ಮಾಡಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡುವಂತೆ ಸೂಚಿಸಿದ್ದಾರೆ. ಕೊನೆಗೆ ಪದ್ಮಾ ಮಗಳನ್ನು ಅಡ್ಮಿಟ್ ಮಾಡಿ ಇನ್ನೊಬ್ಬಳ ಮಗಳೊಂದಿಗೆ ಆಸ್ಪತ್ರೆಯಲ್ಲಿಯೇ ಉಳಿದುಕೊಂಡಿದ್ದರು.
Advertisement
Advertisement
ನಂದಾ ಭಾನುವಾರ ರಾತ್ರಿ ಆಸ್ಪತ್ರೆಗೆ ಕಂಠಪೂರ್ತಿ ಕುಡಿದು ಬಂದಿದ್ದಾನೆ. ಈ ವೇಳೆ ನಂದಾ ಪತ್ನಿ ಪದ್ಮಾ ಬಳಿ ಬಂದು ದೈಹಿಕ ಸಂಪರ್ಕ ಹೊಂದುವಂತೆ ಒತ್ತಾಯಿಸಿದ್ದಾನೆ. ಇದರಿಂದ ಆಘಾತಕ್ಕೊಳಗಾದ ಪದ್ಮಾ ಆತನಿಗೆ ಬೈದು ಹೊರಗೆ ಕಳುಹಿಸಿದ್ದಾರೆ. ಇದರಿಂದ ಕೋಪಗೊಂಡ ನಂದಾ ಆಸ್ಪತ್ರೆಯಲ್ಲಿ ಗಲಾಟೆ ಮಾಡಿದ್ದಾನೆ. ನಂತರ ಸೆಕ್ಯೂರಿಟಿ ಬಂದು ಆಸ್ಪತ್ರೆಯಿಂದ ಆತನನ್ನು ಹೊರಗೆ ಕಳುಹಿಸಿದ್ದಾನೆ.
Advertisement
ಕೊಲೆ ಪ್ರಯತ್ನ:
ನಂದಾ ಮತ್ತೆ ರಾತ್ರಿ ಸುಮಾರು 11 ಗಂಟೆಗೆ ಆಸ್ಪತ್ರೆಗೆ ಬಂದು ಮಾತನಾಡಬೇಕು ಎಂದು ಹೇಳಿ ಮಕ್ಕಳೊಂದಿಗಿದ್ದ ಪತ್ನಿಯನ್ನು ಟೆರೆಸಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಮತ್ತೆ ತನ್ನೊಂದಿಗೆ ಸೆಕ್ಸ್ ಮಾಡುವಂತೆ ಒತ್ತಾಯಿಸಿದ್ದಾನೆ. ಆಗಲೂ ಪತ್ನಿ ನಿರಾಕರಿಸಿದ್ದಾರೆ. ಇದರಿಂದ ಕೋಪಗೊಡ ನಂದಾ ಪದ್ಮಾ ಮೇಲೆ ಹಲ್ಲೆ ಮಾಡಿದ್ದಾನೆ. ಪರಿಣಾಮ ಪದ್ಮಾ ಪ್ರಜ್ಞಾಹೀನರಾಗಿ ಬಿದ್ದಿದ್ದಾರೆ. ಆದರೂ ಕಾಮುಕ ಪತಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ಆಕೆಯ ಸೀರೆಯಿಂದಲೇ ಕುತ್ತಿಗೆ ಹಿಸುಕಿ ಹೋಗಿದ್ದಾನೆ.
ಇತ್ತ ಪದ್ಮಾರ ಎರಡನೇ ಮಗಳು ತಾಯಿಯನ್ನು ಹುಡುಗಿಕೊಂಡು ಟೆರೆಸ್ ಮೇಲೆ ಬಂದಿದ್ದಾಳೆ. ಆಗ ತಾಯಿ ರಕ್ತಸ್ರಾವದಿಂದ ಪ್ರಜ್ಞೆಹೀನರಾಗಿ ಬಿದ್ದಿರುವುದನ್ನು ನೋಡಿದ್ದಾಳೆ. ತಕ್ಷಣ ಸಂಬಂಧಿಕರನ್ನು ಕರೆದಿದ್ದು, ಅವರು ಬಂದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರೀಕ್ಷೆ ಮಾಡಿದ ವೈದ್ಯರು ಸದ್ಯಕ್ಕೆ ಆಕೆ ಕೋಮಾಗೆ ಹೋಗಿದ್ದಾರೆ. ಆದರೂ ಬದುಕುವ ಸಾಧ್ಯತೆಗಳಿಲ್ಲ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದ ಚಿತ್ತೂರು ಪೊಲೀಸರು ಆಸ್ಪತ್ರೆಗೆ ಬಂದು ನಂದನನ್ನು ಬಂಧಿಸಿದ್ದಾರೆ. ಈ ವೇಳೆ ಸಂಬಂಧಿಕರು ಪೊಲೀಸರ ವಾಹನವನ್ನು ಅಡ್ಡಗಟ್ಟಿ ಆತನನ್ನು ತಮಗೆ ಒಪ್ಪಿಸುವಂತೆ ಗಲಾಟೆ ಮಾಡಿದ್ದಾರೆ. ಆಗ ಪೊಲೀಸರು ಪರಿಸ್ಥಿತಿಯನ್ನ ಶಾಂತಗೊಳಿಸಿ ಆತನನ್ನು ಕರೆದುಕೊಂಡಿದ್ದಾರೆ. ಸದ್ಯಕ್ಕೆ ಆತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.