ಬೆಂಗಳೂರು: ವಿಷ ಸೇವಿಸಿ ಗಂಡ-ಹೆಂಡತಿ (Husband-Wife) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು (Bengaluru) ಹೊರವಲಯದ ಬನ್ನೇರುಘಟ್ಟ ಜನತಾ ಕಾಲೋನಿಯಲ್ಲಿ ನಡೆದಿದೆ.
ಪ್ರಭು (38), ಲಕ್ಕಮ್ಮ (30) ಮೃತ ದುರ್ದೈವಿಗಳು. ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಜನತಾ ಕಾಲೋನಿಯಲ್ಲಿ ಘಟನೆ ನಡೆದಿದೆ. ಗಂಡ ಪ್ರಭು ಡ್ರೈವರ್ ಕೆಲಸ ಮಾಡುತ್ತಿದ್ದು, ಲಕ್ಕಮ್ಮ ಗಾರ್ಮೆಂಟ್ಸ್ ಕೆಲಸ ಮಾಡುತ್ತಿದ್ದರು. ಗಂಡ-ಹೆಂಡತಿ ವಾಸವಿದ್ದ ಮನೆಯಲ್ಲಿ ಕೆಟ್ಟ ವಾಸನೆ ಬರುತ್ತಿದ್ದರಿಂದ ಸ್ಥಳೀಯರು ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಜೂನ್ 8 ರಂದು ಸಂಜೆ ನರೇಂದ್ರ ಮೋದಿ ಪ್ರಮಾಣವಚನ
ದಂಪತಿ ಮೃತಪಟ್ಟು ಮೂರರಿಂದ ನಾಲ್ಕು ದಿನ ಕಳೆದಿರಬಹುದು ಎಂದು ಊಹಿಸಲಾಗಿದೆ. ವಿಶ್ವನಾಥ್ ಎಂಬವರ ಮನೆಯಲ್ಲಿ ದಂಪತಿ ಬಾಡಿಗೆಗಿದ್ದರು. ಘಟನಾ ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: 24 ವರ್ಷಗಳ ನಂತ್ರ ಅಧಿಕಾರ ಕಳೆದುಕೊಂಡ ಬಿಜೆಡಿ- ನವೀನ್ ಪಟ್ನಾಯಕ್ ರಾಜೀನಾಮೆ