ಬೆಂಗಳೂರು: ಅನೈತಿಕ ಸಂಬಂಧದಿಂದ ಒಂದೇ ವಾರದಲ್ಲಿ ಪತಿ ಹಾಗೂ ಪತ್ನಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಡೆದಿದೆ.
ಹರೀಶ್ ಹಾಗೂ ಶಿಲ್ಪ ಆತ್ಮಹತ್ಯೆ ಮಾಡಿಕೊಂಡ ದಂಪತಿ. ಸಣ್ಣ ಪುಟ್ಟ ಬ್ಯುಸಿನೆಸ್ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಹರೀಶ್‍ಗೆ ಮದುವೆಯಾಗಿ ಆಗಲೇ ಹತ್ತರ ಆಸುಪಾಸು ಆಗಿದೆ. ಜೊತೆಗೆ ಮುದ್ದಾದ ಒಬ್ಬಳು ಮಗಳು ಕೂಡ ಇದ್ದಳು. ಆದ್ರೆ ಹರೀಶ್ ತನ್ನ ಗೆಳೆಯ ರೇವಣ್ಣನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದನು.
ಕಳೆದ ಎರಡು ವರ್ಷಗಳಿಂದ ಗೆಳೆಯ ರೇವಣ್ಣನ ಪತ್ನಿ ಶಾಲಿನಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನುವ ಕಾರಣಕ್ಕೆ ಸಾಕಷ್ಟು ಗಲಾಟೆಗಳು ನಡೆದಿತ್ತು. ಆದರೆ ಇತ್ತೀಚಿಗೆ, ರೇವಣ್ಣನ ಪತ್ನಿ ಶಾಲಿನಿಗೆ ಹರೀಶ್ ಬಿಟ್ಟಿರುವುದಕ್ಕೆ ಆಗಲ್ಲ ಎನ್ನುವ ಸ್ಥಿತಿ ಎದುರಾಗಿದೆ. ಹೀಗಾಗಿ ಓಡಿ ಹೋಗುವ ಲೆಕ್ಕಾಚಾರಕ್ಕೆ ಬಂದಿದ್ದರು. ಈ ಮಧ್ಯೆ ರೊಚ್ಚಿಗೆದ್ದ ಶಾಲಿನಿ ಪತಿ ರೇವಣ್ಣ, ಹರೀಶ್ ನನ್ನು ಕರೆಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾನೆ. ಅಲ್ಲದೇ ಕೊಲೆ ಬೆದರಿಕೆ ಕೂಡ ಹಾಕಿದ್ದಾನೆ.
ಇದರಿಂದ ಹರೀಶ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾನೆ. ಈ ಹಿನ್ನೆಲೆ ಹರೀಶ್ ಬೆಂಗಳೂರು ಬಿಟ್ಟು ತವರೂರಿಗೆ ಹೋಗಿದ್ದನು. ಆದರೆ ಮಾನಸಿಕ ನೋವು ತಾಳಲಾಗದೆ ಅಕ್ಟೋಬರ್ 1ರಂದು ಆತ್ಮಹತ್ಯೆ ಮಾಡಿಕೊಂಡಿದ್ದ.
ಹರೀಶ್‍ನ ಆತ್ಮಹತ್ಯೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಹರೀಶ್ ಪತ್ನಿ ಶಿಲ್ಪ ಕೂಡ ಊಟ ಬಿಟ್ಟು ಕುಳಿತಿದ್ದ ಜಾಗದಲ್ಲೇ ಕುಳಿತಿದ್ದಳು. ಅಲ್ಲದೇ ಎಲ್ಲರ ಜೊತೆಗೆ ಮಾತನಾಡೋದು ಕೂಡ ಬಿಟ್ಟಿದ್ದು, ಗುರುವಾರ ಬೆಳಗ್ಗೆ ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇವರಿಬ್ಬರ ಈ ಆತ್ಮಹತ್ಯೆಗೆ ಏಳು ವರ್ಷ ವಯಸ್ಸಿನ ಮಗುವೊಂದು ತಂದೆ-ತಾಯಿ ಇಲ್ಲದೆ ತಬ್ಬಲಿ ಆಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv