– ಲೊಟ್ಟೆಗೊಳ್ಳಹಳ್ಳಿಯಲ್ಲಿ ಬಹುಕೋಟಿ ಭೂಹಗರಣ ಪ್ರಸ್ತಾಪ
ಬೆಂಗಳೂರು: ವಿಪಕ್ಷ ನಾಯಕ ಆರ್. ಅಶೋಕ್ (R Ashoka) ವಿರುದ್ಧ ಗೃಹ ಸಚಿವ ಡಾ.ಜಿ ಪರಮೇಶ್ವರ್ (G Parameshwar) ಅವರು, ನೂರಾರು ಕೋಟಿ ಭೂಹಗರಣದ (Land Scam) ಬಾಂಬ್ ಸಿಡಿಸಿದ್ದಾರೆ.
ಗೃಹ ಸಚಿವ ಡಾ.ಜಿ ಪರಮೇಶ್ವರ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ ಪಾಟೀಲ್, ಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಅವರ ಸಮ್ಮುಖದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ವೇಳೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ವಿರುದ್ಧ ಭೂ ಅಕ್ರಮದ ಆರೋಪ ಮಾಡಿ ದಾಖಲೆ ಬಿಡುಗಡೆ ಮಾಡಿದರು. ಇದನ್ನೂ ಓದಿ: ICC Test Ranking | ಅಶ್ವಿನ್ ಹಿಂದಿಕ್ಕಿ ನಂ.1 ಪಟ್ಟಕ್ಕೇರಿದ ಬುಮ್ರಾ – ಬ್ಯಾಟಿಂಗ್‌ನಲ್ಲಿ ಯಶಸ್ವಿ, ಕೊಹ್ಲಿ ಶೈನ್
ಕಳೆದ ಕೆಲ ದಿನಗಳಿಂದ ಮುಡಾ ಬಗ್ಗೆ ಚರ್ಚೆಯಾಗ್ತಿದೆ. ಮುಖ್ಯಮಂತ್ರಿಗಳ ಪತ್ನಿ ಮುಡಾಗೆ ನಿವೇಶನಗಳನ್ನ ವಾಪಸ್ ಮಾಡಿದ್ದಾರೆ. ಆದರೂ ಬಿಜೆಪಿಯ ಮುಖಂಡರು ವಾಪಸ್ ಕೊಟ್ಟಿರೋದೆ ಸರಿಯಿಲ್ಲ. ತಪ್ಪನ್ನ ಒಪ್ಪಿಕೊಂಡಂತಾಯ್ತು ಅಂತಾ ಬೇರೆ ಬೇರೆ ಅರ್ಥದಲ್ಲಿ ಮಾತಾಡ್ತಿದ್ದಾರೆ. ಆದ್ರೆ ವಿಪಕ್ಷ ನಾಯಕ ಆರ್. ಅಶೋಕ್ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಮಾಡಿರೋದೆ ತಪ್ಪು. ಸರ್ಕಾರದ ಜಾಗ ಕಬಳಿಸಿ ಒಪ್ಪಿಕೊಂಡಾಯ್ತು ಅಂತಾ ಅವರದೇ ಭಾಷೆಯಲ್ಲಿ ಮಾತಾಡಿದ್ದಾರೆ. ಅವರ ಅವಧಿಯಲ್ಲಾದ ಹಗರಣದ ಬಗ್ಗೆ ರಾಜ್ಯದ ಜನ್ರ ಮುಂದಿಡೋಕೆ ಬಂದಿದ್ದೀವಿ ಎಂದು ಹೇಳಿದರು. ಇದನ್ನೂ ಓದಿ: 200ನೇ ವಿಜಯೋತ್ಸವ ಆಚರಣೆ – ಕಿತ್ತೂರು ಉತ್ಸವ ಜ್ಯೋತಿಗೆ ಸಿಎಂ ಚಾಲನೆ
ಲೊಟ್ಟೆಗೊಲ್ಲಹಳ್ಳಿಯಲ್ಲಿ ನೂರಾರು ಕೋಟಿ ಜಮೀನಿನ ಹಗರಣವಾಗಿದೆ. ದಾಖಲಾತಿ ಸಮೇತ ಮಂಡಿಸೊ ಕೆಲಸ ಮಾಡ್ತಿದ್ದೇವೆ. ಲೊಟ್ಟೆಗಲ್ಲಹಳ್ಳಿ ಸರ್ವೆ ನಂ 11 , ಎಫ್-1 ರಲ್ಲಿ ಬಿಡಿಎ 24-02-77 ಪ್ರಾಥಮಿಕ ಅಧಿಸೂಚನೆ ಹೊರಡಿಸುತ್ತೆ. 31-08-78 ರಲ್ಲಿ ಮತ್ತೊಂದು ಫೈನಲ್ ನೋಟಿಫಿಕೇಷನ್ ಆಗುತ್ತೆ. 26-02-2003 ರಲ್ಲಿ ಹಾಗೂ 2007 ರಲ್ಲಿ ಈ ಜಮೀನನ್ನ ಮೂಲ ಮಾಲೀಕತ್ವ ಯಾರದಿತ್ತು? ಬಿಡಿಎ ಅಧಿಸೂಚನೆ ಹೊರಡಿಸುವ ಮೊದಲು ರಾಮಸ್ವಾಮಿ ಅನ್ನೋರ ಮಾಲೀಕತ್ವದಲ್ಲಿರುತ್ತೆ. 1978 ರಿಂದ 2003ರ ವರಗೆ ಬಿಡಿಎ ಸ್ವಾಧೀನದಲ್ಲಿ ಜಮೀನು ಇತ್ತು. ಆರ್.ಅಶೋಕ್, 2007ರಲ್ಲಿ ಶುದ್ಧಕ್ರಯಕ್ಕೆ ಖರೀದಿ ಮಾಡಿದರು. ರಾಮಸ್ವಾಮಿಯಿಂದ 32 ಕುಂಟೆ ಖರೀದಿ ಮಾಡಿದರು. ಆದ್ರೆ ರಾಮಸ್ವಾಮಿ ಮಾಲೀಕನೆ ಅಲ್ಲ, ಆ ಭೂಮಿ ಬಿಡಿಎ ಸ್ವಾಧೀನದಲ್ಲಿರುತ್ತೆ ಎಂದು ಆರೋಪ ಮಾಡಿದ್ದಾರೆ.
2009ರ ಅಕ್ಟೋಬರ್ 1ಕ್ಕೆ ಡಿನೋಟಿಫೈ ಮಾಡಿಕೊಡಿ ಅಂತಾ ರಾಮಸ್ವಾಮಿಯಿಂದ ಸರ್ಕಾರಕ್ಕೆ ಅರ್ಜಿ ಸಲ್ಲಿಸುತ್ತಾರೆ. ಅಶೋಕ್ ಹಾಗೂ ರಾಮಸ್ವಾಮಿ ಮಾಲೀಕರೇ ಅಲ್ಲ. ಆದ್ರೂ ಅರ್ಜಿ ಸಲ್ಲಿಸ್ತಾರೆ, ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕೂಡಲೇ ಮಂಡಿಸಿ ಅಂತ ಷರಾ ಬರೀತಾರೆ. ಎರಡೇ ತಿಂಗಳಲ್ಲೇ ಅಂದಿನ ಮುಖ್ಯಮಂತ್ರಿಗಳು ಡಿನೋಟಿಫಿಕೇಷನ್ ಮಾಡಿಕೊಡ್ತಾರೆ. ಆ ನಂತ್ರ ನಿವೃತ್ತ ವಿಂಗ್ ಕಮಾಂಡರ್ ಜಿವಿ ಅತ್ರಿ ಲೋಕಾಯುಕ್ತಕ್ಕೆ ಅರ್ಜಿ ಹಾಕುತ್ತಾರೆ. ವಿಚಾರ ಕೋರ್ಟ್‌ಗೆ ಹೋಗುತ್ತೆ. ಆಗ ಅಶೋಕ್ ವಾಪಸ್ ಕೊಡುವ ತೀರ್ಮಾನ ತಗೊತಾರೆ. 26-08 -2011 ರಂದು ರಿಜಿಸ್ಟರ್ ಗಿಫ್ಟ್ ಮೂಲಕ ಬಿಡಿಎಗೆ ಭೂಮಿ ಹಿಂತಿರುಗಿಸುತ್ತಾರೆ. ಓನರ್‌ಶಿಪ್ ಇಲ್ಲದೇ ಅಶೋಕ್ ಗಿಫ್ಟ್ ಬಿಡಿಎಗೆ ನೀಡಿದ್ದಾರೆ ಎಂದು ಹಳೆಯ ಪ್ರಕರಣವೊಂದನ್ನ ಬಯಲು ಮಾಡಿದರು.
ಆ ನಂತರ ಅತ್ರಿಯವರು ಹೈಕೋರ್ಟ್ ಅರ್ಜಿ ಹಾಕ್ತಾರೆ, ಕ್ರಿಮಿನಲ್ ಕೇಸ್ ಹಾಕಬೇಕು ಅನ್ನೋದು ಬೇಕಾಗಿಲ್ಲ, ಅಂತಾ ಹೈಕೋರ್ಟ್‌ನಿಂದ ತೀರ್ಪು ಬರುತ್ತೆ. ವಾಪಸ್ ಕೊಟ್ಟಿಬಿಟ್ಟರಲ್ಲ ಕೇಸ್ ಬೇಕಾಗಿಲ್ಲ ಅಂತಾ ಜಡ್ಜ್ ಮೆಂಟ್ ಬರುತ್ತೆ. ಈಗ ಸಿಎಂ ಪತ್ನಿ ಸೈಟು ವಾಪಸ್ ಮಾಡಿದಾಗ ಮಾತನಾಡುವವರು ಹಿಂದೆ ಮಾಡಿದ್ದೇನು? ಇದು ಎಷ್ಟರಮಟ್ಟಿಗೆ ನ್ಯಾಯ? ಕಬಳಿಸಿರೋದು, ಕಳ್ಳತನ ಮಾಡಿರೋದು ಅಂತಾ ಹೇಳಿದ್ರಿ, ನಾವು ನಿಮಗೆ ಅವರದ್ದೇ ಭಾಷೆಯಲ್ಲಿ ಹೇಳ್ಬೇಕಾಗುತ್ತೆ ಎಂದು ಸಚಿವ ಪರಮೇಶ್ವರ್ ಬಾಂಬ್ ಸಿಡಿಸಿದರು. ಇದನ್ನೂ ಓದಿ: ‘ಪ್ರೇಮಲು’ ಬ್ಯೂಟಿಗೆ ಜಾಕ್‌ಪಾಟ್- ‘ದಳಪತಿ 69’ ಸಿನಿಮಾದಲ್ಲಿ ಮಮಿತಾ ಬೈಜು