ಚಿತ್ರದುರ್ಗ: ಗಂಡನ ಮನೆಯವರ ಕಾಟಕ್ಕೆ ಬಾಣಂತಿ ಹಾಗೂ ನಾಲ್ಕು ದಿನದ ಹಸುಗೂಸು ಬೀದಿಪಾಲಾಗಿರುವ ಅಮಾನವೀಯ ಘಟನೆ ಕೋಟೆನಾಡಿನಲ್ಲಿ ಬೆಳಕಿಗೆ ಬಂದಿದೆ.
ನೆಲಗೇತನಹಟ್ಟಿ ನಿವಾಸಿ ಶಾರದಮ್ಮ ಎಂಬ ಮಹಿಳೆ ತನ್ನ ಪುಟ್ಟ ಕಂದಮ್ಮ ಜೊತೆ ಕಂಗಾಲಾಗಿ ಬೀದಿಯಲ್ಲಿ ನಿಂತಿದ್ದಾರೆ. ಕುಟುಂಬದ ವಿರೋಧದ ನಡುವೇ ಹಿರೇಹಳ್ಳಿ ನಿವಾಸಿ ಮಲ್ಲಿಕಾರ್ಜುನ್ ಎಂಬಾತನನ್ನು ಶಾರದಮ್ಮ ಪ್ರೀತಿಸಿ ಮದುವೆಯಾಗಿದ್ದರು. ನಾಲ್ಕು ದಿನಗಳ ಹಿಂದೆ ಶಾರದಮ್ಮ ಗಂಡು ಮಗುವಿಗೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಜನ್ಮ ನೀಡಿದ್ದಾರೆ. ನಾರ್ಮಲ್ ಡೆಲಿವರಿ ಆಗಿದ್ದರಿಂದ ಜಿಲ್ಲಾಸ್ಪತ್ರೆ ವೈದ್ಯರು ಶಾರದಮ್ಮ ಹಾಗೂ ಮಗುವನ್ನು ಡಿಸ್ಚಾರ್ಜ್ ಮಾಡಿದ್ದಾರೆ. ಆದರೆ ಗಂಡ ಬರುವ ತನಕ ಮನೆಗೆ ಬರಬೇಡ ಅಂತ ಅತ್ತೆ ಮನೆಯವರ ವಿರೋಧಿಸಿದಕ್ಕೆ ಬಾಣಂತಿ ಹಾಗೂ ಮಗು ಬೀದಿಪಾಲಾಗಿದ್ದಾರೆ.
Advertisement
Advertisement
ಹೆಂಡತಿ ಮಗುವನ್ನು ನೋಡಲು ಬಾರದೇ ಗಂಡ ಮಲ್ಲಿಕಾರ್ಜುನ್ ನಾಪತ್ತೆಯಾಗಿದ್ದು, ಇತ್ತ ತವರು ಮನೆಯೂ ಇಲ್ಲ, ಅತ್ತ ಗಂಡನ ಮನೆಯೂ ಇಲ್ಲವೆಂದು ದಾರಿ ಕಾಣದೇ ದೇವಸ್ಥಾನದಲ್ಲಿ ಮಗುವಿನೊಂದಿಗೆ ಶಾರದಮ್ಮ ಇದ್ದಾರೆ. ಸದ್ಯ ಚಳ್ಳಕೆರೆ ಆಸ್ಪತ್ರೆಯಲ್ಲಿರುವ ಬಾಣಂತಿ, ತನ್ನ ಗಂಡ ಯಾಕೆ ನೋಡಲು ಬಂದಿಲ್ಲ ಎಂಬುದೇ ತಿಳಿಯದೇ ಕಂಗಾಲಾಗಿ ಕಣ್ಣೀರಿಡುತ್ತಿದ್ದಾರೆ. ಗಂಡ ಬಾರದೇ ಇದ್ದರೆ ಮುಂದೇನು ಗತಿಯೆಂದು ತಾಯಿ ಮಗು ಆತಂಕದಲ್ಲಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv